Directed by Kinnal Raj, "Sinharupini" releases on October 17

ಕಿನ್ನಾಳ್ ರಾಜ್ ನಿರ್ದೇಶನದ “ಸಿಂಹರೂಪಿಣಿ” ಅಕ್ಟೋಬರ್ 17ಕ್ಕೆ ಬಿಡುಗಡೆ - CineNewsKannada.com

ಕಿನ್ನಾಳ್ ರಾಜ್ ನಿರ್ದೇಶನದ “ಸಿಂಹರೂಪಿಣಿ” ಅಕ್ಟೋಬರ್ 17ಕ್ಕೆ ಬಿಡುಗಡೆ

ಶ್ರೀ ಮಾರಮ್ಮ ದೇವಿ ಕುರಿv ಭಕ್ತಿಪ್ರಧಾನ ಚಿತ್ರ ‘ಸಿಂಹರೂಪಿಣಿ’ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಇದೇ ತಿಂಗಳ ಅಕ್ಟೋಬರ್ 17 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ

ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀಚಕ್ರ ಫಿಲಂಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ. ‘ಕೆಜಿಎಫ್’ ‘ಸಲಾರ್’ ಮುಂತಾದ ಹಿಟ್ ಸಿನಿಮಾಗಳಿಗೆ ಹಾಡುಗಳನ್ನು ಬರೆದಿರುವ ಕಿನ್ನಾಳ್‍ರಾಜ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ‘ಮಾಳು ನಿಪ್ನಾಳ್ ಮ್ಯೂಸಿಕ್ ಸಂಸ್ಥೆ’ಂiÀ ಅಧಿಕ ಬೆಲೆ ನೀಡಿ ಆಡಿಯೋ ಹಕ್ಕು ಖರೀದಿ ಮಾಡಿದೆ.

ಕಳೆದ ತಿಂಗಳು ಪಾತ್ರಗಳ ಪರಿಚಯದ ಟೀಸರ್ ಹೊರಬಂದು ಸದ್ದು ಮಾಡಿತ್ತು. ಈ ನಿಟ್ಟಿನಲ್ಲಿ ನವರಾತ್ರಿ ಹಬ್ಬದ ಎರಡನೇ ದಿನದಂದು ಹಾಡುಗಳ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಹಿರಿಯ ನಟ ಸುಮನ್ ಮಾತನಾಡಿ ಇಷ್ಟು ವರ್ಷದ ಅನುಭವದಲ್ಲಿ ಈ ಸಿನಿಮಾ ನನಗೆ ಖುಷಿ ನೀಡಿದೆ. ದೇವಿ ಇದ್ದಾರಾ ಎನ್ನುವ ಪ್ರಶ್ನೆಗಳಿಗೆ ನನ್ನ ಪಾತ್ರ ಉತ್ತರ ನೀಡಲಿದೆ. ಅಂದು ಅಣ್ಣಮಯ್ಯ ತೆಲುಗು ಚಿತ್ರ ಹಿಟ್ ಆಗಿತ್ತು. ಅದೇ ರೀತಿ ಇದು ಆಗಲಿ ಎಂದರು.

ನಿರ್ದೇಶಕ ಕಿನ್ನಾಳ್ ರಾಜ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಏನೇ ಕಷ್ಟ ಎದುರಾದರೂ ಅವರು ನಂಬಿರುವಂತಹ ದೇವರ ಮೊರೆ ಹೋಗುತ್ತಾರೆ. ಜಾತ್ರೆ ಉತ್ಸವಗಳಲ್ಲಿ ಇನ್ನು ನಂಬಿಕೆ ಇದೆ ಎನ್ನುವಂತಹ ಸಣ್ಣ ಸಣ್ಣ ವಿಷಯಗಳನ್ನು ಹೆಕ್ಕಿಕೊಂಡು ಅದನ್ನು ಪಾತ್ರಗಳ ಮೂಲಕ ತೋರಿಸಲಾಗಿದೆ. ಪ್ರತಿಯೊಂದು ದೇವರಿಗೂ ಹಿನ್ನಲೆ ಇರುತ್ತದೆ. ಹಾಗೆಯೇ ದೇವಿಯು ಮಹಾಲಕ್ಷೀ ರೂಪದಲ್ಲಿ ಭೂಮಿಗೆ ಬರುತ್ತಾಳೆ. ಮುಂದೆ ಮಾರಮ್ಮ ಯಾಕೆ ಆಗ್ತಾಳೆ ಒಂದು ಕಡೆಯಾದರೆ, ಮತ್ತೋಂದು ಭಾಗದಲ್ಲಿ ರಾಕ್ಷಸರನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಬರುತ್ತಾಳೆ. ಅದರಲ್ಲಿ ಕೊನೆಯ ಅವತಾರ ಮಾರಮ್ಮ ದೇವಿಯ ಅವತಾರ ಎಂದು ಹೇಳಿದರು.

ಸಿಂಹರೂಪಿ ಚಿತ್ರದಲ್ಲಿ ಒಂದಷ್ಟು ಕಮರ್ಷಿಯಲ್ ಅಂಶಗಳನ್ನು ಸೇರಿಸಲಾಗಿದ್ದು, ದೃಶ್ಯಗಳು ಚೆನ್ನಾಗಿ ಬರಬೇಕೆಂದು ನಿರ್ಮಾಪಕರು ಎಲ್ಲಿಯೂ ರಾಜಿಯಾಗದೆ ಹಣ ಸುರಿದಿದ್ದಾರೆ. ‘ಕೃಷಂ ಪ್ರಣಯ ಸಖಿ’ ಖ್ಯಾತಿಯ ಗಾಯಕ ಜಸ್‍ಕರಣ್ ಸಿಂಗ್ ಹಾಡಿರುವ ಲವ್ ಸಾಂಗ್ ಹಿಟ್ ಆಗಿರುವುದು ತಂಡಕ್ಕೆ ಹಿರಿಮೆ ತಂದಿದೆ. ಎಲ್ಲರೂ ಶ್ರದ್ದೆ ಭಕ್ತಿಯಿಂದ ಸಹಕಾರ ನೀಡಿದ್ದಾರೆ. ತಾವುಗಳು ಚಿತ್ರಮಂದಿರಕ್ಕೆ ಬಂದರೆ ದೇವಿಯ ದರ್ಶನ ಪಡೆಯಬಹುದೆಂದು ಹೇಳಿದರು.

ನಿರ್ಮಾಪಕ ಕೆ.ಎಂ.ನಂಜುಡೇಶ್ವರ ಮಾತನಾಡಿ ನೂರ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಹಿರಿಯರು ಕಿರಿಯರು ತಾಯಿಯ ಮಕ್ಕಳು ಅಂದುಕೊಂಡು ಚೆನ್ನಾಗಿ ನಟಿಸಿದ್ದಾರೆ. ನೋಡುಗರು ಅಮ್ಮನ ಮಕ್ಕಳಾಗಿ ಟಾಕೀಸ್‍ಗೆ ಬರಬೇಕೆಂದು ಕೋರಿಕೊಂಡರು.

ಕಲಾವಿದರುಗಳಾದ ಯಶ್‍ಶೆಟ್ಟಿ, ಅಂಕಿತಾಗೌಡ, ದಿವ್ಯಾ ಆಲೂರು, ನೀನಾಸಂ ಅಶ್ವಥ್, ಹರೀಶ್ ರಾಯ್, ವಿಜಯ್‍ಚೆಂಡೂರು, ಯಶಸ್ವಿನಿ, ಆರವ್‍ಲೋಹಿತ್, ಖುಷಿಬಸ್ರೂರು, ಮನಮೋಹನ್‍ರೈ, ಸಾಗರ್, ಸಂಗೀತ ಸಂಯೋಜಕ ಆಕಾಶ್‍ಪರ್ವ, ಕಲರಿಸ್ಟ್ ಕಿಶೋರ್, ಛಾಯಾಗ್ರಾಹಕ ಕಿರಣ್ ಮುಂತಾದವರು ಅಮ್ಮನ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಸುಕೃತವೆಂದು ಸಂತಸ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin