ಪೋಷಕ ಕಲಾವಿದ ಡಿಂಗ್ರಿನಾಗರಾಜ್ ಕ್ಷಮೆಯಾಚನೆ ಯಾಕೆ ಗೊತ್ತಾ..

ನಲವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿರುವ ಹಿರಿಯ ಪೋಷಕ ಕಲಾವಿದ ಡಿಂಗ್ರಿ ನಾಗರಾಜ್ ಇಲ್ಲಿಯವರೆಗೂ 780ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇಂದಿಗೂ ಕೂಡ ನಟನೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾಗಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.
ಎರಡು ವರ್ಷದ ಹಿಂದೆ ಸಂದರ್ಶನವೊಂದರಲ್ಲಿ ಬಾಯ್ತಪ್ಪಿ ಮಡಿವಾಳ ಜನಾಂಗದವರ ಕುರಿತಂತೆ ಬಳಿಸಿದ ಪದ ಈಗ ವಿವಾದಕ್ಕೆ ಎಡೆ ಮಾಡಿದೆ. ಇದಕ್ಕೆ ಈಗ ಆಯಾ ಜನಾಂಗದವರು ಆಕ್ಷೇಪಣೆ ವ್ಯಕ್ತಪಡಿಸಿ ಗಂಭೀರ ದೂರನ್ನು ನೀಡಿದ್ದಾರೆ ಇದರ ಬೆನ್ನಲ್ಲೇ ಅಲ್ಲದೆ ಬೆದರಿಕೆ ಕರೆಗಳು ಬರುತ್ತಿದ್ದರಿಂದ ಹಿರಿಯ ಪೋಷಕ ಕಲಾವಿದ ಡಿಂಗ್ರಿ ನಾಗರಾಜ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಪೋಷಕ ಕಲಾವಿದ ಡಿಗ್ರಿ ನಾಗರಾಜ್ ಮಾತನಾಡಿ ಎಲ್ಲರ ಎದುರು ಕ್ಷಮೆ ಕೋರಿದ್ದಾರೆ. ಇದು ಸಾಕಾಗುವುದಿಲ್ಲವೆಂದು ತಿಳಿದು,ಮತ್ತೊಮ್ಮೆ ನಡೆಸಿ ಮಾಧ್ಯಮದ ಎದುರು ಕ್ಷಮೆ ಕೋರುವ ಮೂಲಕ.
ಇನ್ನು ಮುಂದೆ ಇಂತಹ ಅಹಿತಕರ ಘಟನೆ ಆಗದಂತೆ ಎಚ್ಚರಿಕೆ ವಹಿಸಿಕೊಳ್ಳುತ್ತೇನೆಂದು ಹೇಳಿದ್ದಾರೆ
ಆಕಸ್ಮಿಕವಾಗಿ ನುಡಿದಿದ್ದಕ್ಕೆ ಸಮಾಜ, ಜನಾಂಗಕ್ಕೆ ಕ್ಷಮೆ ಯಾಚಿಸುವುದರ ಮೂಲಕ ಪ್ರಕರಣಕ್ಕೆ ಮಂಗಳ ಹಾಡಲು ಕೋರಿದರು. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿಯೇ ಡಿಂಗ್ರಿ ನಾಗರಾಜ್ ಇದೇ ವೇಳೆ ಮಾಹಿತಿ ನೀಡಿದ್ದಾರೆ