“ಮರಳಿ ಮನಸಾಗಿದೆ” ಚಿತ್ರದ ಟೀಸರ್ ಬಿಡುಗಡೆ
`ಮರಳಿ ಮನಸಾಗಿದೆ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಕುತೂಹಲ ಸಿನಿಮಾ ಬಗ್ಗೆ ಮತ್ತಷ್ಟು ಆಸಕ್ತಿ ಮತ್ತು ಕುತೂಹಲ ಹೆಚ್ಚು ಮಾಡಿದೆ. ಕರುನಾಡ ಸಮರ ಸೇನೆ ಇದಕ್ಕೆ ಸಾಥ್ ನೀಡಿದ್ದು ವಿಶೇಷವಾಗಿತ್ತು.

ದಾವಣಗೆರೆಯ ಮುದೇಗೌಡ, ನವೀನ್ ಕುಮಾರ್ ಆರ್. ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಕಾರ್ಕಳದ ನಾಗರಾಜ್ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ
ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಯುವ ಪೀಳಿಗೆಗೆ ಭಾವನೆ ಬೆಸೆಯುವ, ಮನಸ್ಸು ಬುದ್ದಿ ಸ್ವಾಸ್ಥಗೊಳಿಸುವ, ಬದುಕಿ ನಡೆಗೆ ಸಾಗುವ ಸಂದೇಶ ಸಾರುವ ಚಿತ್ರ ನಿರ್ಮಾಣಗೊಂಡಿರುವುದು ಸಂತಸ ಉಂಟುಮಾಡಿದೆ ಎಂದರು
ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, `ಮರಳಿ ಮನಸಾಗಿದೆ’ ಚಿತ್ರ ಶತದಿನೋತ್ಸವ ಆಚರಿಸುವ ಜೊತೆಗೆ ಚಿತ್ರದ ನಟ-ನಟಿಯರು ಪ್ಯಾನ್ ಇಂಡಿಯಾ ಸ್ಟಾರ್ಗಳಾಗಿ ಮಿಂಚಲಿ ಎಂದು ಶುಭ ಹಾರೈಸಿದರು.

,ಶಾಸಕ ಕೆ.ಎಸ್.ಬಸವಂತಪ್ಪ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ,ರಂಗಕರ್ಮಿ, ಬಾ.ಮ. ಬಸವರಾಜಯ್ಯ ಸೇರಿದಂತೆ ಹಲವರು ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ನಿರ್ಮಾಪಕ ಮುದೇಗೌಡ್ರ ನವೀನ್, ತೆಲಗಿ ಮಲ್ಲಿಕಾರ್ಜುನಪ್ಪ, ನಾಯಕ ನಟ ಅರ್ಜುನ್ ವೇದಾಂತ್, ನಾಯಕಿ ನಟಿ ಸ್ಮೃತಿ ವೆಂಕಟೇಶ್, ನಿರ್ದೇಶಕ ನಾಗರಾಜ್ ಶಂಕರ್, ವಿಜಯ್ ಕುಮಾರ್ ಎಸ್, ಹರೀಶ್ ಎಸ್. ಎಂ ಹಾಗೂ ಸಂಜಯ್ ಉಮ್ರಾನಿ ಟೀಸರ್ ಬಿಡುಗಡೆಗೆ ಎಲ್ಲರಿಗೂ ಧನ್ಯವಾದ ಹೇಳಿದರು

