“ಮತ್ತೆ ಬತ್ತಾವ್ನೇ ಕಲ ಸಿದ್ದೇಗೌಡ” : ಡಿಸೆಂಬರ್ 11 ರಿಂದ ಆಯೋಗ್ಯ- 2 ಚಿತ್ರೀಕರಣ
ಅಭಿನಯ ಚತುರ ನೀನಾಸಂ ಸತೀಶ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್‍ನಲ್ಲಿ ಕಳೆದ 6 ವರ್ಷದ ಹಿಂದೆ ತೆರೆಗೆ ಬಂದು ಮೋಡಿ ಮಾಡಿದ್ದ “ಆಯೋಗ್ಯ” ಚಿತ್ರದ ಸಿದ್ದೇಗೌಡ ಮತ್ತೆ ಬತ್ತಾವ್ನೆ. ಈ ಬಾರಿ ಹೊಸತನದೊಂದಿಗೆ ಸಿದ್ದೇಗೌಡ ಆಯೋಗ್ಯ-2 ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಡಿಸೆಂಬರ್ 11 ರಿಂದ ಆಯೋಗ್ಯನ ಚಿತ್ರೀಕರಣ ಆರಂಭವಾಗುತ್ತಿದೆ.
ಈ ಬಾರಿ ನಿರ್ಮಾಪಕರು ಬದಲಾಗಿದ್ದು ಅವರ ಜಾಗಕ್ಕೆ ಮುನೇಗೌಡ ಬಂದಿದ್ದಾರೆ. ಆಯೋಗ್ಯ ಮಹೇಶ್ ಇಲ್ಲಿಯೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕ, ನಾಯಕಿ ಮುಂದುವರಿದ ಭಾಗದಲ್ಲಿ ಕಮಾಲು ಮಾಡಲು ಸಜ್ಜಾಗಿದ್ದಾರೆ. ಇನ್ನುಳಿದಂತೆ ಯಾರೆಲ್ಲಾ ಕಲಾವಿದರು ಇದ್ದಾರೆ ಎನ್ನುವುದನ್ನು ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ.
ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ನೀನಾಸಂ ಸತೀಶ್, ಮನರಂಜನೆ ದುಪ್ಪಟ್ಟಾಗಿರಬೇಕು ಎನ್ನುವ ಉದ್ದೇಶದಿಂದ ಆಯೋಗ್ಯ ಮತ್ತೆ ಬರ್ತಾವ್ನೆ ಕಲ. ಏನಮ್ಮಿ ಏನಮ್ಮಿ ಅಂತ ಹಾಡಲ್ಲಿ ಕೇಳ್ತಾ ಇದ್ರಿ.. ಯಾವಾಗ ಯಾವಾಗ ಅಂತ ಮಾತಲ್ಲಿ ಅಂತ ಮಾತಲ್ಲಿ ಕೇಳ್ತಾ ಇದ್ರಿ., ಅದಕ್ಕೆ ಉತ್ತರ ಕೊಡೋ ಸಮಯಮ ಬಂತು ಕಲ. ಇದೇ ಡಿಸೆಂಬರ್ 11 ರಿಂದ ಚಿತ್ರೀಕರಣ ಆರಂಭವಾಗುತ್ತಿದೆ. ನೀವ್ ಆಶೀರ್ವಾದ ಮಾಡ್ಬುಟ್ರೆ ಅದೇ ನಮ್ ಭಾಗ್ಯ ಎಂದಿದ್ದಾರೆ.
2018ರಲ್ಲಿ ತೆರೆಗೆ ಬಂದಿದ್ದ ಆಯೋಗ್ಯ ಚಿತ್ರ 40ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಶತಕ ಬಾರಿಸಿದ್ದ. ಜೊತೆಗೆ ಗ್ರಾಮ್ಯ ಭಾಷೆ, ಮನಸ್ಸಿಗೆ ಮುದ ನೀಡುವ ಹಾಡುಗಳು, ಸಂಭಾಷಣೆ ಸೇರಿದಂತೆ ಇನ್ನಿತರೆ ಅಂಶಗಳು ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಟ್ಟಿತ್ತು. ನಟ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಕಾಂಬಿನೇಷನ್ ಮೋಡಿ ಮೋಡಿತ್ತು. ಇದೇ ಕಾರಣಕ್ಕೆ ಈ ಜೋಡಿಯ ಮತ್ತೊಂದು ಸಿನಿಮಾ ಯಾವುದು ಎನ್ನುವುದು ಎನ್ನುವ ಮಾತುಗಳು ಕೇಳಿ ಬಂದಿದ್ದವು ಅದಕ್ಕೆ ಇದೀಗ ಉತ್ತರ ಸಿಕ್ಕಿದೆ.