"Ega" fame actor Nani's release of 'Suryana Saturday'

“ಈಗ” ಖ್ಯಾತಿಯ ನಟ ನಾನಿ ಅವರ ‘ಸೂರ್ಯನ ಸಾಟರ್ಡೆ’ ಬಿಡುಗಡೆ - CineNewsKannada.com

“ಈಗ” ಖ್ಯಾತಿಯ ನಟ ನಾನಿ ಅವರ  ‘ಸೂರ್ಯನ ಸಾಟರ್ಡೆ’ ಬಿಡುಗಡೆ

ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ ನಟನೆಯ `ಸರಿಪೆÇೀದಾ ಶನಿವಾರಂ’ ತಮಿಳು ಸಿನಿಮಾ ಕನ್ನಡದಲ್ಲಿ ‘ಸೂರ್ಯನ ಸಾಟರ್ಡೆ’ ಹೆಸರಲ್ಲಿ ಇಂದಿನಿಂದ ಆಗಸ್ಟ್ 29ರಿಂದ ಬಿಡುಗಡೆಯಾಗಿದೆ.

ಈ ವೇಳೆ ಮಾತನಾಡಿದ ನಾನಿ, ಕನ್ನಡ ಸಿನಿಮಾಗಳು ಹಾಗೂ ಪ್ರಶಸ್ತಿಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ 28ಕ್ಕೆ ‘ಸೂರ್ಯನ ಸಾಟರ್ಡೆ’ ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿಯೂ ಸಿನಿಮಾ ತೆರೆಗೆ ಬರುತ್ತಿದ್ದು, ಥಿಯೇಟರ್ ನಲ್ಲಿ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡರು.

ಶಿವಣ್ಣನನ್ನು ಭೇಟಿಯಾದ ನಾನಿ

ನಾನಿ ದೊಡ್ಮನೆಗೂ ವಿಸಿಟ್ ಹಾಕಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾತಕಥೆ ನಡೆಸಿದ್ದಾರೆ. ಈ ಹಿಂದೆ ನಾನಿ ನಟನೆಯ ಹಾಯ್ ನಾನ್ನ ಸಿನಿಮಾವನ್ನು ನೋಡಿ ಶಿವಣ್ಣ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು.

`ಸೂರ್ಯನ ಸಾಟರ್ಡೆ’ ಚಿತ್ರವನ್ನ ವಿವೇಕ್ ಆತ್ರೇಯಾ ಡೈರೆಕ್ಷನ್ ಮಾಡುತ್ತಿದ್ದಾರೆ. ಮೂಲಕ ನಾನಿಗೆ ಎರಡನೇ ಬಾರಿಗೆ ವಿವೇಕ್ ಆತ್ರೇಯಾ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಹಿಂದೆ ಅಂಟೆ ಸುಂದರಾನಿಕಿ ಸಿನಿಮಾವನ್ನ ವಿವೇಕ್ ಆತ್ರೇಯಾ ಮಾಡಿದ್ದರು. ಈ ಚಿತ್ರದಲ್ಲಿ ನಾನಿನೇ ಹೀರೋ ಆಗಿದ್ದರು. ಇದು ಫ್ಯಾಮಿಲಿ ಎಂಟರಟೈನಮೆಂಟ್ ಇರೋ ಹಾಸ್ಯಮಯ ಚಿತ್ರವೇ ಆಗಿತ್ತು. ಸೂರ್ಯನ ಸಾಟರ್ಡೆ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು, ತಮಿಳು, ಹಿಂದಿ, ಮಲೆಯಲಾಂ, ಕನ್ನಡ ಹಿಂಗೆ ಎಲ್ಲ ಭಾಷೆಯಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತದೆ.

ಸೂರ್ಯನ ಸಾಟರ್ಡೆ ಸಿನಿಮಾವನ್ನ ದಾನಯ್ಯ ಹಾಗೂ ಕಲ್ಯಾಣ್ ದಾಸರಿ ನಿರ್ಮಾಣ ಮಾಡಿದ್ದಾರೆ. ನಾನಿಗೆ ಜೋಡಿಯಾಗಿ ಪ್ರಿಯಾಂಕಾ ಮೋಹನ್ ನಟಿಸಿದ್ದು, ಎಸ್ ಜೆ ಸೂರ್ಯ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಆಗಸ್ಟ್-29 ತೆರೆಗೆ ಬರ್ತಿರುವ ಚಿತ್ರಕ್ಕೆ ಮುರಳಿ ಜಿ ಕ್ಯಾಮರಾವರ್ಕ್ ಮಾಡಿದ್ದಾರೆ. ಜೇಕ್ಸ್ ಬಿಜೋಯ್ ಸಂಗೀತ ಕೊಟ್ಟಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin