ಧೀರ ಸಾಮ್ರಾಟ್ ಚಿತ್ರದ ಹಾಡು ಬಿಡುಗಡೆ ಮಾಡಿದ ನಟ ದೃವ ಸರ್ಜಾ

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರಸಾಮ್ರಾಟ್’ ಚಿತ್ರ ತೆರೆಗೆ ಬರುವ ಹಂತ ತಲುಪಿದೆ. ‘ಏನ್ ಚಂದ ಕಾಣಿಸ್ತಾವಳೆ’ ಸಾಲಿನ ಹಾಡನ್ನು ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ರಾಕೇಶ್ ಬಿರದಾರ್, ಅದ್ವಿತಿಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ, ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್‍ಕುಮಾರ್ (ಪಚ್ಚಿ) ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುವ ಜತೆಗೆ ನೋಡುಗರು ಇಷ್ಟಪಡುವಂತಹ ನಕರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾರೆ.


ನಿರ್ದೇಶಕ ಪವನ್ ಕುಮಾರ್, ನಮ್ಮ ಸಿನಿಮಾ ಮಹೂರ್ತಕ್ಕೆ ಬಂದು, ಈಗ ಎಷ್ಟೇ ಬ್ಯುಸಿ ಇದ್ದರೂ, ಶೂಟಿಂಗ್‍ಗೆ ಬ್ರೇಕ್ ಮಾಡಿ ಹಾಡನ್ನು ಬಿಡುಗಡೆ ಮಾಡಿರುವುದು ಎಲ್ಲರ ಅಚ್ಚುಮೆಚ್ಚಿನ ಧ್ರುವಸರ್ಜಾ, ಸ್ನೇಹಕ್ಕೆ ಸಾಹುಕಾರ ಎಂದೇ ಹೇಳಬಹುದು. ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ ಎಂದರು.
ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ಕೊನೆತನಕ ಕುತೂಹಲ ಕಾಯ್ದರಿಸಿದ್ದು, ಕ್ಲೈಮಾಕ್ಸ್‍ನಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ. ಒಂದು ಏಳೆ ಬಿಟ್ಟುಕೊಟ್ಟರೂ ಸಿನಿಮಾದ ಸಾರಾಂಶ ತಿಳಿಯುತ್ತದೆ. ಪ್ರಶ್ನೆ ಎನ್ನುವಂತೆ ‘ಸಾವಿಗೆ ಸಾವಿಲ್ಲ’ ಅಂತ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂದಿಸದೆ ಸಮಾಜದಲ್ಲಿ ಯಾವುದೋ ಒಂದು ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ ಎಂಬುದಾಗಿ ಮಾಹಿತಿಯನ್ನು ತೆರೆದಿಟ್ಟು ಮಾಧ್ಯಮದ ಸಹಕಾರ ಕೋರಿದರು.

ತನ್ವಿ ಪ್ರೊಡಕ್ಷನ್ ಹೌಸ್ ಮುಖಾಂತರ ನಿರ್ಮಾಣ ಮಾಡಲಾಗಿದೆ. ಧೀರ ಸಾಮ್ರಾಟ್ ಅಂದರೆ ಏನು ಯಾತಕ್ಕೆ ಇಡಲಾಗಿದೆ. ಕೊನೆಯಲ್ಲಿ ಯಾರು ಎಂಬುದು ತಿಳಿಯಲಿದೆ ಎಂದು ಗುಲ್ಬರ್ಗಾದ ಗುರುಬಂಡಿ ಹೇಳಿದರು. ನಾಯಕ ರಾಕೇಶ್‍ಬಿರದಾರ್, ನಾಯಕಿ ಅದ್ವಿತಿಶೆಟ್ಟಿ ಪಾತ್ರದ ವಿವರವನ್ನು ಗೌಪ್ಯವಾಗಿಟ್ಟರು
ನಟ ಧ್ರುವಸರ್ಜಾ ಮಾತನಾಡಿ ಸಿನಿಮಾ ಅಣ್ಣ ಚಿರಂಜೀವಿಸರ್ಜಾ ಹುಟ್ಟುಹಬ್ಬದಂದು ಸೆಟ್ಟೇರಬೇಕಾಗಿತ್ತು, ಕಾರಣಾಂತರದಿಂದ 2020ಕ್ಕೆ ಮುಂದೂಡಲಾಯಿತು. ನಿರ್ದೇಶಕರು ಹೇಳಿದರು. ನಾವೆಲ್ಲರು ಹೊಸಬರು ಅಂತ. ನಾನು ‘ಅದ್ದೂರಿ’ ಮಾಡಿದಾಗ ಹೊಸಬನಾಗಿದ್ದೆ. ಅಂದು ಪವನ್‍ಗೆ ವಾಹಿನಿಯಲ್ಲಿ ಜಾಸ್ತಿ ಸಲ ಹಾಡನ್ನು ಪ್ರಸಾರ ಮಾಡು ಎಂದು ದುಂಬಾಲು ಬಿದ್ದಿದ್ದೆ.

ನಮ್ಮದು ಹೋಗೋ ಬಾರೋ ಗೆಳತನ. ಆ ಸಮಯದಲ್ಲಿ ಸಾಕಷ್ಟು ಜನರು ಪೆÇ್ರೀತ್ಸಾಹ ಕೊಟ್ಟಿದ್ದರು. ಅದರಲ್ಲಿ ಪವನ್ ಕೂಡ ಒಬ್ಬರು. ಈಗ ಅವರ ಪ್ರಥಮ ನಿರ್ದೇಶನದ ಚಿತ್ರ ಎಂದಾಗ ಅವರಿಗೆ ಪೆÇ್ರೀತ್ಸಾಹ ಕೊಡುವುದು ನಮ್ಮ ಕರ್ತವ್ಯವಾಗಿದೆ. ಅದರಲ್ಲೂ ಹೆಚ್ಚಾಗಿ ಗೆಳೆಯ. ಹೊಸಬರಿಗೆ ಉತ್ತೇಜನ ನೀಡಿ ಅಂತ ಕೇಳಿಕೊಳ್ಳುತ್ತೇನೆ. ಅವರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಇಂತಹವರನ್ನು ಬೆಳಸಿದರೆ ಪ್ರೇರೆಪಿಸಿದಂತೆ ಮತ್ತು ಅವರ ಕಲೆಗೆ ಬೆಲೆ ಕೊಟ್ಟಂತೆ ಆಗುತ್ತದೆ. ನಾಯಕ ಚೆನ್ನಾಗಿ ಕುಣಿದಿದ್ದಾರೆ. ಅದಕ್ಕೆ ಕಾರಣ ನನ್ನ ಫೇವರೇಟ್ ಡ್ಯಾನ್ಸ್ ಮಾಸ್ಟರ್ ಮುರಳಿ. ಪವನ್ ತಾಯಿ ವರ್ಷಕ್ಕೆ ಆಗುವಷ್ಟು ಬಿರಿಯಾನಿ ತಿನ್ನಿಸುತ್ತಾರೆ. ಎಲ್ಲರೂ ಸಾಂಗ್ ನೋಡಿ ಹೊಸಬರನ್ನು ಬೆಳಸಿರಿ ಎಂದು ಮಾತಿಗೆ ವಿರಾಮ ಹಾಕಿದರು.

ತಾರಾಗಣದಲ್ಲಿ ಶೋಭರಾಜ್, ನಾಗೇಂದ್ರಅರಸು, ಬಲರಾಜವಾಡಿ, ರಮೇಶ್‍ಭಟ್, ಯತಿರಾಜ್, ಮನಮೋಹನ್‍ರೈ, ಇಂಚರ, ಸಂಕಲ್ಪ್‍ಪಾಟೀಲ್ ರವಿರಾಜ್, ಜ್ಯೋತಿಮರೂರು, ಶಂಕರ್ ಭಟ್, ಮಂಡ್ಯ ಚಂದ್ರು, ಗಿರಿಗೌಡ, ಪ್ರೇಮ, ಹರೀಶ್‍ಅರಸ್. ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ.
ಭರ್ಜರಿಚೇತನ್, ಡಾ.ಎನ್.ನಾಗೇಂದ್ರಪ್ರಸಾದ್ ಸಾಹಿತ್ಯದ ಒಟ್ಟು ನಾಲ್ಕು ಹಾಡುಗಳಿಗೆ ರಾಘವ್‍ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀರೇಶ್.ಎನ್.ಟಿ.ಎ-ಅರುಣ್‍ಸುರೇಶ್, ಸಂಕಲನ ಸತೀಶ್‍ಚಂದ್ರಯ್ಯ, ಹಿನ್ನಲೆ ಶಬ್ದ ವಿನುಮನಸು, ಸಂಭಾಷಣೆ ಎ.ಆರ್.ಸಾಯಿರಾಮ್, ಸಾಹಸ ಕೌರವವೆಂಕಟೇಶ್, ನೃತ್ಯ ಮುರಳಿ-ಕಿಶೋರ್-ಸಾಗರ್ ಅವರದಾಗಿದೆ. ಬೆಂಗಳೂರು, ಕನಕಪುರ, ನೆಲಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.