“ಮುಗಿಲ ಮಲ್ಲಿಗೆ” ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ನಾಲ್ಕು ದಶಕಗಳ ಹಿಂದೆ ತೆರೆಕಂಡ ಸೂಪರ್ ಹಿಟ್ ಚಿತ್ರ ಮುಗಿಲ ಮಲ್ಲಿಗೆ. ಇದೀಗ ಅದೇ ಶೀರ್ಷಿಕೆಯಡಿ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ. ಎ ಎನ್ ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ರೆಡ್ಡಿ ಚಿತ್ರ ನಿರ್ಮಿಸುತ್ತಿದ್ದು, ಈಗಾಗಲೇ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಈ ಹಿಂದೆ ತೆಲುಗಿನಲ್ಲಿ ರುದ್ರಾಕ್ಷಪುರಂ ಹಾಗು ಪ್ರೇಮಭಿಕ್ಷ ಸಿನಿಮಾ ನಿರ್ದೇಶಿಸಿರುವ ಆರ್. ಕೆ. ಗಾಂಧಿ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.ತಮ್ಮನ ಸಾವಿಗೆ ಕಾರಣಳಾದ ನಾಯಕಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ಖಳ ನಾಯಕನೊಂದಿಗೆ ನಾಯಕ ಹೇಗೆ ಹೋರಾಟ ನಡೆಸಿ, ತನ್ನ ಹುಡುಗಿಯನ್ನು ಹೇಗೆ ಕಾಪಾಡುತ್ತಾನೆ ಎನ್ನುವುದೇ ಮುಗಿಲ ಮಲ್ಲಿಗೆ ಚಿತ್ರದ ಕಥಾವಸ್ತು.

ಕಮರೊಟ್ಟು ಚೆಕ್ ಪೆÇೀಸ್ಟ್, ಒಲವೇ ಮಂದಾರ -2 ಖ್ಯಾತಿಯ ನಟ ಸನತ್ ಹಾಗೂ ಸಹನಾಗೌಡ ಚಿತ್ರದ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಗಿಲ ಮಲ್ಲಿಗೆ ಸಿನಿಮಾಗೆ ಹೊಸಕೊಟೆ ಸುತ್ತ ಮುತ್ತಲಿನ ಗಟ್ಟಿಗನಬ್ಬೆ, ಪೂಜೇನ ಅಗ್ರಹಾರ, ಕಂಬ್ಳಿಪುರ ಕಾಟೇರಮ್ಮ, ಭಕ್ತರಹಳ್ಳಿ ಮುಂತಾದ ಲೊಕೇಶನ್ ಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದ್ದು, ಸಧ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸಲಾಗುವುದು.
ಚಿತ್ರಕ್ಕೆ ಅಭಿನಂದನ್ ಶೆಟ್ಟಿ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಸಂಗೀತ, ರಾಜೀವ್ ಕೃಷ್ಣ ಸಾಹಿತ್ಯ, ವಿನಯ್ ಜಿ. ಆಲೂರು ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಮೋಹನ್ ಕುಮಾರ್ ಪ್ರಸಾದನ, ಮಲ್ಲಿಕಾರ್ಜುನ ಕಲಾ ನಿರ್ದೇಶನ ಚಿತ್ರಕ್ಕಿದೆ.

ಚಿತ್ರದಲ್ಲಿ ಬಲರಾಜ್‍ವಾಡಿ, ಶಂಕನಾದ ಆಂಜಿನಪ್ಪ ,ಅನ್ನಪೂರ್ಣ, ಶಂಕರ್, ಎಂ.ವಿ. ಸಮಯ್, ಮೋನಿಕ, ಚಂದ್ರಕಲ , ರೇಣುಕಾ, ಜಯರಾಂ, ವಸಂತ ನಾಯಕ್, ಪ್ರವೀಣ್, ಧರಣಿ, ಕಿಶೋರ್ ಕುಂಬ್ಳೆ, ಶಿವು ಕಾಸರಗೋಡು, ಬೃಂದ ಹಾರಿಕ, ರಾಜೇಶ್ , ರವಿ, ಧಿನ, ಕಿರಣ್ ಗಟ್ಟಿಗನಬ್ಬೆ ಮುಂತಾದವರು ನಟಿಸುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಚಿತ್ರ ತೆರೆಗೆ ತರಲು ಚಿತ್ರತಂಡ ಸಜ್ಜಾಗುತ್ತಿದೆ.