ಕಂಟೆಂಟ್ ಆಧಾರಿತ ಚಿತ್ರ ‘ತಾಯವ್ವ’ ನಿಗೆ ತೆರಿಗೆ ಪ್ರೀ ಮಾಡಿಸಲು ಪ್ರಯತ್ನ : ಆರ್ ಅಶೋಕ
ಹೆಣ್ಣು ಭ್ರೂಣಹತ್ಯೆ ಮತ್ತು ಸೂಲಗಿತ್ತಿ ಸುತ್ತ ಸಾಗುವ ಕಥಾಹಂದರ ಹೊಂದಿರುವ “ ತಾಯವ್ವ” ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತಾಯವ್ವನಿಗೆ ವಿಧಾನಸಭೆ ಸಭೆ ವಿರೋದ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್ ಕೊಟ್ಟು ಒಳ್ಳೆಯದಾಗಲಿ ಎಂದು ಹರಸಿದ್ಧಾರೆ.
ಈ ಹಿಂದೆ ಕಿಚ್ಚ ಸುದೀಪ್ ಅವರ ಚೊಚ್ಚಲ ಚಿತ್ರದ ಹೆಸರೂ ಕೂಡ “ತಾಯವ್ವ” ಆ ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಉಮಾಶ್ರೀ ಅಭಿನಯಿಸಿಲ್ಲ. ಜೊತೆಗೆ ಆ ತಾಯವ್ವನಿಗೂ ಈ ತಾಯವ್ವನಿಗೂ ಸಂಬಂಧ ಇಲ್ಲ., ಆದರೆ ಶೀರ್ಷಿಕೆ ಮಾತ್ರ ಒಂದೆ.
ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಮಾತನಾಡಿದ ಆರ್. ಅಶೋಕ ತಾಯವ್ವ ಮನಸ್ಸಿಗೆ ಮುಟ್ಟು ಪದ. ತಾಯಿ ಅನ್ನೋ ಪದವೇ ಹಾಗೇ. ವಿಶೇಷವಾಗಿ ಹೆಣ್ಣು ಮಕ್ಕಳ ಬಗ್ಗೆ ತಯಾರಾಗಿರುವ ಸಿನಿಮಾ ಇದು. ಮಕ್ಕಳನ್ನು ಹೊರಲು ತಾಯಿಬೇಕು. ಹೆಂಡ್ತಿಯಾಗಿ ನಮ್ಮ ಎಲ್ಲಾ ಕಷ್ಟ ಸುಖಗಳಲ್ಲಿ ನಿಲ್ಲಲು ಹೆಣ್ಣು ಬೇಕು. ಆದರೆ ಮಗಳಾಗಿ ಬೇಡ ಅನ್ನುವುದು ಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಕಂಟೆಂಟ್ ಇರುವ ಚಿತ್ರಕ್ಕೆ ತೆರಿಗೆ ಫ್ರೀ ಮಾಡಿಸಲು ರಾಜ್ಯ ಸರ್ಕಾರದ ಜೊತೆ ಚರ್ಚೆ ನಡೆಸುತ್ತೇನೆ ಎಂದರು
ಮಂಡ್ಯದ ಸಾಕಷ್ಟು ಕಡೆ ಹೋಗಿದ್ದೆ. ಅಲ್ಲೊಂದು ಅಲೆಮನೆಯಲ್ಲಿ ಲ್ಯಾಪ್ ಟಪ್ ಇಟ್ಕೊಂಡು ಅಲ್ಲೇ ಪರೀಕ್ಷೆ ಮಾಡಿ ಹೆಣ್ಣು ಅಂತಾ ಹೇಳಿದ್ರೆ ಅಲ್ಲೇ ಅಬಾಷನ್ ಮಾಡುವುದು. ಕದ್ದು ಮುಚ್ಚಿ ಹೆಣ್ಣು ಮಗುವನ್ನು ಕೊಲೆ ಮಾಡುವಂತಹದ್ದು. ಈ ತರದ ಘಟನೆ ಒಂದಲ್ಲ ಲಕ್ಷಾಂತರ ಆಗಿದೆ. ಈಗ ಬರ್ತಾ ಬರ್ತಾ ಜನಕ್ಕೆ ಒಂದು ಜಾಗೃತಿ ಬಂದಿದೆ. ಜನ ಗಂಡು ಹೆಣ್ಣು ಎರಡನ್ನು ಸ್ವೀಕಾರ ಮಾಡುವ ಮನಸ್ಸು ಬಂದಿದೆ. ಹೆಣ್ಣು ವಿಚಾರ ಬಂದಾಗ ತಾಯಿ ಭಾವನೆ ಇವೆಲ್ಲಾ ಪ್ರಮುಖವಾಗುತ್ತದೆ. ಈ ದೃಷ್ಟಿಯಿಂದ ತಾಯವ್ವ ಸಿನಿಮಾ ಮೂಡಿಬಂದಿದೆ. ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಜನರನ್ನು ಮುಟ್ಟುವಂತ ಸಿನಿಮಾ ಆಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಹಿರಿಯ ನಟಿ ಉಮಾಶ್ರೀ ಮಾತನಾಡಿ, ಸುದೀಪ್ ಮೊದಲ ಸಿನಿಮಾ ತಾಯವ್ವ ಅನ್ನೋ ಟೈಟಲ್ ಮೇಲೆಯೇ ಆಗಿದ್ದು. ಆ ಚಿತ್ರದಲ್ಲಿ ಅಜ್ಜಿ ಅಥವಾ ತಾಯಿ ಪಾತ್ರ ಮಾಡಿದ್ದೆ. ಅದೇ ಟೈಟಲ್ ಈಗ ಕನ್ನಡ ಚಿತ್ರರಂಗದಲ್ಲಿ ರೀಪೀಟ್ ಆಗ್ತಿದೆ. ಭಾ.ಮ ಹರೀಶ್ ಬಹಳ ಒಳ್ಳೆ ಪ್ರಯತ್ನ ಮಾಡಿದ್ದಾರೆ. ಮಕ್ಕಳು, ಮಹಿಳೆಯರಿಗಾಗಿ ಮಾಡುತ್ತಿರುವ ಪ್ರಯತ್ನ. ವಿಧಾನಸಭೆಗಳಲ್ಲಿ ಮಾತನಾಡುತ್ತೇವೆ ಹೆಣ್ಣು ಭ್ರೂಣ ಹತ್ಯೆ, ಸಮಾಜದಲ್ಲಿರುವ ಮನಸ್ಥಿತಿ ಬಗ್ಗೆ ಮಾತನಾಡುತ್ತೇನೆ. ಸಮಾಜಕ್ಕೆ ಅರಿವು ಮೂಡಿಸುವಂತಹ ಇಂತಹ ಸಿನಿಮಾಗಳು ಬಹಳ ಮುಖ್ಯವಾಗುತ್ತವೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ರೀತಿ ಸಿನಿಮಾಗಳನ್ನು ಕಮರ್ಷಿಟಲ್ ವಿಧಾನದಲ್ಲಿ ಮಾಡುವುದು ಕಷ್ಟ ಎಂದು ಅನಿಸುತ್ತದೆ. ಆದರೆ ಅದರ ಉದ್ದೇಶ ಒಳ್ಳೆಯದು ಇದೆಯಲ್ಲಾ. ಹೀಗಾಗಿ ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.
ತಾಯವ್ವ ಸಿನಿಮಾವನ್ನು ನಂದಿ ಪ್ರಶಸ್ತಿ ಸಂಸ್ಥಾಪಕಿ ಎಸ್.ಪದ್ಮಾವತಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದು,ಚೊಚ್ಚಲ ಪ್ರಯತ್ನದಲ್ಲಿಯೇ ಕಂಟೆಂಟ್ ಸಿನಿಮಾ ನಿರ್ಮಿಸಿದ್ದು, ಕನ್ನಡ ಪ್ರೇಕ್ಷಕರಿಗೆ ಸಮರ್ಪಿಸುವ ಖುಷಿ ಅವರಿಗಿದೆ. ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ.
ಪಿ.ಶೇಷಗಿರಿ ಕಥೆ ಚಿತ್ರಕಥೆ ಸಂಭಾಷಣೆ ಬರೆದಿರುವ ತಾಯವ್ವನಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ತಾಯವ್ವ ಚಿತ್ರದ ಮೂಲಕ ಗೀತಪ್ರಿಯ ಚಿತ್ರರಂಗ ಪರಿಯಚವಾಗುತ್ತಿದ್ದು, ಬಂಡೇ ಮಹಾಕಾಳಿ ದೇಗುಲದ ಲತಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಬಹುತೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ.
ನಿರ್ಮಾಪಕ ಭಾ.ಮ.ಹರೀಶ್ ಚಿತ್ರವನ್ನು ಅರ್ಪಿಸುತ್ತಿದ್ದು, ಶೂಟಿಂಗ್ ಮುಗಿಸಿರುವ ತಾಯವ್ವ ಸಿನಿಮಾ ಸೆನ್ಸಾರ್‍ಗೆ ಸಜ್ಜಾಗಿದೆ.