“ ದೈಜಿ” ಮೂಲಕ ಹ್ಯಾಟ್ರಿಕ್ ನೀಡಲು ಸಜ್ಜಾದ : ರಮೇಶ್ ಅರವಿಂದ್, ಆಕಾಶ್ ಶ್ರೀವತ್ಸ ಜೋಡಿ
ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ರ ಯಶಸ್ಸಿನ ಬೆನ್ನಲ್ಲೇ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಹ್ಯಾಟ್ರಿಕ್ ನೀಡಲು ಸಜ್ಜಾಗಿದ್ದಾರೆ. ಅದುವೇ ‘ದೈಜಿ’ ಮೂಲಕ.
ಅಮೇರಿಕಾ ಅಮೇರಿಕಾ ಚಿತ್ರಕ್ಕೆ 25 ವರ್ಷ ಪೂರ್ಣಗೊಂಡ ಸಮಯದಲ್ಲಿ ಇಡೀ ಚಿತ್ರವನ್ನು ಅಮೇರಿಕಾದಲ್ಲಿ ಚಿತ್ರೀಕರಣ ಮಾಡುತ್ತಿರುವುದು ವಿಶೇಷ. ಅಮೇರಿಕಾ ಅಮೇರಿಕಾ ಚಿತ್ರ ನೋಡಿದ ಮಂದಿ ರಮೇಶ್ ಅರವಿಂದ್ ಅವರಿಂದ ಮತ್ತೊಂದು ಚಿತ್ರ ನಿರೀಕ್ಷಿಸುತ್ತಿದ್ದರು.ಅದಕ್ಕೆ ಪೂರಕ ಎನ್ನುವಂತೆ “ದೈಜಿ” ಸಿಕ್ಕಿದೆ
ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುಂಚೆ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆಕಂಡಿದ್ದ ಕಿರುಚಿತ್ರ “ಸುಳ್ಳೇ ಸತ್ಯ” ಪವನ್ ಕುಮಾರ್ ಅವರ “ಲೂಸಿಯಾ”, ಡಾಲಿ ಧನಂಜಯ್ ಅವರು ನಟಿಸಿದ ‘ಬದ್ಮಾಶ್’ ಚಿತ್ರ ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದವು ಇದೇ ವಿಶೇಷ.
‘ದೈಜಿ’ ಎಂದರೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲ್ಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನಿ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು. ಹೀಗೆ ಹಲವು ಅರ್ಥಗಳು.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಆಕಾಶ್ ಶ್ರೀವತ್ಸ, ನಟ ರಮೇಶ್ ಅರವಿಂದ್ ಅವರನ್ನು ವಿಭಿನ್ನ ರೀತಿಯಲ್ಲಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಅವರ ಗೆಟಪ್ ಕೂಡ ಬದಲಾಗಿದೆ. “ದೈಜಿ” ಚಿತ್ರ ನೋಡುತ್ತಿದ್ದರೆ ಒಳ್ಳೆಯ ಅನುಭವ ಸಿಗುವುದು ಖಚಿತ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ
ಚಿತ್ರಕ್ಕೆ ಸಾರ್ವತ್ರಿಕವಾದ ನೆಲೆ ಕಂಡುಕೊಳ್ಳುವ ಸಾಮಥ್ರ್ಯವಿದೆ. ಮಿಸ್ಟರಿ ಅಥವಾ ಹಾರರ್ eóÁನರ್ ಮಾದರಿಯ ಚಿತ್ರ. ಶಿವಾಜಿ ಸುರತ್ಕಲ್ ಚಿತ್ರಕ್ಕೆ ಚಿತ್ರಕಥೆ ಬರೆದ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ನಿರ್ಮಾಪಕ ರವಿ ಕಶ್ಯಪ್ ವಿವರಿಸಿದ ನೈಜ ಘಟನೆಗಳನ್ನು ಆಧರಿಸಿ ಬರೆಯಲಾಗಿದೆ ಎಂದು ವಿವರ ನೀಡಿದ್ದಾರೆ.
ಚಿತ್ರದ ನಾಯಕಿ ಆಗಲೇ ಹುಡುಕಾಟ ಪ್ರಾರಂಭವಾಗಿದೆ. ಚಿತ್ರೀಕರಣ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಚಿತ್ರವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ. ಇತ್ತೀಚೆಗಷ್ಟೇ 25 ವರ್ಷಗಳ ಸಂಭ್ರಮ ಆಚರಿಸಿದ ಅಮೆರಿಕ ಅಮೆರಿಕ ಚಿತ್ರದಂತೆಯೇ ಇದೂ ಕೂಡ ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆ ಎಂದು ಹೇಳಿದ್ದಾರೆ
ಪ್ರತಿಭಾನ್ವಿತ ನಟ ರಮೇಶ್ ಅರವಿಂದ ಅವರ 106 ನೇ ಚಿತ್ರ ದೈಜಿ. ಹೀಗಾಗಿ ವಿಭಿನ್ನವಾಗಿ ತೋರಿಸುವ ಉದ್ದೇಶ ಹೊಂದಲಾಗಿದೆ.ಬಹು ಭಾಷಾ ತಾರೆಯಾದ ರಮೇಶ್ ಅರವಿಂದ್ ದೈಜಿ ಚಿತ್ರದಲ್ಲಿ ತೀರಾ ವಿಭಿನ್ನ ಪಾತ್ರದಲ್ಲಿ, ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಡೀ ಚಿತ್ರತಂಡ ಚಿತ್ರೀಕರಣ ನಡೆಸಲು ಹುಮ್ಮಸ್ಸಿನಿಂದ ಎದುರು ನೋಡುತ್ತಿದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ