ಯುವ ಕಲಾವಿದರ ಮಾರ್ಗದರ್ಶಕ, ಸರಸ್ವತಿ ಪುತ್ರ : ಕಿಚ್ಚ ಸುದೀಪ್ ಹಾಡಿ ಹೊಗಳಿದ ಕಲಾವಿದರು
ಕನ್ನಡ ಚಿತ್ರರಂಗದ ಸಂಭಾವಿತ ವ್ಯಕ್ತಿ, ನಟ, ನಿರ್ದೇಶಕ, ನಿರೂಪಕ,ಕ್ರೀಡಾಪಟು ಹೀಗೆ ವಿವಿಧ ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಸ್ಯಾಂಡಲ್‍ವುಡ್‍ನ ಬಾದ್‍ಶಾ ಕಿಚ್ಚ ಸುದೀಪ್‍ತಮ್ಮ ಚಿತ್ರದಲ್ಲಿನ ಕಲಾವಿದರನ್ನು ಪ್ರೀತಿಸುವ ಮತ್ತು ನಡೆಸಿಕೊಳ್ಳುವ ರೀತಿಗೆ ಕಲಾವಿದರು ಮಾರುಹೋಗಿದ್ದಾರೆ. ಇದೇ ಕಾರಣಕ್ಕೆ ಸುದೀಪ್ ಅವರನ್ನು ಸರಸ್ವತಿ ಪುತ್ರ,ಯುವ ಕಲಾವಿದರ ಮಾರ್ಗದರ್ಶಕ ಎಂದೆಲ್ಲಾ ಹಾಡಿ ಹೊಗಳಿಸಿದ್ದಾರೆ.
ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ “ಮ್ಯಾಕ್ಸ್” ಇದೇ ತಿಂಗಳ 25ಕ್ಕೆ ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲ್ಲೆಯಲ್ಲಿ ಚಿತ್ರತಂಡ ಇದೇ ಮೊದಲ ಬಾರಿಗೆ ಮಾದ್ಯಮ ಮಂದಿಯ ಜೊತೆ ಮುಖಾಮುಖಿಯಾಗಿತ್ತು. ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಸುದೀಪ್ ಅವರ ಸರಳತೆ, ವಿನಯತೆ, ಕೆಲಸದ ಮೇಲಿನ ಪ್ರೀತಿ, ಬದ್ದತೆ ಸೇರಿದಂತೆ ಮತ್ತಿತರ ವಿಷಯಗಳನ್ನು ಕೊಂಡಾಡಿದ್ದಾರೆ.
ಸುದೀಪ್ ಸರ್ ಸರಸ್ವತಿ ಪುತ್ರ: ಸುಕೃತಾ ವಾಗ್ಲೆ
2017ರಲ್ಲಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿದ್ದೆ. ಅದಕ್ಕೆ ಸುದೀಪ್ ಸರ್ ಪ್ರತಿಕ್ರಿಯೆ ನೀಡಿದ್ದರು. ಒಂದು ದಿನ ಅವರ ಜೊತೆಗೆ ಕೆಲಸ ಮಾಡುತ್ತೇನೆ ಅಂದುಕೊಂಡಿರಲಿಲ್ಲ., ಅದು ಮ್ಯಾಕ್ಸ್ ಚಿತ್ರದಿಂದ ಕೂಡಿ ಬಂದಿದೆ. ಸುದೀಪ್ ಸರ್ ಸರಸ್ವತಿ ಪುತ್ರ. ಕಲಾ ಸರಸ್ವತಿಎಲ್ಲಾ ಲಲಿತಾ ಕಲೆಗಳನ್ನು ಅವರಿಗೆ ಧಾರೆ ಎರೆದುಕೊಟ್ಟಿದ್ದಾರೆ ಎಂದು ನಟಿ ಸುಕೃತಾ ವಾಗ್ಲೆ ಮೆಚ್ಚುಗೆ ಮಾತನಾಡಿದರು.
ಚಿತ್ರದಲ್ಲಿ ಸಾಕಷ್ಟು ಕಲಿತಿದ್ದೇನೆ. ಮ್ಯಾಕ್ಸ್ ಚಿತ್ರದಲ್ಲಿ ಮ್ಯಾಕ್ಸಿಮ್ ಮಾಸ್ ನೀಡಲಿದೆ. ಇದೇ 25 ರಂದು ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಅತಿದೊಡ್ಡ ಯಶಸ್ಸು ಸಿಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಶಿಸ್ತು ಕಲಿಸಿದ್ದಾರೆ; ವಿಜಯ್ ಚೆಂಡೂರು
ಕಿಚ್ಚ ಸುದೀಪ್ ಅವರ ಜೊತೆ ಮ್ಯಾಕ್ಸ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು ಖುಷಿಯ ವಿಚಾರ. ನಾನು ನಟಿಸಿರುವ ಕೆಲವೇ ಕೆಲವು ಪಾತ್ರಗಳಲ್ಲಿ ಹೆಚ್ಚು ಖುಷಿ ಕೊಟ್ಟ ಪಾತ್ರ ಮ್ಯಾಕ್ಸ್ ಚಿತ್ರದ್ದು. ಸಿನಿಮಾದಲ್ಲಿ ನಟಿಸಿದ್ದೇನೆ ಎನ್ನುವುದಕ್ಕಿಂತ ಕಲಿತಿದ್ದೇ ಹೆಚ್ಚು.
ಕಲಾವಿದನಿಗೆ ಪ್ರತಿಭೆಯಷ್ಟೇ ಮುಖ್ಯವಲ್ಲ, ಶಿಸ್ತು ಕೂಡ ಅಷ್ಟೇ ಮುಖ್ಯ ಎನ್ನುವುದನ್ನು ಸುದೀಪ್ ಸಾರ್ ಅವರಿಂದ ನೋಡಿ ಕಲಿತಿದ್ದೇನೆ,.ಯಾವ ವಿಚಾರವನ್ನೂ ನಿರ್ಲಕ್ಷ್ಯ ಮಾಡಬಾರದು, ತಾವು ಸನ್ನಿವೇಶದಲ್ಲಿ ನಟಿಸದೇ ಇದ್ದರೂ ಅಲ್ಲಿ ಪ್ರಸ್ತುತಿ ಮುಖ್ಯ. ಅದರಿಂದ ಕಲಿಯುವುದು ಇದೆ ಎನ್ನುವುದನ್ನು ಹೇಳಿಕೊಟ್ಟ ಗುರು ಎಂದು ಗುಣಗಾನ ಮಾಡಿದರು.
ಮ್ಯಾಕ್ಸ್ ಚಿತ್ರ ಇದೇ ತಿಂಗಳ 25ಕ್ಕೆ ತೆರೆಗೆ ಬರುತ್ತಿದೆ. ಚಿತ್ರ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದೇನೆ, ನನ್ನಂತೆ ಇತರೆ ಕಲಾವಿದರೂ ಮತ್ತು ಸುದೀಪ್ ಸರ್ ಅವರ ಅಭಿಮಾನಿಗಳು ಕೂಡ. ಅವರ ಜೊತೆ ಕೆಲಸ ಮಾಡಿದ್ದ ಕಲಿಯಲು ಅವಕಾಶ ಮಾಡಿಕೊಟ್ಟಿತು ಎಂದರು.
ನಟನೆಗಿಂತ ಕಲಿತಿದ್ದೇ ಹೆಚ್ಚು: ಸಂಯುಕ್ತ ಹೊರನಾಡು
ಮ್ಯಾಕ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುವುದಕ್ಕಿಂತ ಚಿತ್ರದಿಂದ ಮತ್ತು ಸುದೀಪ್ ಸರ್ ಅವರಿಂದ ಕಲಿತಿದ್ದೇ ಹೆಚ್ಚು. ಬೆಳಗಿನ ಜಾವ 2 ಗಂಟೆಯಾಗಲಿ ಅಥವಾ 3 ಗಂಟೆಯಾಗಲಿ ಅದೇ ಏನರ್ಜಿ, ಬಿಗ್ ಬಾಸ್, ಸಿಸಿಎಲ್ ಸೇರಿದಂತೆ ಇನ್ನಿತರೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೂ ಕಿಂಚಿತ್ತೂ ಆಯಾಸ ಸುದೀಪ್ ಸರ್ ಅವರಲ್ಲಿ ಕಾಣುತ್ತಿರಲಿಲ್ಲ. ಅವರ ಜೊತೆ ನಟಿಸಿದ್ದೇ ಪುಣ್ಯ ಎಂದರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಯುಕ್ತ ಹೊರನಾಡು.
ಡಬ್ಬಿಂಗ್ ಮಾಡುವಾಗ ಇರಲಿ, ಅಥವಾ ಎಷ್ಟು ಮೇಕಪ್ ಇರಬೇಕು ಎನ್ನುವುದು ಸೇರಿದಂತೆ ಹಲವು ವಿಷಯ ಕಲಿಯಲು ನೆರವಾಯಿತು. ಚಿತ್ರದಲ್ಲಿ ನಟಿಸಿದ್ದು ಖುಷಿಯಾಯಿತು. ಕನ್ನಡ ಚಿತ್ರರಂಗಕ್ಕೆ ಬೇಕಾದ ಆಕ್ಷನ್,.ಮಾಸ್, ಸ್ಟೈಲ್, ಮ್ಯಾಕ್ಸಿಮಂ ಈ ಚಿತ್ರದಲ್ಲಿ ಸಿಗುತ್ತದೆ. ಚಿತ್ರ ವೀಕ್ಷಣೆಗೆ ಎದುರು ನೋಡುತ್ತಿದ್ದೇನೆ ಎಂದರು.
ನರ್ವಸ್ ಆಗಿದ್ದೇನೆ : ನಾಗಾರ್ಜುನ
ಕಿಚ್ಚ ಸುದೀಪ್ ಅವರ ಜೊತೆ ನಟಿಸಿದ್ದು ಖುಷಿಕೊಟ್ಟಿದೆ. ಜೊತೆಗೆ ಹೆಚ್ಚು ನರ್ವಸ್ ಆಗಿದ್ದೇನೆ. ಅವರ ಅತಿದೊಡ್ಡ ಅಭಿಮಾನಿ ನಾನು. ಒಳ್ಳೆಯ ಪಾತ್ರ ಸಿಕ್ಕಿದೆ. ಜೊತೆಗೆ ಎಲ್ಲಾ ಕಲಾವಿದರಿಂದ ಉತ್ತಮ ಸಹಕಾರ ಸಿಕ್ಕಿತು. ಸುದೀಪ್ ಸರ್ ಅವರ ಮಾರ್ಗದರ್ಶನದಿಂದ ಇನ್ನಷ್ಟು ಉತ್ತಮ ನಟನಾಗುವ ಭರವಸೆ ಮೂಡಿಸಿದೆ. ಕನ್ನಡ ಚಿತ್ರರಂಗಕ್ಕೆ ಅತಿದೊಡ್ಡ ಸಿನಿಮಾಆಗುತ್ತದೆ. ಮ್ಯಾಕ್ಸ್ ಚಿತ್ರವನ್ನು ವೀಕ್ಷಿಸಲು ಕಾತುರದಿಂದ ಇರುವುದಾಗಿ ಹೇಳಿದರು ನಟ ನಾಗಾರ್ಜುನ್
ಪ್ರೀತಿಗೆ ಅಬಾರಿ: ಕಿಚ್ಚ ಸುದೀಪ್
ಕಲಾವಿದರ ಮಾತುಗಳಿಂದ ಹೃದಯ ತುಂಬಿಕೊಂಡ ನಟ ಕಿಚ್ಚ ಸುದೀಪ್ ಎಲ್ಲರ ಪ್ರೀತಿಗೆ ಅಬಾರಿ, ನಿಮ್ಮ ಮಾತು, ನೀವು ತೋರಿಸುತ್ತಿರುವ ಪ್ರೀತಿಗೆ ಮಾತು ಬರುತ್ತಿಲ್ಲ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಚಿತ್ರದಲ್ಲಿ ಕೆಲಸ ಮಾಡಿರುವ ಕಲಾ ನಿರ್ದೇಶಕ ಶಿವಕುಮಾರ್ ಅವರು ಮಾಣಿಕ್ಯದಿಂದ ಜೊತೆಯಾಗಿ ಮ್ಯಾಕ್ಸ್ ತನಕ ಮುಂದುವರಿದಿದೆ. ಅವರೊಬ್ಬ ಕಲಾನಿರ್ದೇಶಕ ಎನ್ನುವದಕ್ಕಿಂತ ನನ್ನ ಸಹೋದರ ಎಂದು ಮೆಚ್ಚುಗೆ ಸೂಚಿಸಿದರು.
ಛಾಯಾಗ್ರಾಹಕ ಶೇಖರ್ ಚಂದ್ರ ಅವರನ್ನು ಎಲ್ಲರೂ ಬೆಂಕಿ ಚಂದ್ರ ಎಂದು ಕರೀತಾರೆ. ನಮ್ಮ ಚಿತ್ರದಲ್ಲಿ ಮಾತು ಬರುವುದಿಲ್ಲವೋ ಎನ್ನುವಂತೆ ಇದ್ದರು. ನಂದಿ ಚಿತ್ರದಿಂದ ನಾವಿಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದೇವೆ. ಅದ್ಬುತ ಕೆಲಸಗಾರ ಎಂದರು
ಇನ್ನೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ತಮ್ಮ ಕೆಲಸದಿಂದ ಮೋಡಿ ಮಾಡಿದ್ದಾರೆ ಎನ್ನುತ್ತಲೇ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ಕಲಾವಿದರು ಮತ್ತು ತಂತ್ರಜ್ಞರ ಕೆಲಸವನ್ನು ಮುಕ್ತಕಂಠದಿಂದ ಪ್ರಶಂಸಿದರು.