ಜುಲೈ 3ಕ್ಕೆ ನಟ ಯಶ್ ಅಭಿನಯದ “ರಾಮಾಯಣ” ಚಿತ್ರದ ಗ್ಲಿಂಪ್ಸ್ ಬಿಡುಗಡೆ: ನಿರೀಕ್ಷೆ ಹೆಚ್ಚಳ
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ `ರಾಮಾಯಣ’ ಚಿತ್ರ ಗ್ಲಿಂಪ್ಸ್ ಜುಲೈ 3 ರಂದು ಬಿಡುಗಡೆಯಾಗಲಿದ್ದು ದೇಶ ವಿದೇಶಗಳಲ್ಲಿರುವ ಅಭಿಮಾನಿಗಳು ತುದಿಗಾಲ ಮೇಲೆ ಕಾದುಕುಳಿತಿದ್ದಾರೆ.
ರಾಮಾಯಣ ಗ್ಲಿಮ್ಸ್ ರಿಲೀಸ್ ಗೂ ಮುನ್ನ ನಟ ಯಶ್ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರದ ಚಿತ್ರೀಕರಣಕ್ಕಾಗಿ ಅಮೇರಿಕಾಕ್ಕೆ ಪ್ರವಾಸ ಬೆಳೆಸಿದ್ಧಾರೆ
ಫ್ಯಾಮಿಲಿ ಜೊತೆ ಅಮೇರಿಕಾ ಪ್ರವಾಸಕ್ಕೆ ಹೊರಟ ರಾಕಿ ಭಾಯ್, ಅಲ್ಲಿ ಎರಡು ಬಹುನಿರೀಕ್ಷಿತ ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಅಮೇರಿಕಾಕ್ಕೆ ರಾಕಿಂಗ್ ಸ್ಟಾರ್ ಯಶ್ ಕುಟುಂಬ ತೆರಳಿದೆ

ರಾಮಾಯಣ ಚಿತ್ರಕ್ಕೆ ನಟ ಯಶ್ ಬಂಡವಾಳ ಹೂಡುವ ಜೊತೆಗೆ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಮತ್ತೊಬ್ಬ ನಟ ರಣಬೀರ್ ಕಪೂರ್ ಕೂಡ ಇದ್ದಾರೆ ಎನ್ನಲಾಗಿದೆ.
ಟಾಕ್ಸಿಕ್ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದು ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ, ಕೆಜಿಎಫ್ -2 ಚಿತ್ರದ ಬಳಿಕ ಬಿಡುಗಡೆಗೆ ಈ ಚಿತ್ರ ಸಜ್ಜಾಗಿದ್ದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ

