Actor Shreyas Manju at the Vizag acting training center

ವೈಜಾಗ್ ನಟನಾ ತರಬೇತಿ ಕೇಂದ್ರದಲ್ಲಿ ನಟ ಶ್ರೇಯಸ್ ಮಂಜು - CineNewsKannada.com

ವೈಜಾಗ್ ನಟನಾ ತರಬೇತಿ ಕೇಂದ್ರದಲ್ಲಿ ನಟ ಶ್ರೇಯಸ್ ಮಂಜು

ಯುವ ನಟ ಪ್ರತಿಭೆ ಶ್ರೇಯಸ್ ಮಂಜು ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ವೈಜಾಕ್‍ನ ಸತ್ಯಾನಂದ ಆಕ್ಟಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನಾನಾ ಬಗೆಯ ಕಲೆಯ ಪ್ರಕಾರಗಳ ತರಬೇತಿಯಲ್ಲಿ ನಿರತರಾಗಿದ್ದಾರೆ

2019 ರಲ್ಲಿ ಹೆಸರಾಂತ ಸೂರಜ್ ಪ್ರೊಡಕ್ಷನ್ಸ್ ನ ನಿರ್ಮಾಪಕ ಎಂ. ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಗುರು ದೇಶಪಾಂಡೆ ನಿರ್ದೇಶನದ “ಪಡ್ಡೆಹುಲಿ” ಚಿತ್ರದ ಮೂಲಕ ಶ್ರೇಯಸ್ ಮಂಜು ನಾಯಕನಾಗಿ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟ ಶ್ರೇಯಸ್ ಮಂಜು ಮೊದಲ ಚಿತ್ರದಲ್ಲೇ ಆಕ್ಷನ್ , ಲವ್ , ಸೆಂಟಿಮೆಂಟ್ ಗೂ ಸೈ ಎನ್ನುವಂತೆ ಅಭಿನಯಿಸಿ ಚಿತ್ರಂಗಕ್ಕೆ ಭರವಸೆ ಮೂಡಿಸಿದವರು

ತದನಂತರ ಖಡಕ್ ಪೆÇಲೀಸ್ ಅಧಿಕಾರಿಯಾಗಿ “ರಾಣ” ಚಿತ್ರದಲ್ಲಿ ಮಿಂಚಿದರು. ಮುಂದೆ ಮನಮಿಡಿಯುವ ಮುದ್ದಾದ ಪ್ರೇಮಕಥೆ “ವಿಷ್ಣುಪ್ರಿಯ” ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಎಲ್ಲರಿಂದ ಪ್ರಶಂಸೆಯನ್ನು ಪಡೆದು ಯಾವ ಪಾತ್ರನ್ನಾದರೂ ನಿಭಾಯಿಸುವ ಸಾಮರ್ಥ ಶ್ರೇಯಸ್ ಮಂಜು ಗೆ ಇದೆ ಎಂಬುದನ್ನು ನಿರೂಪಿಸಿದರು.

ಯುವ ನಟ ಶ್ರೇಯಸ್ ಮಂಜು ಪ್ರಕಾರ ಈಗ ಸಾಲು ಸಾಲು ಚಿತ್ರಗಳು ಕೈಯಲ್ಲಿದ್ದು ಕೆ. ಮಂಜು ನಿರ್ಮಾಣದಲ್ಲಿ ಎಸ್. ನಾರಾಯಣ್ ನಿರ್ದೇಶನದಲ್ಲಿ ದುನಿಯಾ ವಿಜಯ್ ಜೊತೆ ಅಭಿನಯಿಸುತ್ತಿರುವ “ಮಾರುತ” ಚಿತ್ರ ಈಗ ಚಿತ್ರೀಕರಣವನ್ನು ಪೂರೈಸಿದ್ದು, ಸದ್ಯ ಬಿಡುಗಡೆ ಹಂತದಲ್ಲಿದೆ.

ಇದರ ಜೊತೆಗೆ ಹೊಸ ತಂಡದೊಂದಿಗೆ “ದಿಲ್ದಾರ” ಎಂಬ ಚಿತ್ರವೂ ಕೂಡ ಕೊನೆಯ ಹಂತದಲ್ಲಿದ್ದು , ಸಾಂಗ್ ಶೂಟಿಂಗ್ ನಡೆಯುತ್ತಿದೆ. ಇದಾದ ಮೇಲೆ ನನ್ನ ಡ್ರೀಮ್ ಪ್ರಾಜೆಕ್ಟ್ ಶುರು ಮಾಡಬೇಕೆಂಬ ಪ್ಲಾನ್ ಮಾಡಿಕೊಂಡಿದ್ದೆ. ಆದರೆ ನನ್ನ ಹಳೆ ಕಮಿಟ್ಮೆಂಟ್ , ನಿರ್ಮಾಪಕರ ಚಿತ್ರ ಮುಗಿಸಬೇಕಾಗಿತ್ತು. ಈಗ ಎಲ್ಲಾ ಹಂತ ಹಂತವಾಗಿ ಮುಗಿಯುತ್ತಿದೆ.

ಆಕ್ಷನ್ , ಲವ್ ಸ್ಟೋರಿ ಮಾಡಲು ನಿರ್ಧರಿಸಿದ್ದು ಭಾಷೆಯಲ್ಲಿ ನಿರ್ಮಾಣ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ. ಸದ್ಯದಲ್ಲೇ ಚಿತ್ರದ ಕುರಿತು ದೊಡ್ಡ ಮಾಹಿತಿಯನ್ನು ನೀಡುತ್ತೇವೆ. ಯಾಕಂದ್ರೆ ಈ ಚಿತ್ರದ ಪ್ರಿಪರೇಷನ್ ಬಹಳ ದೊಡ್ಡದಾಗಿ ಮಾಡುತ್ತಿದ್ದೇವೆ. ಹಂತ ಹಂತವಾಗಿ ಒಂದೊಂದೇ ಮಾಹಿತಿ ನೀಡುತ್ತೇವೆ. ಬೆಳವಣಿಗೆಗೆ ಬಹಳಷ್ಟು ಸಹಕಾರ , ಬೆಂಬಲ ನೀಡುತ್ತಿದ್ದೀರಿ , ಅದೇ ರೀತಿ ಪ್ರೇಕ್ಷಕರು ಕೂಡ ಇಷ್ಟಪಟ್ಟಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin