Epic film on Sri Kumareshwara life story

ವಿರಾಗಿ ಶ್ರೀ ಕುಮಾರೇಶ್ವರ ಬೃಹತ್ ರಥಯಾತ್ರೆ - CineNewsKannada.com

ವಿರಾಗಿ ಶ್ರೀ ಕುಮಾರೇಶ್ವರ ಬೃಹತ್ ರಥಯಾತ್ರೆ

6 ರಥ, 13 ದಿನ, 7000 ಕಿಮೀ, 360 ಸಭೆ, 1 ಕೋಟಿ ಜನರ ಉಪಸ್ಥಿತಿ

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನಚರಿತ್ರೆ ಆಧರಿತ ಸಿನಿಮಾ ವಿರಾಟಪುರ ವಿರಾಗಿ ಸಿದ್ಧವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್. ಲಿಂಗದೇವರು ನಿರ್ದೇಶನದ ಈ ಸಿನಿಮಾವನ್ನು ಸಮಾಧಾನ್ ಸಂಸ್ಥೆ ನಿರ್ಮಿಸಿದೆ. ಹಿನ್ನೆಲೆಯಲ್ಲಿ ಮಹಾಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ನೆನಪಿನಲ್ಲಿ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ನಡೆಸಲು ಉದ್ದೇಶಿಸಲಾಗಿದೆ.
6 ರಥ, 13 ದಿನ, 7000 ಕಿಮೀ, 360 ಸಭೆ, 1 ಕೋಟಿ ಜನರ ಉಪಸ್ಥಿತಿ ಇರುವ ಈ ಬೃಹತ್ ರಥಯಾತ್ರೆ ಡಿಸೆಂಬರ್ 20ರಂದು ಆರಂಭವಾಗಲಿದ್ದು, ಜನವರಿ 1ರಂದು ಗದಗನಲ್ಲಿ ಮುಕ್ತಾಯಗೊಳ್ಳಲಿದೆ.
ಈ ರಥಯಾತ್ರೆ ಕುರಿತ ಸಂಪೂರ್ಣ ಮಾಹಿತಿ ಪೋಸ್ಟರ್ ನಲ್ಲಿ ಲಭ್ಯವಿದೆ. ಈ ಮಾಹಿತಿಯನ್ನು ಜನರಿಗೆ ತಲುಪಿಸಿ ಈ ರಥಯಾತ್ರೆ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ.

ಕುಮಾರ ಶಿವಯೋಗಿಗಳು ದಂತಕತೆ
ಕುಮಾರ ಶಿವಯೋಗಿಗಳು ಒಂದು ದಂತಕಥೆ. ಒಬ್ಬ ಮನುಷ್ಯ ತನ್ನ ಜೀವಿತಾಧಿಯಲ್ಲಿ ಏನೇನು ಮಾಡಲು ಅಸಾಧ್ಯವೋ ಅದನ್ನೆಲ್ಲಾ ಸಾಧ್ಯ ಮಾಡಿದ್ದಾರೆ. ಗಾಂಧೀಜಿಯವರು ಭಾರತಕ್ಕೆ ಬರುವ ಕೆಲವು ವರ್ಷಗಳ ಮೊದಲೇ ಗಾಂಧೀಜಿ ಅವರು ಆದರ್ಶ ಅಂದುಕೊಂಡಿದ್ದ ಬಹುತೇಕ ಕೆಲಸಗಳನ್ನು ಮಾಡಿ ತೋರಿಸಿದವರು ಹಾನಗಲ್ಲ ಗುರುಕುಮಾರ ಶಿವಯೋಗಿಗಳು.
– ಪದ್ಮಶ್ರೀ ಪುರಸ್ಕೃತಡಾ. ಗಿರೀಶ್ ಕಾಸರವಳ್ಳಿ

ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳ ಕುರಿತು
ವೀರಶೈವಕ್ಕೊಂದು ಇತಿಹಾಸವಿದೆ; ಅಧ್ಯಯನವಿಲ್ಲ. ಅದರದೇ ಆದ ಸಂಹಿತೆ ಇದೆ; ವ್ಯವಸ್ಥೆ ಇಲ್ಲ. ಸಂಸ್ಕೃತಿ ಇದೆ; ಸಂವಹನ ಸಾಧ್ಯತೆಯ ಸೌಲಭ್ಯಗಳು ಸಾಕಷ್ಟಿಲ್ಲ. ದರ್ಶನವಿದೆ; ಮಾರ್ಗದರ್ಶನವಿಲ್ಲ. ಪರಂಪರೆ ಇದೆ; ಪರಿಣಾಮವಿಲ್ಲ. ಅನುಭಾವವಿದೆ; ಅನುಷ್ಠಾನವಿಲ್ಲ. ಸಿದ್ಧಾಂತವಿದೆ; ಸಾಧನೆ – ಸಿದ್ಧಿಗಳಿಲ್ಲ. ಸಮಾಜ ಇದೆ; ಸಂಘಟನೆ ಇಲ್ಲ!

ಸ್ವಾತಂತ್ರ್ಯಪೂರ್ವದ ಈ ವಿಪರ್ಯಾಸ ದಿನಗಳನ್ನು ನೆನೆದರೆ ಕಣ್ಣೀರು ಬರದಿರದು. ಇಂತಹ ಸಂಕೀರ್ಣ ಸನ್ನಿವೇಶದಲ್ಲಿ ಈ ಎಲ್ಲಾ ಅಸಾಧ್ಯಗಳನ್ನು ಸಾಧ್ಯವಾಗಿಸಲು ಸಮಾಜಕ್ಕೆ ಸಂಜೀವಿನಿಯಾಗಿ ಬಂದವರು ಶ್ರೀ ಹಾನಗಲ್ಲ ಕುಮಾರೇಶ್ವರರು.

ಹಾನಗಲ್ಲ ಗುರುಕುಮಾರ ಶಿವಯೋಗಿಗಳು, ಮಠದಿಂದ ಘಟ ಬೆಳಗಬಾರದು – ಘಟದಿಂದ ಮಠ ಬೆಳಗಬೇಕೆಂದು ಸಾಧಿಸಿ ತೋರಿಸಿದವರು. 19ನೇ ಶತಮಾನದ ಆದಿಯಲ್ಲಿಯೇ ಅವರು ಹೊಸ ಮನ್ವಂತರಕ್ಕೆ ಭದ್ರ ಬುನಾದಿ ಹಾಕಿದವರು.

ಸಮ ಸಮಾಜ ನಿರ್ಮಾಣದ ರೂವಾರಿಗಳು. ಸರ್ವರಿಗೂ ಶಿಕ್ಷಣ. ಅಂಧರ ಬಾಳಿಗೆ ಸಂಗೀತ ಶಿಕ್ಷಣ. ಅಖಿಲ ಭಾರತ ವೀರಶೈವ (ಲಿಂಗಾಯತ) ಮಹಾಸಭಾ ಸ್ಥಾಪನೆ. ಮಹಿಳಾ ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣ. ಶಿವಯೋಗ ಮಂದಿರ ಸ್ಥಾಪನೆ. ವಚನ ತಾಡೋಲೆಗಳ ಸಂಗ್ರಹ ಮತ್ತುಗ್ರಂಥಾಲಯ ಸ್ಥಾಪನೆ. ಅಧುನಿಕ ಕೃಷಿ ಪದ್ಧತಿ ಮತ್ತು ಗೋಶಾಲೆ ಸ್ಥಾಪನೆ. ವಿಭೂತಿ ಹಾಗೂ ಇಷ್ಟ ಲಿಂಗದ ನಿರ್ಮಾಣ, ಹತ್ತಿ ಕರ್ಖಾನೆಯ ಸ್ಥಾಪನೆ. ಆಯುರ್ವೇದಚಿಕಿತ್ಸಾಲಯ ಸ್ಥಾಪನೆ. ಚಿತ್ರಮಂದಿರಗಳ ಪ್ರಾರಂಭ, ಪ್ರಾಣಿ ಬಲಿ ನಿಷೇಧ.
ಹೀಗೆ ಹತ್ತು ಹಲವಾರು ಸಾಧ್ಯತೆಗಳನ್ನು ಸಾಧ್ಯವಾಗಿಸಿದವರು ಮತ್ತುಒಬ್ಬ ವ್ಯಕ್ತಿತನ್ನಜೀವಿತಾವಧಿಯಲ್ಲಿ ಇಷ್ಟೆಲ್ಲಾ ಮಾಡಬಹುದೆ ಎಂಬುದಕ್ಕೆ ಸಾಕ್ಷಿ ಪೂಜ್ಯ ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳು.
ಸಮಾಜದ ಕಣ್ಣೀರನ್ನು ಒರಸಿ ಸದೃಢ ಸಮಾಜವನ್ನು ನಿರ್‍ಮಿಸಲುತಮ್ಮಜೀವನವನ್ನೆ ಶ್ರೀಗಂಧದಂತೆ ತೇಯ್ದು ಸುಗಂಧ ಬೀರಿದವರು.

ಚಿತ್ರತಂಡದ ಪರಿಚಯ
ಸಂಗೀತ ನಿರ್ದೇಶನ: ಮಣಿಕಾಂತ್ ಕದ್ರಿ, ಛಾಯಾಗ್ರಹಣ: ಅಶೋಕ್ ವಿ ರಾಮನ್, ಸಂಕಲನ: ಎಸ್ ಗುಣಶೇಖರನ್, ವಸ್ತ್ರ ವಿನ್ಯಾಸ: ಶಂಕರ್ ಎಚ್ ಬಿ, ಪ್ರಸಾದನ: ರಮೇಶ್ ಬಾಬು, ಕಲೆ: ಶರವಣ, ಲೈಟ್ ಯುನಿಟ್: ಸೆಲ್ವಂ, ಪಾಪ ಔಟ್ ಡೋರ್ ಯುನಿಟ್

ಪೂರ್ತಿಯಾಗಿ ಓದಿ

admin

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin