ಸವಾಲಿನ ಪಾತ್ರದಲ್ಲಿ ನಟಿಸುವಾಸೆ – ನಟಿ ಅಧ್ವಿತಿ ಶೆಟ್ಟಿ ಮನದಾಸೆ

ಸವಾಲಿನ ಜೊತೆಗೆ ತನ್ನೊಳಗೆ ಇರುವ ಕಲಾವಿದೆಯನ್ನು ಹೊರಗೆ ಹಾಕುವ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸದಾ ಬಯಸುತ್ತೇನೆ.. ಅದಕ್ಕೆ ಪೂರಕವಾಗಿ ಸಿಕ್ಕ ಚಿತ್ರ “ಬ್ರಹ್ಮ ಕಮಲ”.
ಹೀಗಂತ ಮಾಹಿತಿ ಹಂಚಿಕೊಂಡರು ಪ್ರತಿಭಾನ್ವಿತ ನಟಿ ಅಧ್ವಿತಿ ಶೆಟ್ಟಿ. ಚಿತ್ರದಲ್ಲಿ ಮಾನಸಿಕವಾಗಿ ನೊಂದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದ್ದೇನೆ. ಈ ಪಾತ್ರ ನನಗೆ ಸವಾಲಿನಿಂದ ಕೂಡಿದೆ. ನಟಿಯಾಗಿ ಈ ರೀತಿಯ ಪಾತ್ರ ಮಾಡುವುದೂ ಇಷ್ಟ.
ಬ್ರಹ್ಮಕಮಲದಲ್ಲಿ ಪಾತ್ರ ಒಪ್ಪಿಕೊಳ್ಳಲು ಎರಡು ಮೂರು ಕಾರಣಗಳಿವೆ. ಒಂದು ಮಾನಸಿಕವಾಗಿ ನೊಂದ ಹುಡುಗಿಯ ಪಾತ್ರ ಒಂದಡೆಯಾದರೆ, ನಿರ್ದೇಶಕ ಪೂರ್ಣಚಂದ್ರ ಅವರ ಹಿಂದಿನ ಚಿತ್ರಕ್ಕೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಇಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದರಿಂದ ತಮ್ಮ ಪಾತ್ರಕ್ಕೂ ಪ್ರಶಸ್ತಿ ಬರಬಹುದು ಎನ್ನುವ ಆಸೆ. ಇಲ್ಲದೆ ಈ ರೀತಿಯ ಸವಾಲಿನ ಪಾತ್ರ ಕೂಡ ಚಿತ್ರ ಒಪ್ಪಿಕೊಳ್ಳಲು ಸಹಕಾರಿಯಾಯಿತು ಎಂದು ವಿವರ ನೀಡಿದರು.

ಯಾವ ಕಾರಣಕ್ಕಾಗಿ ಹುಡುಗಿ ನೊಂದಿದ್ದಾಳೆ ಅದಕ್ಕೆ ಕಾರಣ ಏನು ಎನ್ನುವುದು ಚಿತ್ರದ ತಿರುಳು. ಇದೊಂದು ಮಹಿಳಾ ಪ್ರಧಾನ ಪಾತ್ರ. ನೈಜ ಘಟನೆಯ ಎಳೆಯನ್ನು ಚಿತ್ರ ಒಳಗೊಂಡಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ.ಇದುವರೆಗೂ ಮಾಡಿದ ಚಿತ್ರಗಳ ಪಾತ್ರಕ್ಕಿಂತ ಈ ಚಿತ್ರದ ಪಾತ್ರ ವಿಭಿನ್ನವಾಗಿದೆ. ಹೀಗಾಗಿ ಚಿತ್ರ ಒಪ್ಪಿಕೊಳ್ಳಲು ಕಾರಣ ಎಂದರು.
ಸಾಲು ಸಾಲು ಚಿತ್ರ
ನಟಿ ಅದ್ವಿತಿ ಶೆಟ್ಟಿ ಅವರ ಕೈನಲ್ಲಿ ಸದ್ಯ ಸಾಲು ಸಾಲು ಚಿತ್ರಗಳಿವೆ.ಅದರಲ್ಲಿ ಕೆಲವು ಚಿತ್ರೀಕರಣದ ಹಂತದಲ್ಲಿದ್ದರೆ ಇನ್ನು ಕೆಲವು ಬಿಡುಗಡೆಗೆ ಸಜ್ಜಾಗಿವೆ.
ಇದುವರೆಗೂ ನಾಲ್ಕೈದು ಚಿತ್ರಗಳು ಬಿಡುಗಡೆಯಾಗಿದ್ದು ಸದ್ಯ ಐರಾವನ್, ಶುಗರ್ ಫ್ಯಾಕ್ಟರಿ, ಕ್ಯಾಡ್ಬರೀಸ್ ಮತ್ತು ಈಗ ಚಿತ್ರೀಕರಣದಲ್ಲಿರುವ ಬ್ರಹ್ಮಕಮಲ ಸೇರಿದೆ ಎಂದರು ಅದ್ವಿತಿ.
ಚಿತ್ರಗಳಲ್ಲದೆ ಸಾಗರ್ ಪುರಾಣಿಕ್ ನಿರ್ದೇಶನದ ಮಹಾನ್ ಹುತಾತ್ಮ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದೆ.ಇದಕ್ಕೆ ರಾಷ್ಟ್ರಪ್ರಶಸ್ತಿ ಬಂದಿತ್ತು ಎಂದು ನೆನಪು ಮಾಡಿಕೊಂಡರು.

ಮತ್ತೊಂದು ಗಮನ ಸೆಳೆಯುವ ಚಿತ್ರ
ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರ ನಿರ್ದೇಶಿಸಿ ಗಮನ ಸೆಳೆದ ನಿರ್ದೇಶಕ “ಸಿದ್ದು ಪೂರ್ಣಚಂದ್ರ ನಿರ್ಮಾಣದ ಚೊಚ್ಚಲ ಚಿತ್ರದಲ್ಲಿ ಪ್ರತಿಭಾನ್ವಿತ ನಟಿ ಅದ್ವಿತಿ ಶೆಟ್ಟಿ ಅವರು “ಬ್ರಹ್ಮ ಕಮಲ” ಮುಡಿದಿದ್ದಾರೆ.
ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲ.ಇದೊಂದು ಮಹಿಳಾ ಪ್ರಧಾನ ಚಿತ್ರ.ಬೆಂಗಳೂರಿನ ಸುತ್ತಮುತ್ತ ನಡೆಯುತ್ತಿದೆ. ಚಿತ್ರದಲ್ಲಿ ಅಧ್ವಿತಿ ಶೆಟ್ಟಿ, ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್,ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್ ಅಭಿನಯಿಸುತ್ತಿದ್ದಾರೆ.