Dolly Dhananjaya completes a decade as an actor: Lots of wishes from loved ones

ನಟನಾಗಿ ದಶಕ ಪೂರೈಸಿದ ಡಾಲಿ ಧನಂಜಯ: ಆಪ್ತರಿಂದ ಶುಭಾಷಯಗಳ ಮಹಾಪೂರ - CineNewsKannada.com

ನಟನಾಗಿ ದಶಕ ಪೂರೈಸಿದ ಡಾಲಿ ಧನಂಜಯ: ಆಪ್ತರಿಂದ ಶುಭಾಷಯಗಳ ಮಹಾಪೂರ

ಧನಂಜಯ ಎಂಬ ನಟ ರಾಕ್ಷಸ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿ ಇಂದು (ಮೇ.31ಕ್ಕೆ) ದಶಕ ಪೂರ್ಣಗೊಂಡಿದೆ. ಜಯನಗರ 4ನೇ ಬ್ಲಾಕ್‍ನಲ್ಲಿ ಓಡಾಡಿಕೊಂಡು “ಡೈರೆಕ್ಟರ್ ಸ್ಪೆಷಲ್” ಮೂಲಕ ನಟರಾಗಿ ಚಿತ್ರರಂಗ ಪ್ರವೇಶಿಸಿ ಎಲ್ಲರಂತಲ್ಲ ನಾನೇ ಸ್ಪೆಷಲ್ ಎಂದು ನಿರೂಪಿಸಿದವರು ಅರಸೀಕರೆಯ ಕಾಳೇನಹಳ್ಳಿ ಅಡವಿಸ್ವಾಮಿ ಧನಂಜಯ.

ಇಂಜಿನಿಯರಿಂಗ್ ಮಾಡಿಕೊಂಡು ಪ್ರತಿಷ್ಠಿತ ಇನ್‍ಸ್ಪೋಸಿಸ್ ಕಂಪನಿಯಲ್ಲಿ ಕೆಲಸದಲ್ಲಿದ್ದ ಧನಂಜಯ , ನಿರ್ದೇಶಕ ಗುರುಪ್ರಸಾದ್ ಕಣ್ಣಿಗೆ ಬಿದ್ದು “ ಡೈರೆಕ್ಟರ್ ಸ್ಪೆಷಲ್ “ ಚಿತ್ರದ ಮೂಲಕ ನಟನಾಗಿದ್ದರು. ಆ ಚಿತ್ರ 2013ರ ಮೇ.31 ರಂದು ತೆರೆಗೆ ಬಂದಿತ್ತು. ಮೊದಲ ಚಿತ್ರ ತೆರೆಗೆ ಬಂದು ಹತ್ತು ವರ್ಷ ಪೂರ್ಣಗೊಂಡಿದೆ. ಚಿತ್ರ ಅಂದುಕೊಂಡಷ್ಟು ಯಶಸ್ಸು ಕಾಣದಿದ್ದರೂ ಮುಂದೊಂದು ದಿನ ಧನಂಜಯ ಅವರು ಕನ್ನಡ ಚಿತ್ರರಂಗದ ತಾರಾಮಂಡಲ್ಲಿ ಬೆಳ್ಳಿ ಚುಕ್ಕೆಯಾಗಿ ಬೆಳಗುವ ಭರವಸೆ ಮೂಡಿಸಿದಂತೂ ಸುಳ್ಳಲ್ಲ.

ಚಿತ್ರರಂಗ ಪ್ರವೇಶಿಸಿ ಹತ್ತು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಟ ಧನಂಜಯ ಅವರಿಗೆ ಸ್ನೇಹಿತರು, ಆಪ್ತರು, ಚಿತ್ರರಂಗದ ಗಣ್ಯರು ಶುಭಾಷಯಗಳ ಮಹಾಪೂರ ಹರಿಸಿದ್ದಾರೆ.


ಇನ್ನೂ ಕೆಲವರು ಕಾಮನ್ ಡಿಸ್‍ಪ್ಲೇ ಪಿಕ್ಚರ್ (ಸಿಡಿಪಿ) ಹಾಕಿಕೊಂಡು ತಮ್ಮದೇ ಸಂಭ್ರಮ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.ಖುಷಿ ಸಂಭ್ರಮಪಟ್ಟಿದ್ದಾರೆ. ಧನಂಜಯ ಎಂಬ ಸಾಧಾರಣ ಹುಡುಗ ಇಂದು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಬೆಳೆದು ನಿಂತಿದ್ದಾರೆ. ತಾನೂ ಬೆಳೆಯುವ ಜೊತೆಗೆ ತನ್ನ ಜೊತೆಯಲ್ಲಿದ್ದವರನ್ನೂ ಬೆಳೆಸುವ ದೊಡ್ಡ ಗುಣವೇ ಅವರನ್ನು ಇಂದು ಆರಾಧಿಸಲು ಪ್ರಮುಖ ಕಾರಣ.


ದಶಕದ ಚಿತ್ರರಂಗದ ಬಣ್ಣದ ಬದುಕಿನ ಯಾನದಲ್ಲಿ ನಟರಾಗಿ, ಖಳನಟರಾಗಿ ಅಷ್ಟೇ ಅಲ್ಲದೆ ಗೀತರಚನೆಕಾರಕಾಗಿ, ನಿರ್ಮಾಪಕರಾಗಿ ಮೇಲಾಗಿ ಹೃದಯವಂತನಾಗಿ ಬೆಳೆದುನಿಂತ ಪರಿ ಸಾಮಾನ್ಯವಾದುದಲ್ಲ. ಹಳ್ಳಿಯಿಂದ ಬಂದ ಹುಡುಗನೊಬ್ಬ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆದು ಅಭಿಮಾನಿಗಳ ನೆಚ್ಚಿನ ನಟನಾಗಿ ಗುರುತಿಸಿಕೊಳ್ಳುವ ಹಿಂದೆ ಇದ್ದ ಶ್ರಮ ಪಟ್ಟ ಹೋರಾಟ ಅಷ್ಟಿಷ್ಟಲ್ಲ.

ಕನ್ನಡದ ಜೊತೆ ಜೊತೆಗೆ ಪರಭಾಷೆಯಲ್ಲಿಯೂ ತಮ್ಮ ನಟನೆಯ ಮೂಲಕ ಕಮಾಲು ಮಾಡಿದವರು. “ಬಡವರ ಮಕ್ಳು ಬೆಳೀಬೇಕು ಕಣ್ರಯ್ಯ” ಎನ್ನುವ ಧನಂಜಯ ಅವರ ಮಾತಿನಂತೆ ಬಡವರು ಹಾಗು ಪ್ರತಿಭಾನ್ವಿತರಿಗೆ ತಂಡದಲ್ಲಿ ಅವಕಾಶ ನೀಡಿ ಅವರನ್ನು ಬೆಳೆಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


2013ರಲ್ಲಿ ಧನಂಜಯ ಅವರು ಚಿತ್ರರಂಗ ಪ್ರವೇಶಿಸಿದರೂ ಅವರತ್ತ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ಚಿತ್ರ “ಟಗರು”. ದುನಿಯಾ ಸೂರಿ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದ ಚಿತ್ರದಲ್ಲಿ “ಡಾಲಿ” ಎಂಬ ಖಳನಟನ ಪಾತ್ರ ಮಾಡಿದ್ದರು. ಆ ಪಾತ್ರದಲ್ಲಿ ನಟಿಸಿದ ಪರಿಗೆ ಧನಂಜಯ ಅವರಿಗೆ ಹೆಸರು ತಂದುಕೊಟ್ಟಿದ್ದೂ ಅಲ್ಲದೆ ಖಳನಾಗಿಯೂ ಸ್ಟಾರ್ ಆಗಬಹುದು ಎನ್ನುವುದನ್ನು ನಿರೂಪಿಸಿತ್ತು.


ಟಗರು ಚಿತ್ರದ ತನಕ ರಾಟೆ, ಜೆಸ್ಸಿ, ಎರಡನೇ ಸಲ, ಅಲ್ಲಮ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡರೂ ಅವರ ಬಣ್ಣದ ಬದುಕಿನ ಅದೃಷ್ಠದ ಬಾಗಿಲು ಮಾತ್ರ ತೆರೆದಿರಲಿಲ್ಲ. ಅದು ಡಾಲಿ ಎನ್ನುವ ಪಾತ್ರದ ಮೂಲಕ ಅದೃಷ್ಠ ಹುಡುಕಿಕೊಂಡು ಬಂದಿತ್ತು. ಅದರ ಜೊತೆಗೆ ಡಾಲಿ ಎನ್ನುವ ಹೆಸರೂ ಕೂಡ ಧನಂಜಯ ಅವರ ಜತೆ ಸೇರಿಕೊಂಡಿತು.


“ಟಗರು” ಚಿತ್ರದ ತನಕ ಒಂದು ತೂಕವಾದರೆ ಆ ನಂತರದ್ದೇ ಇನ್ನೊಂದು ತೂಕ. ಕನ್ನಡದಲ್ಲಿ ನಾಯಕನಾಗಿ ಹೆಚ್ಚು ಬೇಡಿಕೆ ಹೆಚ್ಚಿಸಿಕೊಳ್ಳುತ್ತಲೇ ತೆಲುಗು ಚಿತ್ರರಂಗದಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿ ಅಲ್ಲಿಯೂ ಸೈ ಎನಿಸಿಕೊಂಡವರು. ಡಾನ್ ಜಯರಾಜ್ ರೀತಿಯ ಪಾತ್ರದಿಂದ ಹಿಡಿದು ಪಾತ್ರ ಯಾವುದೇ ಇರಲಿ ನೀರು ಕುಡಿದಷ್ಟು ಸಲೀಸಾಗಿ ನಿರ್ವವಹಿಸುವ ಮೂಲಕ ನಟ ರಾಕ್ಷಸ ಎನಿಸಿಕೊಂಡವರು.


“ಗುರುದೇವ್ ಹೊಯ್ಸಳ” ಚಿತ್ರ ಧನಂಜಯ ಅವರ ಪಾಲಿಗೆ ಚಿತ್ರಜೀವನದ 25ನೇ ಚಿತ್ರ.ಈ ಚಿತ್ರದ ಮೂಲಕ ಗಮನ ಸೆಳೆದ ನಟ ರಾಕ್ಷಸ ಧನಂಜಯ ಅವರು ಕನ್ನಡ, ತೆಲುಗು ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ ಅನೇಕ ಪ್ರತಿಭಾನ್ವಿತರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಅವರ ಕಾರ್ಯ ಹೀಗೆ ಸಾಗಲಿ…ಎನ್ನುವ ಆಶಯದೊಂದಿಗೆ…..

ಅಭಿನಂಧನೆಗಳ ಮಹಾಪೂರ

https://twitter.com/divyaspandana/status/1663746421340913664?s=20

ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಅವರು ಧನಂಜಯ ಅವರ ಚಿತ್ರರಂಗದ ದಶಕದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ. ಚಿತ್ರರಂಗಕ್ಕೆ ಕಾಲಿಡುವ ಅನೇಕ ಮಂದಿಗೆ ಸ್ಪೂರ್ತಿಯಾಗಿದ್ದೀರಿ. ನೀವೊಬ್ಬ ಮಾರ್ಗದರ್ಶಕ. ಗಾಡ್ ಪಾಧರ್ ಆಗಿದ್ದೀರಿ ಎನ್ನುವ ಮೆಚ್ಚುಗೆಯ ಮಾತುಗಳನ್ನಾಗಿದ್ದಾರೆ.
ಇದರ ಜೊತೆಗೆ ನಟಿಯರಾದ ಅಮೃತಾ ಅಯ್ಯಂಗಾರ್, ಸಪ್ತಮಿಗೌಡ, ಶೃತಿ ಹರಿ ಹರನ್,ನಟರಾದ ಯೋಗಿ, ನವೀನ್ ಶಂಕರ್ ಸೇರಿದಂತೆ ಧನಂಜಯ ಅವರ ಆಪ್ತ ಬಳಗ ಸ್ನೇಹಿತರು ಶುಭ ಹಾರೈಸಿದ್ದಾರೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin