ನಾನೊಬ್ಬ ಅತೃಪ್ತ ನಿರ್ದೇಶಕ : ಇನ್ನೂ ಏನೋ ಮಾಡಬೇಕು ಎನ್ನುವ ತುಡಿತ ಇರುತ್ತೆ ; ನಟ, ನಿರ್ದೇಶಕ ಉಪೇಂದ್ರ
” ನಾನೊಬ್ಬ ಅತೃಪ್ತ ನಿರ್ದೇಶಕ ಕೊನೆತನಕ ಏನಾದರೂ ಮಾಡಬೇಕು ಎನ್ನುವ ತುಡಿತ ಇದ್ದೇ ಇರುತ್ತದೆ. ಎಲ್ಲರೂ ಮುಂದೆ ತಳ್ಳಿದ್ದ ರಿಂದ ಡಿಸೆಂಬರ್ 20 ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರದಲ್ಲಿ ಕೋಪ ಅಕ್ರೋಶ ಮಾತ್ರವಲ್ಲ, ಮಜಾ ನೂ ಇರುತ್ತೆ ಚಿತ್ರದಲ್ಲಿ ಪಾತ್ರ ಏನು ಎನ್ನುವುದನ್ನು ಚಿತ್ರಮಂದಿರಲ್ಲಿಯೇ ನೋಡಬೇಕು “..”
ಹೀಗಂತ ಹೇಳುವ ಮೂಲಕ ಯುಐ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನುಕಾಯ್ದುಕೊಂಡರು ನಟ ,ನಿರ್ದೇಶಕ ಉಪೇಂದ್ರ.
ಸಿನಿಮಾ ಮಾಡೋದು ಹೋರಾಟ. ಮೊದಲು ಕನ್ನಡದಲ್ಲಿ ಮಾಡಬೇಕು ಅಂದುಕೊಂಡಿದ್ದೆ. ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಒಂದಷ್ಟು ಮಂದಿ ನೀವು ಮಾಡುವ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದ್ದು ಹಾಗಾಗಿ ಮಾಡಿ ಎಂದರು.ಈ ಕಾರಣಕ್ಕೆ ” ಯು ಐ” ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ ಎಂದರು
” ಯುಐ ” ಚಿತ್ರದ ವಾರ್ನರ್ ಬಿಡುಗಡೆ ಬಳಿಕ ಮಾತಿಗಿಳಿದ ಉಪೇಂದ್ರ,ಡಿಸೆಂಬರ್ ತಿಂಗಳು ಅದೃಷ್ಟ ಅಂತಲ್ಲ. ರಜಾದಿನಗಳಲ್ಲಿ ಎಲ್ಲಾ ಚಿತ್ರಗಳ ನಿರ್ಮಾಪಕರು ಬರಬೇಕು ಬಯಸುತ್ತಾರೆ. ಹೀಗಾಗಿ ಎರಡು ಮೂರು ಸಿನಿಮಾ ಬರುತ್ತವೆ. ಧೈರ್ಯವೋ ಹೊರತು ಬೇರೆ ಏನೂ ಇಲ್ಲ. ಸೂಪರ್ ಚಿತ್ರಕ್ಕೂ “ಯುಐ” ಚಿತ್ರಕ್ಕೆ ಸಂಬಂದವಿಲ್ಲ.ಕಮರ್ಷಿಯಲ್ ಸಿನಿಮಾ ರೀತಿ ಎಂಜಾಯ್ ಮಾಡಬಹುದು. ಈ ನಡುವೆ ಟ್ವಿಸ್ಟ್ , ಟರ್ನ್ ಕೂಡ ಇದೆ ಎಂದರು.
ಜನಸಾಮಾನ್ಯರ ದೃಷ್ಟಿಕೋನದಿಂದ ಪ್ರತಿಬಾರಿಯೂ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ಬೇರೆ ಬೇರೆ ಜಾನರ್ ಸಿನಿಮಾ ತಂದಿದ್ದೇನೆ. ಕುತೂಹಲಕಾರಿ ಸಿನಿಮಾ, ನಿರ್ದೆಶಕನಾಗಿ ಒಂದೇ ಒಂದು ವಿಷಯ ಹೇಳದೆ ಸಿನಿಮಾ ತೋರಿಸಬೇಕು ಎನ್ನುವ ಆಸೆ. ಆದರೆ ಟ್ರಂಡ್ ಬದಲಾಗಿದೆ. ಹೀಗಾಗಿ ಪ್ರೇಕ್ಷಕರನ್ನು ಸೆಳೆಯಲು ಚಿತ್ರದ ಒಂದಷ್ಟು ಮಾಹಿತಿ ನೀಡುವುದು ಅನಿವಾರ್ಯ ಎಂದು ಹೇಳಿದರು.
ಗುರು ಮೊದಲು ಬರ್ತಾರೆ ಆ ಮೇಲೆ ಶಿಷ್ಯ ಬರ್ತಾರೆ ಎನ್ನುವ ಕಿಚ್ಚ ಸುದೀಪ್ ಹೇಳಿಕೆ ಉತ್ತರಿಸಿದ ಉಪೇಂದ್ರ ಸುದೀಪ್ ಹೇಳಿದ ಮೇಲೆ ನಾನೇನು ಹೇಳೋದು ಎಂದು ಆ ವಿಷಯಕ್ಕೆ ಅಲ್ಲಿಗೇ ಪೂರ್ಣವಿರಾಮ ಹಾಕಿದರು.
ನಾವು ನೀವು ಸೇರಿದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾದ್ಯ ಸಾದ್ಯ. ಚಿತ್ರದ ಕಥೆ ಅರ್ಥ ಮಾಡಿಕೊಂಡರೆ ಎಕ್ಟ್ರಾಡಿನರಿ ಆಗಿ ಬಿಡುತ್ತೀರಿ..ಚಿತ್ರ ಚೆನ್ನಾಗಿ ಬಂದಿದ್ದರೆ ನವೀನ್ ಕಾರಣ. ಚೆನ್ನಾಗಿ ಬಂದಿದ್ದರು ಅವರೇ ಕಾರಣ. ನಿರ್ದೇಶಕರು ಹಾಕಿದ ಗೆರೆ ದಾಟ ಬಾರದು ಈ ಕಾರಣಕ್ಕಾಗಿ ಅವರ ಜೊತೆ ಆಗಾಗ ಜಗಳ ಮಾಡಿದ್ದು ಉಂಟು ಎಂದರು
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಬ್ಯುಸಿ ಇದ್ದರೂ ಪೋನ್ ಎತ್ತುತ್ತಾರೆ. ನಾಳೆ ಬೇಕು ಅಂದರೆ ರೆಡಿ ಮಾಡಿಕೊಡ್ತಾರೆ. ಅದ್ಬುತ ತಂಡ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಇದೇ 25 ಕ್ಕೆ ಚಿತ್ರ ನೋಡಿ ನಿಮಗೆ ಗೊತ್ತಾಗುತ್ತೆ ಎಂದರು
“ಎ” ಚಿತ್ರಕ್ಕೆ ಸೆನ್ಸಾರ್ ಅಧಿಕಾರಿ ಪ್ರಮಾಣ ಪತ್ರ ನೀಡಲ್ಲ ಎಂದು ಎದ್ದು ಹೋಗಿದ್ದರು. ನರ್ತಕಿ ಚಿತ್ರಮಂದಿರದಲ್ಲಿ ಗೇಟ್ ಕೀಪರ್ ಕೂಡ ಸಿನಿಮಾ ಓಡಲ್ಲ ಅಂದ್ರು ,ಫೆನಾಸ್ಸರ್ ಕೂಡ ಹಣ ಕೊಟ್ಟುಬಿಡಿ ಎಂದಿದ್ದರು. ಆ ಮೇಲೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು ಎಂದು ಹಳೆಯದನ್ನು ನೆನಪು ಮಾಡಿಕೊಂಡರು.