Filming of Barbarika is completed

ಬರ್ಬರಿಕ ಚಿತ್ರದ ಚಿತ್ರೀಕರಣ ಪೂರ್ಣ - CineNewsKannada.com

ಬರ್ಬರಿಕ ಚಿತ್ರದ ಚಿತ್ರೀಕರಣ ಪೂರ್ಣ

ಮಹಾಭಾರತದಲ್ಲಿ ಬರುವ ‘ಬರ್ಬರಿಕ’ ಭೀಮನ ಮೊಮ್ಮಗನೆಂದು ಹೇಳಲಾಗಿದೆ. ಇದೇ ಹೆಸರಲ್ಲಿ ಹೊಸ ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದೆ. ಸ್ಕಂದ ಅಶೋಕ್, ಸಿರಿರಾಜ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಝೇಂಡೇ ಖ್ಯಾತಿಯ ಬಿ,ಎಂ ವೆಂಕಟೇಶ್ ಮತ್ತಿತರು ಚಿತ್ರದಲ್ಲಿ ನಟಿಸಿದ್ದಾರೆ.

‘ಬರ್ಬರಿಕ’ ನಿಗೆ ಸೋಲೆಂಬುದು ಇರುವುದಿಲ್ಲ. ಯುದ್ದ ಗೆಲ್ಲುವ ಶಕ್ತಿ ಇರುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸದ್ದಿಲ್ಲದೆ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸಿ, ಕೊನೆ ದಿನದ ಶೂಟಿಂಗ್‍ನ್ನು ಕಂಠೀರವ ಸ್ಟುಡಿಯೋದಲ್ಲಿ ಮುಗಿಸಿ ಕುಂಬಳಕಾಯಿ ಒಡೆದುಕೊಂಡಿದೆ.

ಜನಾರ್ಧನ ಮೂವೀಸ್ ಬ್ಯಾನರ್ ಅಡಿಯಲ್ಲಿ ಬೆಂಗಳೂರಿನ ಪಿ.ಜನಾರ್ಧನ್ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಶಾಂಡಿಲ್ಯ ರಚನೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಆಸ್ಪತ್ರೆ ಮತ್ತು ಶಿಕ್ಷಣ ವ್ಯವಸ್ಥೆಯ ಅಂಶಗಳನ್ನು ಕಥೆಯಲ್ಲಿ ತೆಗೆದುಕೊಳ್ಳಲಾಗಿದೆ. ದುಡ್ಡಿನ ಸಮಸ್ಯೆ ಇರುವ ಕಾರಣ ಅನಿವಾರ್ಯವಾಗಿ ಗುತ್ತಿಗೆ ಕೊಲೆಗಾರನಾಗಿ, ಮುಂದೆ ಸುಪಾರಿ ಕಿಲ್ಲರ್ ಆಗಿ, ಒಂದು ಹಂತದಲ್ಲಿ ತಿರುವು ಪಡೆದುಕೊಂಡಾಗ, ಗುಣದಲ್ಲಿ ಬದಲಾವಣೆಯಾಗುವ ಪಾತ್ರದಲ್ಲಿ ಸ್ಕಂದಅಶೋಕ್ ನಾಯಕ. ಮಧ್ಯಮ ವರ್ಗದ ಹುಡುಗಿಯಾಗಿ ಡಿಗ್ಲಾಮರ್ ಆಗಿ ಕಾಣಿಸಿಕೊಂಡಿರುವ ಸಿರಿರಾಜು ನಾಯಕಿ. ಕೆಟ್ಟ ವ್ಯಕ್ತಿಗಳೊಂದಿಗೆ ಪ್ರತಿಭಟಿಸುವ ‘ಜೊತೆ ಜೊತೆಯಲಿ’ ಖ್ಯಾತಿಯ ಬಿ.ಎಂ.ವೆಂಕಟೇಶ್ ಸಮಾಜ ಸೇವಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಉಳಿದಂತೆ ಬಲರಾಜವಾಡಿ, ಯುಮುನಾ ಶ್ರೀನಿಧಿ, ಚಿರಾಗ್, ಮಡಿವಾಳಯ್ಯ, ಕಾವ್ಯಪ್ರಕಾಶ್, ಶೈಲೇಶ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಾಯಕ ಹಾಗೂ ಬರ್ಬರಿಕನಿಗೂ ಲಿಂಕ್ ಇರುತ್ತದೆ. ಅದು ಏನು ಎಂಬುದನ್ನು ಸಿನಿಮಾ ನೋಡಬೇಕಂತೆ.

ಮೂರು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕೆ.ವಿ.ಇಂದ್ರಜಿತ್, ಸಂಕಲನ ಉದಯ್.ಪಿ.ಆರ್, ಸಾಹಸ ನರಸಿಂಹ, ನಿರ್ಮಾಣ ನಿರ್ವಹಣೆ ರಾಮಚಂದ್ರ ಅವರದಾಗಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin