Raghavendra Stores movie is successful Film crew, distributors are happy

ರಾಘವೇಂದ್ರ ಸ್ಟೋರ್ಸ್ ಚಿತ್ರ ಯಶಸ್ವಿ : ಚಿತ್ರತಂಡ, ವಿತರಕರ ಸಂತಸ - CineNewsKannada.com

ರಾಘವೇಂದ್ರ ಸ್ಟೋರ್ಸ್ ಚಿತ್ರ ಯಶಸ್ವಿ :  ಚಿತ್ರತಂಡ, ವಿತರಕರ ಸಂತಸ

ಕಳೆದವಾರ ಬಿಡುಗಡೆಯಾಗಿದ್ದ “ರಾಘವೇಂದ್ರ ಸ್ಟೋರ್” ಚಿತ್ರ ರಾಜ್ಯದ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರತಂಡದ ಮುಖದಲ್ಲಿ ಗೆಲುವಿನ ಮಂದಹಾಸ ಮೂಡಿಸಿದೆ.

ಹಿರಿಯ ನಟ ಜಗ್ಗೇಶ್ ಅಭಿನಯದ ಮತ್ತೊಂದು ಹಾಸ್ಯ ಪ್ರದಾನ ಆಧರಿತ ವಿಭಿನ್ನ ಚಿತ್ರ. ಸಿನಿಮಾ ನೋಡಿ ಎಲ್ಲಾ ವರ್ಗದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಸಹಜವಾಗಿ ಚಿತ್ರದಲ್ಲಿ ನಟಿಸಿರುವ ಕಲಾವಿದರು, ನಿರ್ಮಾಪಕರು ಮತ್ತು ವಿತರರ ಖುಷಿಗೆ ಕಾರಣವಾಗಿದೆ.
ಯಶಸ್ವಿ ಕಮರ್ಷಿಯಲ್ ಚಿತ್ರಗಳನ್ನು ನೀಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ ಚಿತ್ರಕ್ಕೆ ಜನರು ಐಪಿಎಲ್ ಮತ್ತು ವಿಧಾನಸಭೆ ಚುನಾವಣೆ ಕಾವು ಇದ್ದರೂ ಲೆಕ್ಕಿಸದೆ ಒಳ್ಳೆಯ ಚಿತ್ರ ನೋಡಿ ಖುಷಿಪಟ್ಟಿದ್ದಾರೆ.

ವಿಜಯ್ ಕಿರಂಗದೂರ್ ನಿರ್ಮಾಣ ಮಾಡಿರುವ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಮೂಲಕ ಚಿತ್ರದ ಯಶಸ್ಸಿನ ಬಹುಪಾಲು ಶ್ರೇಯ ವಿತರಕರಾದ ಕೆಆರ್ ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರಿಗೆ ಸಂದಿದೆ. ಕೆಆರ್‍ಜಿ ಸ್ಟುಡಿಯೋ ಕೈ ಹಾಕಿದ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತಿರುವುದು ಸಂಸ್ಥೆಗೆ ಸೇರಿದ ಮತ್ತೊಂದು ಹೆಗ್ಗಳಿಕೆ.
ಹಿರಿಯ ನಟ ಜಗ್ಗೇಶ್ ಮಾತನಾಡಿ, ತಮ್ಮ 40 ವರ್ಷದ ಚಿತ್ರರಂಗದ ಜೀವನದಲ್ಲಿ ಹೊಸ ಮತ್ತು ವಿಭಿನ್ನ ಅನುಭವ ನೀಡುವ ಚಿತ್ರ ರಾಘವೇಂದ್ರ ಸ್ಟೋರ್ಸ್, ಹಾಸ್ಯದ ಜೊತೆಗೆ ಕಮರ್ಷಿಯಲ್ ಚಿತ್ರ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.ಇದು ಖುಷಿಯ ಸಂಗತಿ. ಎಲೆಕ್ಷನ್, ಐಪಿಎಲ್ ನಡುವೆಯೂ ಚಿತ್ರಮಂದಿರಕ್ಕೆ ಜನರ ಬರುತ್ತಿರುವುದು ಸಂತಸ ತಂದಿದೆ ಎಂದು ಅವರು ಮಾಹಿತಿ ಹಂಚಿಕೊಂಡರು.

ನಿರ್ದೇಶಕ ಸಂತೋಷ್ ಆನಂದ್ ರಾಮ್, ಕಮರ್ಷಿಯಲ್ ಚಿತ್ರದ ಮಾಡಿ ಯಶಸ್ಸು ಗಳಿಸಿದ್ದ ನಡುವೆ ರಾಘವೇಂದ್ರ ಸ್ಟೋರ್ ವಿಭಿನ್ನ ಚಿತ್ರ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಮ್ಮ ನಿರೀಕ್ಷೆ ನಿಜವಾಗಿದೆ ಎಂದು ಹೇಳಿದರು.
ನಟಿ ಶ್ವೇತಾ ಶ್ರೀವಾತ್ಸವ , ಯಶಸ್ವಿ ಚಿತ್ರದ ಭಾಗವಾಗಿರುವು ಖುಷಿ ಕೊಟ್ಟಿದೆ. ಚಿತ್ರ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಚಿತ್ರದ ಬಗ್ಗೆ ಹಿರಿಯ ನಟ ದತ್ತಣ್ಣ, ಕಲಾವಿದರಾದ ಮಿತ್ರ, ರವಿಶಂಕರ್ ಗೌಡ, ಚಿತ್ಕಳಾ ಬಿರಾದಾರ್ ಸೇರಿದಂತೆ ಹಲವರು ಚಿತ್ರದ ಯಶಸ್ಸಿಗೆ ಖುಷಿ ಹಂಚಿಕೊಂಡರು. ಚಿತ್ರ ತಂಡದ ಎಲ್ಲಾ ಸದಸ್ಯರ ಮುಖದಲ್ಲಿ ಗೆಲುವಿನ ಮಂದಹಾಸ ಮನೆ ಮಾಡಿತ್ತು.

ವಿತರಕರ ಮುಖದಲ್ಲಿ ಗೆಲುವಿನ ಖಷಿ

ಕೆ ಆರ್ ಜಿ ಸಂಸ್ಥೆಯ ಪಾಳುದಾರರಲ್ಲಿ ಒಬ್ಬರಾದ ವಿತರಕ ಯೋಗಿ ಜಿ ರಾಜ್ ,ರಾಘವೇಂದ್ರ ಸ್ಟೋರ್ ಚಿತ್ರಕ್ಕೆ ರಾಜ್ಯಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲಿಯೂ ಮನೆ ಮಂದಿಯಲ್ಲಾ ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ .ರಾಜ್ಯ ವಿಧಾನಸಭೆ ಚುನಾವಣೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‍ನ ನಡುವೆ ಚಿತ್ರಮಂದಿರಕ್ಕೆ ಜನರನ್ನು ರಾಘವೇಂದ್ರ ಸ್ಟೋರ್ ಕರೆತರುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ರಾಜ್ಯದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಂತಸದ ಸಂಗತಿ ಎಂದು ಹೇಳಿದ್ದಾರೆ.

ಐಪಿಎಲ್, ಎಲೆಕ್ಷನ್ ಏನೇ ಇದ್ದರೂ ಹಿರಿಯ ನಾಗರಿಕರು ಸೇರಿದಂತೆ ಜನರು ಬಯಸುವುದು ಮನರಂಜನೆಯನ್ನು ನಾವು ರಾಘವೇಂದ್ರ ಸ್ಟೋರ್ ಚಿತ್ರದ ಮೂಲಕ ನೀಡಿದ್ದೇವೆ ಎನ್ನುವ ಖುಷಿಯೂ ಇದೆ. ಒಳ್ಳೆಯ ಚಿತ್ರ ನೀಡಿದರೆ ಜನರ ಯಾವತ್ತೂ ಕೈಬಿಡುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮಲ್ಟಿಪ್ಲೆಕ್ ಸೇರಿದಂತೆ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿದ್ದಾರೆ.


ಇನ್ನು ನಮ್ಮದೇ ಸಂಸ್ಥೆಯಲ್ಲಿ ಡಾಲಿ ಧನಂಜಯ ಅವರ ಜೊತೆ ರತ್ನನ್ ಪ್ರಪಂಚ, ಗುರುದೇವ್ ಹೊಯ್ಸಳ ಚಿತ್ರದ ಬಳಿಕ ಮೂರನೇ ಚಿತ್ರ “ ಉತ್ತರ ಖಾಂಡ” ಚಿತ್ರವನ್ನು ಜೂನ್ ಅಥವಾ ಜಲೈ ತಿಂಗಳಲ್ಲಿ ಚಿತ್ರೀಕರಣ ಆರಂಭಿಸುವ ಉದ್ದೇಶ ಇದೆ. ಇದಕ್ಕಾಗಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ನಿರ್ಮಾಪಕರೂ ಆಗಿರುವ ಯೋಗಿ ಜಿ,ರಾಜ್ ಹೇಳಿದ್ದಾರೆ

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin