India wins first test against Bangladesh by 188 runs
ಮೊದಲ ಟೆಸ್ಟ್ ಕ್ರಿಕೆಟ್; ಬಾಂಗ್ಲಾ ವಿರುದ್ದ ಭಾರತಕ್ಕೆ 188 ರನ್ ಗೆಲುವು

ಬಾಂಗ್ಲಾದೇಶದ ಚಾತೋಗ್ರಾಮ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ದ ಭಾರತ 188 ರನ್‍ಗಳ ಗೆಲವು ಸಾಧಿಸಿ ಸರಣಿಯಲ್ಲಿ 1-0 ಅಂತರದಿಂದ ಮುನ್ನೆಡೆ ಸಾಧಿಸಿದೆ.
ಟಾಸ್‍ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ಮೊದಲ ಇನ್ಸಿಂಗ್ಸ್ ನಲ್ಲಿ 404 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ ಮೊದಲ ಇನ್ಸಿಂಗ್ಸ್ ನಲ್ಲಿ 150 ರನ್ ಗಳಿಸಿ ಫಾಲೋ ಅನ್ ಭೀತಿಗೆ ಸಿಲುಕಿತ್ತು.
ಭಾರತ ಫಾಲೋಆನ್ ನೀಡದೆ ಎರಡನೇ ಇನ್ಸಿಂಗ್ಸ್ ಆರಂಭಿಸಿ 258 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಾಗ ಭಾರತ ಇನ್ಸಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಎರಡನೇ ಇನ್ಸಿಂಗ್ಸ್‍ನಲ್ಲಿ 512 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ 324 ರನ್ ಗಳಿಸಿ 188 ರನ್ ನಿಂದ ಸೋಲು ಅನುಭವಿಸಿತು.
ಭಾರತದ ಪರ ಎರಡೂ ಇನ್ಸಿಂಗ್ಸ್ ನಲ್ಲಿ 8 ವಿಕೆಟ್ ಪಡೆದ ಕುಲ್ ದೀಪ್ ಯಾದವ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು