ಆಕ್ಷನ್ ” ಚಿತ್ರ ಮಾಡಬೇಕು ಎನ್ನುವುದು ಬಹುದಿನದ ಕನಸು: ನಟ ವಿನಯ್ ರಾಜ್ ಕುಮಾರ್

ಕಳೆದೊಂದು ದಶಕದಿಂದ ಚಿತ್ರರಂಗದಲ್ಲಿ ಚಿತ್ರರಂಗದಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ದೊಡ್ಮನೆ ಕುಟುಂಬದ ಕುಡಿ, ನಟ ವಿನಯ್ ರಾಜ್ ಕುಮಾರ್ ಇದೇ ಮೊದಲ ಬಾರಿಗೆ ” ಪೆಪೆ” ಚಿತ್ರದ ಮೂಲಕ ಆಕ್ಷನ್ ಜೊತೆಗೆ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರ ಇದೇ 30 ರಂದು ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವಿತ್ತು. ಅಲ್ಲಿ ಇಡೀ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು.

ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ನಟನಾಗಿ ಆ್ಯಕ್ಷನ್ ಚಿತ್ರದಲ್ಲಿ ನಟಿಸಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು.. ಅದು ” ಪೆಪೆ” ಚಿತ್ರದ ಮೂಲಕ ಈಡೇರಿದೆ .ಪೆಪೆ ಚಿತ್ರದಲ್ಲಿ ಆಕ್ಷನ್ ಜೊತೆಗೆ ಹಲವು ವಿಷಯಗಳಿಗೆ .ನಿರ್ದೇಶಕ ಶ್ರೀಲೇಶ್ ನಾಯರ್ , ಕಥೆ ಕೇಳಿದ ತಕ್ಷಣ ನಟಿಸಿಲು ಒಪ್ಪಿಕೊಂಡೆ. ಜೊತೆಗೆ ಕುಟುಂಬದ ಸದಸ್ಯರು ಸೇರಿದಂತೆ ಆಪ್ತರ ಜೊತೆ ಚರ್ಚೆ ನಡೆಸಿ ಚಿತ್ರದ ಕಥೆ ಜೊತೆ ಜರ್ನಿ ಮಾಡಲು ನಿರ್ಧರಿಸಿ ಕಥೆಯೊಂದಿಗೆ ಒಪ್ಪಿಕೊಂಡೆ ಎಂದರು.
“ಪೆಪೆ” ಸೇಡಿನ ಸೇಡಿನ ಕಥೆ ಅಂತ ಹೇಳುವುದು ಕಷ್ಟ ಸಾದ್ಯ. ಕಾಲ್ಪನಿಕ ಊರಲ್ಲಿ ನಾಲ್ಕು ಕುಟುಂಬಗಳ ನಡುವಿನ ಹೋರಾಟದ ಕಥೆಯನ್ನು ಪೆಪೆ ಮೂಲಕ. ತೆರೆಗೆ ಕಟ್ಟಿಕೊಡಲಾಗುತ್ತಿದೆ.. ಒಂದೊಂದು ಪಾತ್ರವೂ ವಿಭಿನ್ನ ಚಿತ್ರದಲ್ಲಿ ಹಲವು ಪಾತ್ರಗಳಿವೆ. ಇದೊಂದು. ಫ್ಯಾಮಿಲಿ ಟ್ರೀ ಮತ್ತು ಪಾತ್ರಗಳ ನಡುವಿನ ಸಂಬಂಧ ಬಿಟ್ಟಿದ್ದೇವೆ. ಅದು ಗೊತ್ತಾದಾಗ, ಸಿನಿಮಾ ಅರ್ಥ ಮಾಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು.
ಚಿತ್ರದಲ್ಲಿ ಪ್ರದೀಪ್ ಎನ್ನುವುದು ನನ್ನ ಪಾತ್ರದ ಹೆಸರು. ಎಲ್ಲರೂ ಪೆಪೆ ಎಂದೂ ಕರೆಯುತ್ತಾರೆ. ಪೆಪೆ ಕುಟುಂಬದ ಗೌರವ ಉಳಿಸಿಕೊಳ್ಳಲು ಏನೆಲ್ಲಾ ಕೆಲಸ ಮಾಡುತ್ತಾನೆ. ಸಂಸ್ಕೃತಿಗೆ ಹತ್ತಿರವಾದ ಚಿತ್ರ ಎಲ್ಲರ ಹೋರಾಟ ಕಥೆ ಇದು. ಚಿತ್ರದಲ್ಲಿ ನಾಲ್ಕು ಕುಟುಂಬಗಳ ನಡುವಿನ ಹೋರಾಟದ ಕಥೆ ತೋರಿಸಿದ್ದೇವೆ. ಪ್ರತೀ ಪಾತ್ರಕ್ಕೂ ಅದರದ್ದೇ ಹೋರಾಟ ಇರುತ್ತದೆ. ಚಿತ್ರದ ಮೂಲಕ ಹಲವು ವಿಷಯಗಳನ್ನು ಹೇಳಿದ್ದೇವೆ ಎಂದರು.
ಪೆಪೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಪ್ರೋತ್ಸಾಹಿಸಬೇಕು ಎಲ್ಲರಿಂದ ಪ್ರತಿಕ್ರಿಯೆ ಸಿಕ್ಕಿದೆ. ಎರಡೂವರೆ ವರ್ಷಗಳ ಪಯಣ, ಕಷ್ಟ ಪ್ರೀತಿ, ಶ್ರಮ ಈ ಚಿತ್ರದಲ್ಲಿ. ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕು ಎಂದು ಕೇಳಿಕೊಂಡರು.
‘ಕೆಲವು ಕಥೆಗಳನ್ನು ಹೂಗಳ ಮೂಲಕ ಹೇಳಬೇಕು. ಕೆಲವು ಕಥೆಗಳನ್ನು ಮಚ್ಚು ಮೂಲಕ ಹೇಳಬೇಕು. ಈ ಕಥೆಗೆ ಮಚ್ಚು ಬೇಕಿತ್ತು. ಹಾಗಾಗಿ, ಬೇರೆಯದೇ ಶೈಲಿಯಲ್ಲಿ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲಾಗಿದೆ.ನಟನಾಗಿ ನನಗೆ ಪ್ರತಿ ಚಿತ್ರವೂ ಇಷ್ಟ. ಎಲ್ಲಾ ಶೈಲಿಯ ಚಿತ್ರಗಳನ್ನೂ ಮಾಡಬೇಕು. ಆದರೆ, ಇದುವರೆಗೂ ಮಾಡಿರಲಿಲ್ಲ. ಹೊಸ ಅನುಭವ ಎಂದರು

ನಿರ್ಮಾಪಕ ಬಿ.ಎಂ ಶ್ರೀರಾಮ್ ಮಾತನಾಡಿ, ಟ್ರೈಲರ್ ಬಿಡುಗಡೆ ನಂತರ ಚಿತ್ರದ ಬಗ್ಗೆ ಪರಭಾಷೆಯಿಂದಲೂ ಬೇಡಿಕೆ ಬಂದಿದೆ. ಚಿತ್ರ ಬಿಡುಗಡೆಗೆ ಒಂದೇ ವಾರ ಬಾಕಿ ಇದ್ದ ಹಿನ್ನೆಲೆಯಲ್ಲಿ ಪ್ರಚಾರದ ಕಾರಣಕ್ಕೆ ಬೇರೆ ಭಾಷೆಗೆ ನೀಡಿಲ್ಲ. ಇಲ್ಲಿ ಚಿತ್ರ ಬಿಡುಗಡೆ ಆದ ಮೇಲೆ ಪರಭಾಷೆಯಲ್ಲಿ ಬಿಡುಗಡೆ ಸೇರಿದಂತೆ ಹಲವು ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಾಯಕಿ ಕಾಜಲ್ ಕುಂದರ್ ಮಾತನಾಡಿ , ಪೆಪೆ ಚಿತ್ರದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ. ಚಿತ್ರ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದರು.
ಚಿತ್ರದಲ್ಲಿ ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ. ಪಡೀಲ್ ಮುಂತಾದವರು ನಟಿಸಿದ್ದಾರೆ.

‘ಪೆಪೆ’ ಚಿತ್ರಕ್ಕೆ ಶ್ರೀಲೇಶ್ ಎಸ್ ನಾಯರ್ ಆಕ್ಷನ್ ಕಟ್ ಹೇಳಿದ್ದು ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಬಂಡವಾಳ ಹಾಕಿದ್ದಾರೆ.