Director Sudhir Attavar to introduce star actress' daughter
ಸ್ಟಾರ್ ನಟಿಯ ಪುತ್ರಿಯ ಪರಿಚಯಕ್ಕೆ ಮುಂದಾದ ನಿರ್ದೇಶಕ ಸುಧೀರ್ ಅತ್ತಾವರ್
“ಕೊರಗಜ್ಜ” ಚಿತ್ರದ ಕೆಲಸ ಕಾರ್ಯಗಳು ಮುಗಿದು, ಇನ್ನೇನು ಬಿಡುಗಡೆಯ ಹಂತದಲ್ಲಿರಬೇಕಾದರೆ ಇದರ ನಿರ್ದೇಶಕ ಸುಧೀರ್ ಅತ್ತಾವರ್ ಹೊಸ ಸಿನಿಮಾದ ತಯಾರಿ ಶುರು ಮಾಡುವುದರಲ್ಲಿದ್ದಾರೆ ಸ್ಟಾರ್ ನಟಿಯೊಬ್ಬರ ಸುರಸಂದರಾಂಗಿ ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ

ಆ ಸ್ಟಾರ್ ನಟಿ ಕೂಡಾ ಸುಧೀರ್ ಅತ್ತಾವರ್ ಕೈಯಿಂದಲೇ ತನ್ನ ಮಗಳನ್ನು ಲಾಂಚ್ ಮಾಡಿಸಬೇಕು ಎಂಬ ಉತ್ಸುಕತೆಯಲ್ಲಿದ್ದಾರೆ. ಅಲ್ಲದೆ ಈ ಸುರ ಸುಂದರಾಂಗಿ ಚೆಲುವೆಯನ್ನು ನಾಯಕಿಯಾಗಿ ಸಿನಿಮಾದಲ್ಲಿ ಅಭಿನಯಿಸುವಂತೆ ಆಫರ್ ನೀಡಿದ್ದ ನಿರ್ದೇಶಕ-ನಿರ್ಮಾಪಕ ರಿಗೆಲ್ಲ ನೋ ಎಂದಿದ್ದ ಮೇಡಂ ಅವರು ಸುಧೀರ್ ಅತ್ತಾವರ್ ರವರ ಕೈ ಯಿಂದಲೇ ಪರಿಚಯಿಸ ಬೇಕೆಂದು ಹರಸಿಕೊಂಡಿದ್ದಾರೆ ಕೂಡಾ…
ಅಂದ ಹಾಗೆ ಆ ಸ್ಟಾರ್ ನಟಿಯ ಪುತ್ರಿಯ ಎದುರಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸಲು ಮುಗ್ಧ ಮುಖದ,
ಸುಮಾರು 19ರಿಂದ 23 ವರ್ಷಗಳ ಒಳಗಿನ ಸ್ಫುರಧ್ರೂಪಿ ಕಟ್ಟುಮಸ್ತಾದ ರಾಜಕುಮಾರನ ಮುಖ್ಯಪಾತ್ರಕ್ಕಾಗಿ ಯುವನಟನ ಹುಡುಕಾಟದಲ್ಲಿದ್ದಾರೆ.


