ಜನರಿಗೆ ಹತ್ತಿರವಾಗುವ ಪಾತ್ರ ಮಾಡುವಾಸೆ: ಬೃಂದಾ ಆಚಾರ್ಯ
“ ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಶಿವಾನಿ ಪಾತ್ರದ ಮೂಲಕ ಗಮನ ಸೆಳೆದಿರುವ ಕನ್ನಡದ ಪ್ರತಿಭಾವಂತ ನಟಿ ಬೃಂದಾ ಆಚಾರ್ಯ ಇದೀಗ “ ಹಿರಿಯ ನಿರ್ದೇಶಕ ಎಸ್ ನಾರಾಯಣ್ ನಿರ್ದೇಶನದ “ ಒಂದ್ಸಲ ಮೀಟ್ ಮಾಡೋಣ” ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.
“ಪ್ರೇಮಂ ಪೂಜ್ಯಂ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಬೃಂದಾ ಆಚಾರ್ಯ ಸಿಕ್ಕ ಪಾತ್ರಗಳಿಗೆ ಜೀವ ತುಂಬುತ್ತಾ, ಚಿತ್ರರಂಗದ ಮಂದಿಯ ಗಮನ ಸೆಳೆಯುವ ಮೂಲಕ ತಾವೊಬ್ಬ ಪ್ರಬುದ್ಧ ನಟಿ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ.ಈ ಮೂಲಕ ಜನರಿಗೆ ಹತ್ತಿರವಾಗುವ ಪಾತ್ರ ಮಾಡುವ ಕನಸು, ಗುರಿ ಹೊಂದಿದ್ದಾರೆ.
ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವರ ನಿರ್ದೇಶನದ “ಒಂದ್ಸಲ ಮೀಟ್ ಮಾಡೋಣ” ಚಿತ್ರದ ಚಿತ್ರೀಕರಣಕ್ಕೆ ತೆರಳುವ ಮುನ್ನ “ಸಿನಿ ನ್ಯೂಸ್ ಕನ್ನಡ” ದೊಂದಿಗೆ ಮುಕ್ತವಾಗಿ ಮಾತು ಹಂಚಿಕೊಂಡಿದ್ದಾರೆ.
• ಎಸ್. ನಾರಾಯಣ್ ಅವರೊಂದಿಗೆ ಕೆಲಸ ಮಾಡುತ್ತಿದ್ದೀರಾ ಹೇಗನಿಸುತ್ತಿದೆ?
ಒಂದ್ಸಲ ಮೀಟ್ ಮಾಡೋಣ ಚಿತ್ರದಲ್ಲಿ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಕನಸು ನನಸಾದ ಘಳಿಗೆ. ಕನ್ನಡ ಚಿತ್ರರಂಗದ ಘಟಾನಘಟಿ ನಾಯಕರಿಗೆ ಆಕ್ಷನ್ ಕಟ್ ಹೇಳಿರುವ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ .
ಎಸ್.ನಾರಾಯಣ್ ಅವಂತಹ ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡುವುದರಿಂದ ನಟನೆಯಲ್ಲಿ ಮತ್ತಷ್ಟು ಪಕ್ವವಾಗುವ ಜೊತೆಗೆ ಕಲಿಕೆಗೂ ಸಹಕಾರಿಯಾಗಲಿದೆ. ಹೀಗಾಗಿ ಚಿತ್ರತಂಡದ ಜೊತೆ ಕೆಲಸ ಮಾಡಲು ಅತ್ಯಂತ ಉತ್ಸುಕನಾಗಿದ್ದೇನೆ.ನಿರ್ದೇಶಕ ಶಶಾಂಕ್ ಮಹಿಳಾ ಪ್ರಧಾನ ಪಾತ್ರಕ್ಕೆ ಹೆಚ್ಚು ಒತ್ತು ನೀಡುವ ನಿರ್ದೇಶಕ. ಇದೀಗ ನಾರಾಯಣ್ ಸರ್ ಅವಂತಹ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಶ್ರೇಯಸ್ ಮಂಜು ಜೊತೆಯೂ ಮೊದಲ ಸಿನಿಮಾ ಎಂದು ಮಾಹಿತಿ ಹಂಚಿಕೊಂಡರು.
• ಒಂದ್ಸಲ ಮೀಟ್ ಮಾಡೋಣ” ಚಿತ್ರದಲ್ಲಿ ನಿಮ್ಮ ಪಾತ್ರ ಏನು?
“ಒಂದ್ಸಲ ಮೀಟ್ ಮಾಡೋಣ” ಲವ್ ಜರ್ನಿಯ ಸಿನಿಮಾ, ಸುಂದರವಾದ ಕಥೆ ಚಿತ್ರದಲ್ಲಿದೆ. ನನ್ನ ಪಾತ್ರಕ್ಕೂ ಒಳ್ಳೆಯ ಸ್ಕೋಪ್ ಇದೆ. ಹೀಗಾಗಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾತುರದಿಂದ ಎದುರು ನೋಡುತ್ತಿದ್ದೇನೆ. ಹೊಸತನ ಮತ್ತು ವಿಭೀನ್ನವಾಗಿರುವ ಪಾತ್ರ.
• ಚಿತ್ರೀಕರಣ ಯಾವಾಗ. ನೀವೆಷ್ಟು ಕಾತುರರಾಗಿದ್ದೀರ
ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವರು ಶಿಸ್ತಿನ ಮನುಷ್ಯ ಎನ್ನುವುದನ್ನು ಕೇಳಿದ್ದೇನೆ. ಹೀಗಾಗಿ ಅವರು ಚಿತ್ರೀಕರಣ ಸಮಯಕ್ಕೆ ಎಷ್ಟು ಗಂಟೆಗೆ ಹೇಳುತ್ತಾರೋ ಆ ಸಮಯಕ್ಕೆ ಸರಿಯಾಗಿ ಹಾಜರಾಗುವೆ.ದಿಗ್ಗಜ ಕಲಾವಿದರೊಂದಿಗೆ ಕೆಲಸ ಮಾಡಿದ ಅನುಭವವಿರುವ ನಿರ್ದೇಶಕದೊಂದಿಗೆ ಕೆಲಸ ಮಾಡಲು ಉತ್ಸುಕತೆಯಿಂದ ಕಾಯುತ್ತಿದ್ದೇನೆ. “ಒಂದ್ ಸಲ ಮೀಟ್ ಮಾಡೋಣ” ಚಿತ್ರದ ಕಥೆ ಮತ್ತು ಪಾತ್ರ ಕೇಳಿ ನಾನಂತೂ ಸೂಪರ್ ಎಕ್ಟೈಟ್ ಆಗಿದ್ದೇನೆ. ನನ್ನ ಭಾಗದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಾಗಿದೆ .
• ಕೌಶಲ್ಯ ಸುಪ್ರಜಾ ರಾಮ ಚಿತ್ರದ ನಂತರ ಪ್ರತಿಕ್ರಿಯೆ ಹೇಗಿದೆ
“ಕೌಸಲ್ಯ ಸುಪ್ರಜಾ ರಾಮ” ಚಿತ್ರದಲ್ಲಿ ಜನರು ‘ಶಿವಾನಿ’ ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಒಳ್ಳೆಯ ಅವಕಾಶಗಳೂ ಬರುತ್ತಿವೆ. ಎಲ್ಲೇ ಹೋದರೂ ಶಿವಾನಿ ಎಂದು ಜನ ಗುರುತಿಸುತ್ತಾರೆ.ಇದು ಖುಷಿಯ ವಿಷಯ ಎಂದರು ನಟಿ ಬೃಂದಾ ಆಚಾರ್ಯ.
ಯಾವುದೇ ಹೊಸ ಚಿತ್ರ ಒಪ್ಪಿಕೊಂಡರೂ ಆ ತಂಡದ ಜತೆ ಕೆಲಸ ಮಾಡಲು ನಾನಂತು ತುಂಬಾ ಉತ್ಸುಕನಾಗಿದ್ದೇನೆ. ಪ್ರತಿಯೊಬ್ಬ ನಿರ್ದೇಶಕರಿಗೂ ಕಥೆ ಬಗ್ಗೆ ತಮ್ಮದೇ ಆದ ದೃಷ್ಢಿಕೋನ ಹೊಂದಿರುತ್ತಾರೆ. ಹೀಗಾಗಿ ಪ್ರತಿ ತಂಡದಲ್ಲಿ ಕೆಲಸ ಮಾಡುವಾಗ ಹೊಸ ನಿರೀಕ್ಷೆಯೊಂದಿಗೆ ಕೆಲಸ ಮಾಡುವೆ ಎಂದರು.
• ಯಾವ ರೀತಿಯ ಪಾತ್ರ ಮಾಡುವಾಸೆ ಇದೆ
ಒಳ್ಳೊಳ್ಳೆ ಚಿತ್ರಗಳು ಪಾತ್ರಗಳಲ್ಲಿ ನಟಿಸುವ ಆದೆ ಇದೆ. ಪ್ರತಿ ಚಿತ್ರದ ಪಾತ್ರವೂ ಜನರಿಗೆ ಹತ್ತಿರವಾಗುವ ಜೊತೆಗೆ ಇಷ್ಟವಾಗುವಂತಿರಬೇಕು. ಇದು ನನ್ನ ಗುರಿ, ಆ ರೀತಿಯ ಒಂದು ಚಿತ್ರ ಒಂದ್ಸಲ ಮೀಟ್ ಮಾಡೋಣ. ಮಾಡುವ ಪಾತ್ರದ ಮೂಲಕ ಜನರಿಗೆ ಹತ್ತಿರವಾಗು ಎನ್ನುವ ಗುರಿ ನನ್ನದು