ಮನಾಲಿಯಲ್ಲಿ ಮ್ಯಾಟ್ನಿ ಚಿತ್ರದ ಹಾಡಿಗಾಗಿ ನೀನಾಸಂ ಸತೀಶ್-ಅದಿತಿ ಪ್ರಭುದೇವ ಹೆಜ್ಜೆ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ನೀನಾಸಂ ಸತೀಶ್, ರಚಿತಾ ರಾಮ್ ಜೋಡಿ ಜೊತೆಯಾಗಿ ಕಾಣಸಿಕೊಂಡಿರುವ “ಮ್ಯಾಟ್ನಿ” ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರ ತಂಡಕ್ಕೆ ಮತ್ತೊಬ್ಬ ನಟಿ ಅದಿತಿ ಪ್ರಭುದೇವ ಕೂಡ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮ್ಯಾಟ್ನಿ ಮೂಲಕ ಮನರಂಜನೆಯ ಮಹಾಪೂರವನ್ನು ಹರಸಿಲು ತಂಡ ಮುಂದಾಗಿದೆ.

ನಿರ್ದೇಶಕ ಮನೋಹರ್ ಕಾಂಪಲ್ಲಿ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಪಾರ್ವತಿ ಎಸ್ ಗೌಡ ಬಂಡವಾಳ ಹೂಡಿದ್ದಾರೆ. ಕುನು ಮನಾಲಿಯಲ್ಲಿ ನಟ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೊತೆಯಾಗಿ ಕಾಣಿಸಿಕೊಂಡ ಹಾಡಿನ ಚಿತ್ರೀಕರಣವನ್ನು ಕೊರೆವ ಚಳಿ. ಹಿಮದ ನಡುವೆ ಚಿತ್ರೀಕರಣ ಮಾಡಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಟ ನೀನಾಸಂ ಸತೀಶ್, ಮನಾಲಿಯ ನಿಸರ್ಗದ ಸೌಂದರ್ಯ ನೋಡಿ ವ್ಹಾ ವ್ಹಾ ಅನ್ನಿಸಿತ್ತು. ಮನಾಲಿಯ ಮುಂದೆ ಯಾವ ಸ್ವಿಟ್ಜರ್‍ಲ್ಯಾಂಡ್ ಕೂಡ ಇಲ್ಲ. ಚಿತ್ರದ ಹಾಡಿನ ವಿಡಿಯೋ ಬಂದಾಗ ಗೊತ್ತಾಗುತ್ತದೆ ಎಂದು ವಿವರ ನೀಡಿದ್ದಾರೆ.
ಹಾಡೊಂದು ಬಾಕಿ
ಮನಾಲಿಯ ಮೈನಸ್ 5 ಡಿಗ್ರಿ ಸೆಲ್ಸಿಯಸ್‍ನಲ್ಲಿ ನನ್ನ ಮತ್ತು ಅದಿತಿ ಪ್ರಭುದೇವ ಅವರ ನಡುವೆ ಬರುವ ರೋಮಾಂಟಿಕ್ ಹಾಡು ಇದು.ಸಂತೋಷ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಹೆಚ್ಚು ಸ್ನೋ ಇರುವ ಪ್ರದೇಶ ಇಲ್ಲಿಗೆ ಯಾರನ್ನೂ ಬಿಡುವುದಿಲ್ಲ. ಅಂತಹುದರಲ್ಲಿ ನಮ್ಮ ಅದೃಷ್ಟ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು.ಇದನ್ನು ಹೊರತು ಪಡಿಸಿದರೆ ಮ್ಯಾಟ್ನಿ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು ಹಾಡು ಬಾಕಿ ಉಳಿದಿದೆ. ಈ ಹಾಡಿನಲ್ಲಿ ನಾನು, ನಾಗಭೂಷಣ್, ಪೂರ್ಣ, ದಿಗಂತ್ ಹಾಗು ಶಿವರಾಜ್ ಕೆ.ಆರ್ ಪೇಟೆ ಪಾಲ್ಗೊಳ್ಳುವ ಹಾಡು ಚಿತ್ರೀಕರಣ ಮಾಡಬೇಕಾಗಿದೆ..
ನನ್ನ ಮತ್ತು ರಚಿತಾರಾಮ್ ಜೋಡಿಯ ಹಾಡನ್ನು ಸೆಟ್ ನಲ್ಲಿಚಿತ್ರೀಕರಣ ಮಾಡಲಾಗಿದೆ. ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕನ್ನಡದಲ್ಲಿ ಮ್ಯಾಟ್ನಿ ಹೊಸ ಅಲೆ ಸೃಷ್ಠಿ ಮಾಡಲಿದೆ ಎನ್ನುವ ವಿಶ್ವಾಸವನ್ನು ಇದೇ ವೇಳೆ ವ್ಯಕ್ತಪಡಿಸಿದ್ದಾರೆ ನಟ ನೀನಾಸಂ ಸತೀಶ್.

ಮನಾಲಿಯಲ್ಲಿ ಅಪಾಯಕಾರಿ ಸನ್ನಿವೇಶದಲ್ಲಿ ಅದರಲ್ಲಿಯೂ.ಮೈನಸ್ 5 ಡಿಗ್ರಿ ಸೆಲ್ಸಿಯಸ್‍ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದಿತಿ ಪ್ರಭುದೇವ ಅವರಿಗೆ ತುಂಬಾನೇ ಕಷ್ಟವಾಗಿತ್ತು ಸೀರೆ ಮತ್ತು ಗಾಗ್ರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ನಾನಾದರೂ ಕೋಟ್ ಕಾಲಿಗೆ ಶೂ ಧರಿಸಿದ್ದೆ ಚಿತ್ರೀಕರಣ ಮಾಡುವುದು ಸವಾಲಿನಿಂದ ಕೂಡಿತ್ತು. ದಿನಕ್ಕೆ ನಾಲ್ಕರಿಂದ ಐದು ಗಂಟೆಯಷ್ಟೇ ಚಿತ್ರೀಕರಣ ಮಾಡಲು ಸಾದ್ಯ ಆಗುತ್ತಿತ್ತು ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ
ಹಿಮ ಬೀಳುತ್ತಲೇ ಇತ್ತು ಒಂದು ಗಾಡಿ ಸ್ಕಿಡ್ ಆಗಿ ಬೆಟ್ಟದ ಎಡ್ಜ್ ಹೋಗಿ ನಿಂತಿಕೊಂಡಿತ್ತು. ಅಷ್ಟು ಹಿಮದಿಂದ ಕೂಡಿತ್ತು.ಅಪಾಯಕಾರಿ ಸನ್ನಿವೇಶದಲ್ಲಿಯೂ ಮತ್ತೊಂದು ವಾಹನ ತೆಗೆದುಕೊಂಡು ಹೋಗಿ ಚಿತ್ರೀಕರಣ ಮಾಡಲಾಗಿತ್ತು. ಚಿತ್ರದ ರಿಸಲ್ಟ್ ಚೆನ್ನಾಗಿ ಮೂಡಿ ಬಂದಿದೆ. ಹಾಡು ನೋಡಿದರೆ ಇಂಗ್ಲೀಷ್ ಸಿನಿಮಾ ಥರ ಕಾಣುತ್ತೆ, ವಿಂಟೇಜ್ ಫಾರ್ಮಟ್‍ನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದಿದ್ದಾರೆ.
ಚಿತ್ರದಲ್ಲಿ ನಾಗಭೂಷಣ್, ಪೂರ್ಣ, ಶಿವರಾಜ್ ಕೆ.ಆರ್ ಪೇಟೆ, ಪೂರ್ಣಚಂದ್ರ ಮತ್ತಿತರಿದ್ದಾರೆ ಪೂರ್ಣಚಂದ್ರ ಚಂದ್ರ ತೇಜಸ್ವಿ ಸಂಗೀತ ಸುಧಾಕರ್ ಮತ್ತು ಕೀರ್ತನ್ ಪೂಜಾರ್ ಛಾಯಾಗ್ರಹಣ ಚಿತ್ರಕ್ಕಿದೆ.