Famous producer Ramesh Reddy's daughter's wedding reception was attended by the film industry crowd
ಖ್ಯಾತ ನಿರ್ಮಾಪಕ ರಮೇಶ್ ರೆಡ್ಡಿ ಪುತ್ರಿ ವಿವಾಹ ಆರತಕ್ಷತೆಯಲ್ಲಿ ಚಿತ್ರರಂಗದ ದಂಡು ಭಾಗಿ
ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರ ಪುತ್ರಿಕಾ ತೇಜಸ್ವಿನಿ ರಮೇಶ್ ಮತ್ತು ಕಾರ್ತಿಕ್ ರೆಡ್ಡಿ ಅವರ ವಿವಾಹ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ತಂತ್ರಜ್ಞರು ಭಾಗಿಯಾಗಿ ನವದಂಪತಿಯನ್ನು ಮನಸಾರೆ ಹಾರೈಸಿದ್ದಾರೆ
ಅರ್ಜುನ್ ಜನ್ಯ ಅವರ ನಿರ್ದೇಶನದ, ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಬಹುಕೋಟಿ ವೆಚ್ಚದ “45” ಚಿತ್ರದ ನಿರ್ಮಾಪಕರೂ ಆಗಿರುವ ರಮೇಶ್ ರೆಡ್ಡಿ ಅವರ ಪುತ್ರಿ ತೇಜಸ್ವಿನಿ ಅವರ ವಿವಾಹ ಕಾರ್ತಿಕ್ ರೆಡ್ಡಿ ಅವರೊಂದಿಗೆ ನೆರವೇರಿದೆ.
ಇತ್ತೀಚಿಗೆ ಬೆಂಗಳೂರು ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಆರತಕ್ಷತೆ ಸಮಾರಂಭಕ್ಕೆ ಸುಧಾಮೂರ್ತಿ, ರಮೇಶ್ ಅರವಿಂದ್, ಯೋಗರಾಜ್ ಭಟ್, ಧ್ರುವ ಸರ್ಜಾ, ಅರ್ಜುನ್ ಜನ್ಯ, ದಿಗಂತ್, ಗುರುಕಿರಣ್, ಎ.ಪಿ.ಅರ್ಜುನ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು, ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳು ಆಗಮಿಸಿ ವಧುವರರಿಗೆ ಶುಭ ಕೋರಿದರು.