Film “Shoshite” directed by Techi: Dr. Jhanvi Rayala came back as the heroine after a break,

ಟೆಕ್ಕಿ ನಿರ್ದೇಶನದ ಚಿತ್ರ “ಶೋಷಿತೆ” :ಬಿಡುವಿನ ಬಳಿಕ ಮತ್ತೆ ನಾಯಕಿಯಾಗಿ ಬಂದ ಡಾ.ಜಾನ್ವಿ ರಾಯಲ - CineNewsKannada.com

ಟೆಕ್ಕಿ ನಿರ್ದೇಶನದ ಚಿತ್ರ “ಶೋಷಿತೆ” :ಬಿಡುವಿನ ಬಳಿಕ ಮತ್ತೆ ನಾಯಕಿಯಾಗಿ ಬಂದ ಡಾ.ಜಾನ್ವಿ ರಾಯಲ

ಚಿತ್ರರಂಗಕ್ಕೆ ವಿದ್ಯಾವಂತ ಪ್ರತಿಭೆಗಳು ಅದರಲ್ಲೂ ಇಂಜಿನಿಯರ್‍ಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ಆಂಧ್ರಪ್ರದೇಶ, ಸದ್ಯ ಬೆಂಗಳೂರು ನಿವಾಸಿ ಶಶಿಧರ್ ಸೇರ್ಪಡೆಯಾಗಿದ್ದಾರೆ. ನಟಿ, ನಿರೂಪಕಿ ಡಾ. ಜಾನ್ವಿ ರಾಯಲ ಪ್ರಮುಖ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ.

#DRJhanvniRayala

ಮೊದಲಿನಿಂದಲೂ ಸಿನಿಮಾರಂಗದ ಮೇಲೆ ಆಸಕ್ತಿ ಹಾಗೂ ಹಿರಿಯ ನಿರ್ದೇಶಕರುಗಳಾದ ಕೆ.ಬಾಲಚಂದರ್, ಮಣಿರತ್ನಂ, ರಾಮ್‍ಗೋಪಾಲ್‍ವರ್ಮ ಮುಂತಾದವರ ಪ್ರೇರಣೆಯಿಂದ ತಾನು ಸಹ ಇಲ್ಲಿಯೇ ಸಾಧನೆ ಮಾಡಬೇಕೆಂದು ಚಿಂತನೆ ನಡೆಸಿರುತ್ತಾರೆ. ಅದರ ಪ್ರತಿಫಲ ಎರಡು ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ಇದರ ಅನುಭವದಿಂದಲೇ ಕನ್ನಡ ಭಾಷೆ ಕಲಿತು ‘ಶೋಷಿತೆ’ ಸಿನಿಮಾಕ್ಕೆ ರಚನೆ,ಚಿತ್ರಕಥೆ,ಸಂಭಾಷಣೆ, ಸಂಕಲನ ಹಾಗೂ ಆಕ್ಷನ್ ಕಟ್ ಹೇಳಿದ್ದಾರೆ.

ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸದೆ ‘ಯು’ ಪ್ರಮಾಣಪತ್ರ ನೀಡಿದೆ. ‘ಎ ನೇಚರ್ ವ್ಯೂ ಔಟ್‍ಡೋರ್ ಕಾರ್ನಿವಲ್ ಪೆÇ್ರಡಕ್ಷನ್’ ಮೂಲಕ ಸಿರಿಶಾಅಲ್ಲ ನಿರ್ಮಾಣ ಮಾಡಿರುವುದು ಹೊಸ ಅನುಭವ.

2015ರಲ್ಲಿ ನೆಲ್ಲೂರುದಲ್ಲಿ ನಡೆದ ಘಟನೆಯು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದರ ಒಂದು ಏಳೆಯನ್ನು ತೆಗೆದುಕೊಂಡು ಕಥೆಯನ್ನು ರೂಪಿಸಲಾಗಿದೆ. ಮಧ್ಯಮ ವರ್ಗದ ಹುಡುಗಿಗೆ ಯಾವ ರೀತಿಯ ಕಷ್ಟಗಳು ಒದಗಿಬರುತ್ತದೆ. ಅದನ್ನು ಹೇಗೆ ಎದುರಿಸುತ್ತಾಳೆ. ಸಮಾಜದಲ್ಲಿ ಇಂತಹವರಿಗೆ ಬರುವ ತೊಂದರೆಗಳಾದರೂ ಏನು ಗೆಳತನ, ಹಣದ ವಿಚಾರದಲ್ಲಿ ಯಾರನ್ನೂ ನಂಬಬೇಡಿ. ಇಂತಹ ಸೂಕ್ಷ ವಿಷಯಗಳು ಎಲ್ಲಾ ಕಡೆಗಳಲ್ಲಿ ನಡೆಯುತ್ತಲೇ ಇರುತ್ತದೆ. ಇದರಿಂದ ನೀವುಗಳು ಜಾಗೃತರಾಗಬೇಕೆಂದು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.

#DR Janhvni Rayala

ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಹಾಗೂ ‘ಕಲರ್ಸ್ ಕನ್ನಡ’ದಲ್ಲಿ ಖ್ಯಾತ ನಿರೂಪಕಿಯಾಗಿರುವ ಡಾ.ಜಾನ್ವಿ ರಾಯಲ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್’ದಲ್ಲಿ ಅಭಿನಯಿಸಿರುವ ರೂಪ ರಾಯಪ್ಪ ಖಳನಾಯಕಿ ಪಾತ್ರ, ಇವರೊಂದಿಗೆ ವೆಂಕ್ಷ, ಪ್ರಶಾಂತ್, ದರ್ಶನ್ ಹಾಗೂ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಸಿಂಗಲ್ ಹಾಡಿಗೆ ಕೆವಿನ್.ಎಂ. ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರವಿವರ್ಮ.ಕೆ, ಸಾಹಿತ್ಯ ಮತ್ತು ಗಾಯನ ಅನುಷಾ ಅವರದಾಗಿದೆ. ಬೆಂಗಳೂರು, ಹೊಸಕೋಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಹಲವು ಚಲನಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರದರ್ಶನ ಕಾಣಲಿದೆ. ಅಂದುಕೊಂಡಂತೆ ಆದರೆ ನವೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin