Kumara who was set, Pramoda became the leader again

ಸೆಟ್ಟೇರಿದ ಕುಮಾರ ಮತ್ತೆ ನಾಯಕನಾದ ಪ್ರಮೋದ - CineNewsKannada.com

ಸೆಟ್ಟೇರಿದ ಕುಮಾರ ಮತ್ತೆ ನಾಯಕನಾದ ಪ್ರಮೋದ

‘ಕುಮಾರ’ ಚಿತ್ರದ ಮುಹೂರ್ತ ಸಮಾರಂಭ ವಿಜಯನಗರದ ಮಾರುತಿ ಮಂದಿರದಲ್ಲಿ ಸರಳವಾಗಿ ನಡೆಯಿತು. ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.

ಹನ್ನೊಂದು ವರ್ಷಗಳಿಂದ ಚಿತ್ರರಂಗದಲ್ಲಿ ನಿರ್ದೇಶಕನಾಗಿರುವ ಚನ್ನರಾಯಪಟ್ಟಣದ ಎಸ್.ಆರ್.ಪ್ರಮೋದ್ ‘ಅಚಲ’ ಮತ್ತು ‘ಸಮಯ’ ಸಿನಿಮಾಗಳಿಗೆ ನಾಯಕ ಆಗಿದ್ದರು. ಬಿಡುಗಡೆಯಾದ ‘ಓಂ ಶಾಂತಿ ಓಂ’ ‘ಅಸ್ಥಿರ’ ಹಾಗೂ ತೆರೆಗೆ ಸಿದ್ದವಾಗಿರುವ ‘ಬಾಳುವಂತ ಹೂವೆ’ ‘ಆತ್ಮ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಇದೆಲ್ಲಾ ಅನುಭವದಿಂದ ಈಗ ಪ್ರಮೋದ್ ಪಿಕ್ಚರಸ್ಸ್ ಸಂಸ್ಥೆ ಹುಟ್ಟುಹಾಕಿ ಇದರ ಮೂಲಕ ಪ್ರಥಮ ಪ್ರಯತ್ನ ಎನ್ನುವಂತೆ ‘ಕುಮಾರ’ನಿಗೆ ರಚನೆ, ನಿರ್ದೇಶನ ಹಾಗೂ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾ ಹಳ್ಳಿಯಲ್ಲಿ ನಡೆಯುವ ದ್ವೇಷದ ಕಾಲ್ಪನಿಕ ಕಥೆಯಾಗಿದೆ. ಊರಿನ ಜಮೀನ್ದಾರನ ಮನೆಗೆ ಆತ ಬರಲು ಉದ್ದೇಶವಾದರೂ ಏನು ಬಂದ ಕಾರಣ ಸಪಲವಾಯಿತೇ ಜಮೀನ್ದಾರನ ಮಗಳು ಕಾಣೆಯಾಗುವುದೇಕೆ ಈ ಎಲ್ಲಾ ಕುತೂಹಲಗಳ ನಡುವೆ ಸುಂದರ ಪ್ರೇಮಕಥೆ ಇರಲಿದೆ. ಅರ್ಚನಾ ನಾಯಕಿ. ಉಳಿದಂತೆ ಬನ್ನೂರುರಂಗಸ್ವಾಮಿ, ಚಲುವರಾಜ್, ಅಪ್ಪುಬಡಿಗೇರ್, ಕಿಕ್ಕೇರಿಯಮೋನಿಕಾ, ಹಿತೀಕ್ಷಾ, ವೈಷ್ಣವಿ ಮುಂತಾದವರು ಅಭಿನಯಿಸುತ್ತಿದ್ದಾರೆ.

ಎರಡು ಹಾಡುಗಳಿಗೆ ಕೆವಿನ್.ಎಂ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ರಣಧೀರನಾಯಕ್, ಸಂಕಲನ ಆಯುರ್‍ಸ್ವಾಮಿ, ನಿರ್ಮಾಣ ನಿರ್ವಹಣೆ ದೀಪಕ್‍ಬಾಬು ಅವರದಾಗಿದೆ. ಮೈಸೂರು ಸುತ್ತಮುತ್ತ ಸುಂದರ ತಾಣಗಳಲ್ಲಿ 25 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ತಂಡ ಯೋಜನೆ ರೂಪಿಸಿಕೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin