"Government School-H-8" starring the Ghilli actor to hit the screens

ಗಿಲ್ಲಿ ನಟ ಅಭಿನಯದ “ಸರ್ಕಾರಿ ಶಾಲೆ-ಎಚ್- 8” ತೆರೆಗೆ - CineNewsKannada.com

ಗಿಲ್ಲಿ ನಟ ಅಭಿನಯದ “ಸರ್ಕಾರಿ ಶಾಲೆ-ಎಚ್- 8” ತೆರೆಗೆ

ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಕಥಾಹಂದರ ಹೊಂದಿರುವ ಚಿತ್ರ ‘ಸರ್ಕಾರಿ ಶಾಲೆ- ಎಚ್- 8’ ಫೆಬ್ರವರಿ 6ರ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಬಿಗ್ ಬಾಸ್ ವಿಜೇತ ಗಿಲ್ಲಿ ನಟ ಪ್ರಮುಖ ಪಾತ್ರಲ್ಲಿ ನಟಿಸಿರುವ ಈ ಚಿತ್ರಕ್ಕೆ ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗಿರಿಚಂದ್ರ ಪ್ರೊಡಕ್ಷನ್ಸ್ ಮೂಲಕ ತೇಜಸ್ವಿನಿ ಎಸ್. ಚಿತ್ರ ನಿರ್ಮಾಣ ಮಾಡಿದ್ದಾರೆ.

ಪ್ರಾರಂಭದಿಂದಲೂ ಕುತೂಹಲ ಕೆರಳಿಸುತ್ತಲೇ ಸಾಗುವ ‘ಸರ್ಕಾರಿ ಶಾಲೆ- ಎಚ್- 8’ ಚಿತ್ರದ ಕಥೆ ಒಂದು ವಿಗ್ರಹದ ಸುತ್ತ ನಡೆಯುತ್ತದೆ. ಈ ಚಿತ್ರಕ್ಕೆ ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ವಿಜೇತ್ ಮಂಜಯ್ಯ ಸಂಗೀತ ಸಂಯೋಜನೆಯ 3 ಹಾಡುಗಳು ಚಿತ್ರದಲ್ಲಿದ್ದು, ಹಾಸ್ಯನಟ ಶರಣ್ ಹಾಗೂ ಮೆಹಬೂಬ್ ಸಾಬ್ ಒಂದೊಂದು ಹಾಡನ್ನು ಹಾಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ರವಿ ರಾಮದುರ್ಗ ಹಾಗೂ ವೀನಸ್ ಮೂರ್ತಿ ಅವರ ಕ್ಯಾಮೆರಾ ವರ್ಕ್, ರವಿತೇಜ ಸಿ.ಹೆಚ್. ಸಂಕಲನ ಚಿತ್ರಕ್ಕಿದೆ.

ಸರ್ಕಾರಿ ಶಾಲೆ-ಎಚ್ 8′ ಚಿತ್ರದಲ್ಲಿ ಗಿಲ್ಲಿ ನಟ, ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಉಳಿದಂತೆ ಹಿರಿಯನಟ ರಾಘವೇಂದ್ರ ರಾಜ್ ಕುಮಾರ್, ಸುಚೇಂದ್ರ ಪ್ರಸಾದ್ , ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್, ನಮ್ರತಾ ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin