Warner released of 'UI': Upendra exclaims that 'power is more important than defiance'

“ಯುಐ” ಚಿತ್ರದ ವಾರ್ನರ್‌ ಬಿಡುಗಡೆ : ಧಿಕ್ಕಾರಕ್ಕಿಂತ ಆಧಿಕಾರ ಮುಖ್ಯ ಎಂದು ಗಹಗಹಿಸಿದ ಉಪೇಂದ್ರ - CineNewsKannada.com

“ಯುಐ” ಚಿತ್ರದ ವಾರ್ನರ್‌ ಬಿಡುಗಡೆ : ಧಿಕ್ಕಾರಕ್ಕಿಂತ ಆಧಿಕಾರ ಮುಖ್ಯ ಎಂದು ಗಹಗಹಿಸಿದ ಉಪೇಂದ್ರ

ಉಪ್ಪಿ- 2″ ಚಿತ್ರದ ಬಳಿಕ ಬರೋಬ್ಬರಿ 9 ವರ್ಷದ ಬಳಿಕ
ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳಿರುವ ವಿಭಿನ್ನ ಜಾನರ್ ಚಿತ್ರ ” ಯು ಐ ” ಇದೇ ತಿಂಗಳ 20 ರಂದು ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರದ “ವಾರ್ನರ್” ಬಿಡುಗಡೆ ಇತ್ತು. ಕಿತ್ತು ತಿನ್ನುವ ಬಡತನದ ಜಾಗಕ್ಕೆ ಐಶಾರಾಮಿ ಕಾರಿನಲ್ಲಿ ಆಗಮಿಸುವ ಉಪೇಂದ್ರ ಜನರ ದಿಕ್ಕಾರಕ್ಕೆ ಸೆಡ್ಡು ಹೊಡೆದು
“ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ” ಎನ್ನುವ ಫವರ್ ಪುಲ್ ಸಂಭಾಷಣೆ , ಕಣ್ಮನ ಸೆಳೆಯುವ ಛಾಯಾಗ್ರಹಣವಿರುವ “ವಾರ್ನರ್ “ಬಿಡುಗಡೆಯಾಗಿದ್ದು ಚಿತ್ರರಂಗದಲ್ಲಿ ಧೂಳ್ ಎಬ್ಬಿಸುವ ಎಲ್ಲಾ ಮುನ್ಸೂಚನೆ ನೀಡಿದೆ.

ಕೋವಿಡ್ ನಿಂದ ಜಾಗತಿಕ ಹಣದುಬ್ಬರ ಸಮಸ್ಯೆ ಸೃಷ್ಡಿಸಿದರೆ ಕೃತಕ‌ಬುದ್ದಿ ಮತ್ತೆಯಿಂದ ನಿರುದ್ಯೋಗ ಸಮಸ್ಯೆ ಯುದ್ದದಿಂದ
2040 ರಲ್ಲಿ ದೇಶ ಹೇಗಿರಬಹುದು ಎನ್ನುವುದನ್ನು ತೆರೆಯ ಮೇಲೆ ವಾರ್ನರ್ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಉಪೇಂದ್ರ.

ಉಚಿತ ಮೊಬೈಲ್ ವಿತರಣೆ, ಮಂಗಳ ಗ್ರಹಕ್ಕೆ ಲಗ್ಗೆ, ಅತ್ಯಾಧುನಿಕ ಶಸ್ತಾಸ್ತ್ರ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದರೂ ಬಾಳೆ ಹಣ್ಣು ಖರೀದಿ ಮಾಡಲು ಸಾದ್ಯವಾಗದ ಬಡತನದ ಬೇಗೆಯ ತಿರುಳು ಹೊಂದಿರುವ ಟೀಸರ್ ಮಾದರಿ ವಾರ್ನರ್ ಎಚ್ಚರಿಕೆ ಸಂದೇಶದೊಂದಿಗೆ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂನಲ್ಲಿ ಬಿಡುಗಡೆಯಾಗಿದೆ.

ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಈ ವೇಳೆ ಮಾತನಾಡಿದ ‌ನಟ,ನಿರ್ದೇಶಕ ಉಪೇಂದ್ರ, ಯುಐ ಚಿತ್ರ ಇದೇ 20 ರಂದು ಬಿಡುಗಡೆಯಾಗುತ್ತಿದೆ. ಎರಡು ಚಿತ್ರ ಒಂದೇ ದಿನ ಬಿಡುಗಡೆಯಾಗಿ ಹಿಟ್ ಆಗಿರುವ ಉದಾಹರಣೆ ಇದೆ. ಸುದೀಪ್ ಅವರ ಮ್ಯಾಕ್ಸ್ ಚಿತ್ರಕ್ಕೆ ಒಳ್ಳೆಯದಾಗಲಿ. ಈ ವಿಷಯ ಹೆಚ್ವಿಗೆ ಬೆಳೆಸುವುದು ಬೇಡ ಎಂದರು.

“ಎ” ಚಿತ್ರ ಬಿಡುಗಡೆ ವೇಳೆ ಆಟೋ ಚಾಲಕರಿಗೆ ಸಿನಿಮಾ‌ ತೋರಿಸಿದ್ದೆ. ಉಪ್ಪಿ ಯಾಕಮ್ಮ ಈ ರೀತಿ ಸಿನಿಮಾ ಮಾಡಿದ್ದೀಯ ಅಂತ ಸ್ನೇಹಿತರು ಹೇಳಿದ್ದರು ಪ್ರೇಕ್ಷಕರನ್ನು ಸದಾ ಗೌರವಿಸಬೇಕು ಎಂದು ಹೇಳಿದರು

ಕನ್ ಫ್ಯೂಸ್ ಮಾಡುವುದಿಲ್ಲ ಪ್ರೇಕ್ಷಕರನ್ನು ಕನ್ ವಿನ್ಸ್ ಮಾಡುತ್ತನೆ ಹಾಗೂ ಗೊಂದಲ ಆದರೆ ಏನೂ ಮಾಡಲು ಆಗಲ್ಲ ಯುಐ ಪಾರ್ಟ್, ಮಾಡಬೇಕೋ ಬೇಡವೊ ಎನ್ನುವುದನ್ನು ಯಶಸ್ಸಿನ ಪತ್ರಿಕಾಗೋಷ್ಠಿಯಲ್ಲಿ ಹೇಳೋಣ ಎಂದು ಅಲ್ಲಿಯೂ ಕುತೂಹಲ ಕಾಯ್ದುಕೊಂಡರು ಉಪೇಂದ್ರ

ನಿರ್ಮಾಪಕ ಕೆಪಿ ಶ್ರೀಕಾಂತ್ ಮಾತನಾಡಿ ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ಪ್ರಚಾರ ಮಾಡುತ್ತೇವೆ. ವಿಶ್ವದಾದ್ಯಂತ ಬಿಡುಗಡೆ ,ಅಮೇರಿಕಾ, ಕೆನಡಾ, ಮದ್ಯ ಪ್ರಾಚ್ಯ ಆಸ್ಟ್ರೇಲಿಯಾ ಸೇರಿದಂತೆ ಮತ್ತಿತರ ಕಡೆ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ .‌ಚಿತ್ರದ ಪ್ರೀರಿಲೀಸ್ ವೇಳೆ ಚಿತ್ರದ ಬ್ಯುಸಿನೆಸ್ ಬಗ್ಗೆ ಮಾತನಾಡೋಣ ಎಂದರು
.
ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ‌, ಎಲ್ಲರ ಪಾಯಿಂಟ್ ಆಫ್ ವ್ಯೂ ನಲ್ಲಿ ಮಾಡಿದ ಸಿನಿಮಾ. 100 ವರ್ಷದ ನಂತರ ಉಪೇಂದ್ರ ಎನ್ನುವ ನಿರ್ದೇಶಕ ಇದ್ದರು ಎನ್ನುವುದನ್ಮು ಈಗಲೇ ತೋರಿಸುತ್ತಿದ್ದಾರೆ, ಸಾಮಾಜಿಕ‌ ವಿಷಯ, ತತ್ವಶಾಸ್ತ ಸೇರಿದಂತೆ ಎಲ್ಲಾ ವಿಷಯಗಳ‌ ಬಗ್ಗೆ ಮಾತನಾಡುತ್ತಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ.

ಸಾಹಸ ನಿರ್ದೇಶಕ ರವಿವರ್ಮಾ ಹಾಗು ಚೇತನ್ ಡಿಸೋಜಾ ಮಾತನಾಡಿ ಉಪೇಂದ್ರ ಜೊತೆ ಸಿನಿಮಾ ಮಾಡುವುದೆಂದರೆ ಪ್ರತಿ‌ಬಾರಿಯೂ ಅಪ್ ಡೇಟ್ ಆಗಬೇಕು ಎಂದರು

ಲಹರಿ ವೇಲು‌ ಮಾತನಾಡಿ , ಯುಐ ಎಲ್ಲಾ ಭಾಷೆಗಳಿಗೂ ಸಲ್ಲುವ ಸಿನಿಮಾ , ಜನರು ಇಷ್ಟಪಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಜಿ.ಮನೋಹರನ್, ಹಾಗು ಕೆಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ನವೀನ್ ಮನೋಹರನ್ ಸಹ ನಿರ್ಮಾಣ ಚಿತ್ರಕ್ಕಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin