ಸಾಮಾಜಿಕ ಕಳಕಳಿಕ ಚಿತ್ರ : ಓ ನನ್ನ ಚೇತನ

ಚಿತ್ರ: ಓ ನನ್ನ ಚೇತನ
ನಿರ್ದೇಶನ : ಅಪೂರ್ವ
ತಾರಾಗಣ: ಮಾಸ್ಟರ್ ಪ್ರತೀಕ್, ಪ್ರೀತಮ್, ಬೇಬಿ ದಾನೇಶ್ವರಿ, ಡಿಂಪನಾ, ಮೋನಿಕಾ ಮತ್ತಿತರರು
ರೇಟಿಂಗ್ : *** 3/5

ಮೊಬೈಲ್ ಇತ್ತೀಚೆಗಂತೂ ಸಣ್ಣ ಸಣ್ಣ ಮಕ್ಕಳೂ ಕೂಡ ಅದಕ್ಕೆ ಒಂದು ರೀತಿ ಅಂಟಿಕೊಂಡು ಬಿಟ್ಟಿದ್ದಾರೆ. ಮೊಬೈಲ್ ಇಲ್ಲದೆ ಊಟ, ತಿಂಡಿ ಮಾಡಲಾರದಷ್ಟು ಮೊಬೈಲ್ ಗೆ ಮಕ್ಕಳು ಹೊಂದಿಕೊಂಡು ಬಿಟ್ಟಿದ್ದಾರೆ. ನಗರ ಪ್ರದೇಶ ಇರಲಿ ಗ್ರಾಮಾಂತರ ಪ್ರದೇಶದ ಮಕ್ಕಳೂ ಕೂಡ ಮೊಬೈಲ್ ಅಚ್ಚಿಕೊಂಡು ಬಿಟ್ಟಿದ್ದಾರೆ
ಇಂತಹುದೇ ಕಥೆಯನ್ನು ಮುಂದಿಟ್ಟುಕೊಂಡು ನಟಿ ಅಪೂರ್ವ,ಮೊದಲ ಬಾರಿಗೆ ಆಕ್ಷನ್‍ಕಟ್ ಹೇಳಿದ್ದಾರೆ.ಮೊದಲ ಪ್ರಯತ್ನದಲ್ಲಿ ವಿಭಿನ್ನ ಕಥಾವಸ್ತುವನ್ನು ಮುಂದಿಟ್ಟುಕೊಂಡು ಅದನ್ನು ಮನಮುಟ್ಟುವಂತೆ ” ಓ ನನ್ನ ಚೇತನ” ಚಿತ್ರದ ಮೂಲಕ ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಹಳ್ಳಿಗೆ ಹೊಸದಾಗಿ ಮೊಬೈಲ್ ಬಂದಾಗ ಆ ಊರಿನ ಬಾಲಕನೊಬ್ಬನ ಮನಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರಿತು, ಅದರಿಂದ ಮುಂದೆ ಏನೆನೆಲ್ಲ ಆಯಿತು ಎನ್ನುವುದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ನಿರ್ದೇಶಕರ ಜೊತೆಗೆ ಚಿತ್ರಕ್ಕೆ ದುಡಿದ ಇಡೀ ತಂತ್ರಜ್ಞರಿಗೆ ಇದರ ಶ್ರೇಯ ಸಲ್ಲಬೇಕು
ಮೊಬೈಲ್ ನೋಡುವ ಮಕ್ಕಳು, ಮಕ್ಕಳ ಪೆÇೀಷಕರು ಎಲ್ಲರೂ ನೋಡಬೇಕಾದ ಮತ್ತು ಸಾಮಾಜಿಕ ಕಳಕಳಿ ಮತ್ತು ಸಂದೇಶವಿರುವ ಚಿತ್ರ ಓ ನನ್ನ ಚೇತನ
ಮಕ್ಕಳು ಓದುವ ಸಮಯದಲ್ಲಿ ಮೊಬೈಲ್, ಸಾಮಾಜಿಕ ಜಾಲತಾಣ ಎಂದೆಲ್ಲಾ ತಲೆಕೆಡಿಸಿಕೊಂಡರೆ ಏನೆಲ್ಲಾ ಆಗಲಿದೆ. ಅದರಿಂದ ಅವರ ಏಕಾಗ್ರತೆ ಹಾಳಾಗುವ ಜೊತೆಗೆ ಓದಿನ ಕಡೆಯೂ ಭಂಗ ತರುತ್ತದೆ ಎನ್ನುವುದನ್ನು ಚಿತ್ರದ ಮೂಲಕ ನಿರ್ದೇಶಕ ಅಪೂರ್ವ ಕಟ್ಟಿಕೊಟ್ಟಿದ್ದಾರೆ.
ಮೊಬೈಲ್ ಮಕ್ಕಳಿಗೆ ಹಾನಿಕಾರಕ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ನೈಜ ವಿಷಯಗಳನ್ನಿಟ್ಟುಕೊಂಡು ಮನರಂಜನೆಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ ನಿರ್ದೇಶಕಿ ಅಪೂರ್ವ

ತೈಲೂರು ಗ್ರಾಮದಲ್ಲಿ ಕೂಲಿನಾಲಿ ಮಾಡಿಕೊಂಡಿದ್ದ ಸೀನಣ್ಣ ದಂಪತಿಯ ಒಬ್ಬನೇ ಮಗ ಚೇತನ ನಾಯಕ. ಊರಿಗೆ ಹೊಸದಾಗಿ ಮೊಬೈಲ್ ಟವರ್ ಹಾಕಿದಾಗ ಮೊಬೈಲ್ ನೆಟ್‍ವರ್ಕ್ ಬರುತ್ತದೆ, ಆತ ಶಾಲೆಯಲ್ಲಿ ಸಖತ್ ಚೂಟಿ, ಸ್ನೇಹಿತರ ಗುಂಪಿನಲ್ಲೆಲ್ಲ ಆತನೇ ಘಾಟಿ. ಶಾಲೆಯ ಹಳೆಯ ವಿದ್ಯಾರ್ಥಿನಿಯೊಬ್ಬರು ಗುರುಗಳಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡಲು ಬಂದಾಗ ತಾನು ಸ್ವಂತ ಯೂಟ್ಯೂಬ್ ಚಾನೆಲ್ ಮಾಡಿಕೊಂಡಿರುವುದಾಗಿ ಹೇಳುತ್ತಾರೆ, ಅದರಿಂದ ತನಗೆ ದುಡ್ಡು ಬರುತ್ತಿರುವುದಾಗಿ ಹೇಳುತ್ತಾಳೆ. ಇದನ್ನು ಕೇಳಿದ ಚೇತು ತಾನೂ ಒಂದು ಮೊಬೈಲ್ ತೆಗೆದುಕೊಂಡು ವೀಡಿಯೋ ಮಾಡಿ ಪೇಸ್‍ಬುಕ್‍ನಲ್ಲಿ ಹಾಕಿದರೆ ದುಡ್ಡು ಬರುತ್ತೆ ಎಂದುಕೊಳ್ಳುತ್ತಾನೆ. ಅದಕ್ಕಾಗಿ ಮೊಬೈಲ್ ಕೊಡಿಸುವವರೆಗೆ ತಾನು ಊಟ ಮಾಡಲ್ಲ ಎಂದು ಮನೆಯಲ್ಲಿ ಹಠ ಮಾಡುತ್ತಾನೆ. ಈತನ ಹಠಕ್ಕೆ ಸೋತ ಸೀನಣ್ಣ ಹಸು ಕೊಳ್ಳಲೆಂದು ಕೂಡಿಟ್ಟುಕೊಂಡಿದ್ದ ಹಣದಲ್ಲಿ ಮಗನಿಗೆ ಆಂಡ್ರಾಯ್ಡ್ ಮೊಬೈಲ್ ಕೊಡಿಸುತ್ತಾನೆ. ಆ ಮೊಬೈಲ್ ತನ್ನ ಕೈಗೆ ಬಂದಮೇಲೆ ಚೇತು ಓದುವುದನ್ನೇ ಮರೆತು ಬಿಡುತ್ತಾನೆ
ಕಳ್ಳಬಟ್ಟಿ ಮಾರುವ ಗುಂಪು ಮತ್ತು ಅವರೊಂದಿಗೆ ಶಾಮೀಲಾದ ಪೆÇಲೀಸರಿಗೆ ಬುದ್ದಿ ಕಲಿಸಲು ಮುಂದಾದ ಮಕ್ಕಳು ಕಳ್ಳಬಟ್ಟಿ ದಂದೆಯನ್ನು ವೀಡಿಯೋ ಮಾಡಿ ಅದು ಮೇಲಕಾರಿಗಳಿಗೆ ಗೊತ್ತಾಗುವಂತೆ ಮಾಡುತ್ತಾರೆ. ಮುಂದೆ ಏನಾಗುತ್ತದೆ, ಚೇತನನ ಹಣ ಮಾಡುವ ಆಸೆ ಈಡೇರಿತೇ ಎನ್ನುವುದು ಚಿತ್ತದ ಕಥನ ಕುತೂಹಲ

ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್ ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಪ್ರದೀಪ್ ವರ್ಮಾ ಸಂಗೀತ , ಗುರುಪ್ರಶಾಂತ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.