ಮಾರ್ಚ್ 30ಕ್ಕೆ ಗುರುದೇವ್ ಹೊಯ್ಸಳ ತೆರೆಗೆ ಖಡಕ್ ಪೊಲೀಸ್ ಅಧಿಕಾರಿಯಾಗಿ ಧನಂಜಯ

ಚಿತ್ರರಂಗದಲ್ಲಿ ಇದುವರೆಗೂ ಒಳ್ಳೆಯ ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮುಂದೆ ಕಿಚ್ಚ ಸುದೀಪ್ ಅವರ ನಿರ್ದೇಶನದಲ್ಲಿ ನಟಿಸುವ ಮಹಾದಾಸೆ ಇದೆ ಎಂದು ನಟ ರಾಕ್ಷಸ ಧನಂಜಯ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.

“ಗುರುದೇವ್ ಹೊಯ್ಸಳ” ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಕಿಚ್ಚ ಸುದೀಪ್ ಅವರ ಮುಂದೆಯೇ ನಟ ಡಾಲಿ ಧನಂಜಯ ತಮ್ಮ ಮನಗ ಇಂಗಿತ ಹೊರ ಹಾಕಿದರು.
ಈ ವೇಳೆ ಧನಂಜಯ ಅವರು ಸುದೀಪ್ ಸಾರ್ ಒಮ್ಮೆ ಮನೆಗೆ ಕರೆಸಿಕೊಂಡು ಯಾಕೆ ಹೊಟ್ಟೆ ಬಿಟ್ಟಿದ್ದೀರಿ,ವಯಸ್ಸಾದವರ ರೀತಿ ಕಾಣ್ತಾ ಇದ್ದೀರಿ ಎಂದರು. ಆಗ ಹೆಡ್ ಬುಷ್ ಚಿತ್ರದ ತಯಾರಿಯಲ್ಲಿದ್ದೆ. ಇರುವ ವಿಷಯವನ್ನು ಅವರ ಮುಂದೆ ಇಟ್ಟೆ. ಜಯರಾಜ್ ಪಾತ್ರಕ್ಕೆ ಈ ರೀತಿಯ ಗಎಟಪ್ ಎಂದೆ ಅದಕ್ಕೆ ಅವರು ಹೊಟ್ಟೆ ಬಿಟ್ಟೆ ಪಾತ್ರ ಮಾಡಬೇಕಾ ಸ್ಲಿಮ್ ಆಗಿ ಮಾಡಬಹುದಲ್ಲವೇ ಎಂದು ಸಲಹೆ ನೀಡಿದರು.

ಅಷ್ಟೇ ಅಲ್ಲ ಹೊಯ್ಸಳ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದೀತಾ ಯಾಕೆ ಮೀಸೆ ಬಿಟ್ಟಿಲ್ಲ ಎಂದರು. ನನಗೆ ಸೂಟ್ ಆಗಲ್ಲ ಸಾರ್ ಎಂದು ಹೇಳುತ್ತಿರುವಾಗಲೇ ನನ್ನ ಭಾವಚಿತ್ರದ ಮೇಲೆ ಮೀಸೆ ಬಿಡಿಸಿದ್ದರು. ಅವರ ಪ್ರೀತಿ ಅಭಿಮಾನಕ್ಕೆ ಚಿರಋಣಿ ಅದನ್ನು ಎಂದಿಗೂ ಮರೆಯಾಗದು ಆರಂಭದಿಂದಲೂ ಸಹಕಾರ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುದೇವ ಹೊಯ್ಸಳದಲ್ಲಿ ಗಂಭೀರ ವಿಷಯವನ್ನು ನಿರ್ದೇಶಕ ವಿಜಯ್ ಹೇಳ ಹೊರಟಿದ್ದಾರೆ. ಜೊತೆಗೆಶ ಎಮೋಷನ್ ವಿಷಯಕ್ಕೂ ಜಾಗವಿದೆ. ಚಿತ್ರಮಂದಿರಕ್ಕೆ ಬನ್ನಿ ಚಿತ್ರ ನೋಡಿ ಹರಸಿ ಎಂದರು.

ಟ್ರೈಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್,ನಿರ್ಮಾಪಕ ಕಾರ್ತಿಕ್ ಗೌಡ ಉತ್ತಮ ಸ್ನೇಹಿತ, ಆತ ಕರೆದಾಗ ಇಲ್ಲ ಎನ್ನಲು ಆಗಲಿಲ್ಲ. ಇನ್ನು ನಾನು ಇಷ್ಟಪಡುವ ನಟ ಅನಂತ್ ನಾಗ್ , ಅವರ ಥರ ಅಚ್ಯುತ್ ಕುಮಾರ್ ನಟಿಸುತ್ತಾರೆ ಎಂದು ಕಿಚ್ಚ ಸುದೀಪ್ ಮೆಚ್ಚುಗೆ ಸೂಚಿಸುತ್ತಲೇ, ಸಿನಿಮಾ ಬಿಡುಗಡೆ ಬಂದಾಗ ಭಯ ಪಡಬಾರದು. ಸೋಲು ಗೆಲುವು ಕಡೆ ತಲೆ ಕೆಡಿಸಿಕೊಳ್ಳದೆ. ನಿಮಗೆ ದೊಡ್ಡ ಅಭಿಮಾನಿ ಬಳಗವಿದೆ ಅವರು ಚಿತ್ರಮಂದಿರದಲ್ಲಿ ಸಂಭ್ರಮಿಸುವ ಪರಿ ನೋಡಿ ಖುಷಿ ಪಡಬೇಕು ಎಂದು ಧನಂಜಯ ಅವರಿಗೆ ಸಲಹೆ ನೀಡಿದರು.

ನಿರ್ಮಾಪಕರಲ್ಲಿ ಒಬ್ಬರಾದ ಯೋಗಿ ಜಿ ರಾಜ್, ಚಿತ್ರ ಇದೇ 30 ರಂದು ತೆರೆಗೆ ಬರುತ್ತಿದೆ. ಒಂದಷ್ಟು ಸೂಕ್ಷ್ಮ ವಿಷಯಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.
ನಟಿ ಅಮೃತಾ ಅಯ್ಯಂಗಾರ್, ಧನಂಜಯಹೆಂಡತಿ ಪಾತ್ರ ಮಾಡಿದ್ದೇನೆ. ಅವರೊಂದಿಗೆ ಇದು ಮೂರನೇ ಚಿತ್ರ. ಒಳ್ಳೆಯ ಪಾತ್ರ ಸಿಕ್ಕಿದೆ ಎಂದರೆ ನಿರ್ದೇಶಕ ವಿಜಯ್ ಎನ್ ಎಲ್ಲರೂ ಚಿತ್ರದ ಬಗ್ಗೆ ಹೇಳಿದ್ದಾರೆ ಚಿತ್ರ ನೋಡಿ ಹರಸಿ ಎಂದರು.
ಕಲಾವಿದರಾದ ಅಚ್ಯುತ್ ಕುಮಾರ್, ನಾಗಭೂಷಣ್,ಅನಿವಾಶ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅನಿರುದ್ಧ್, ಮಯೂರಿ, ಸಂಭಾಷಣೆ ಬರೆದಿರುವ ಮಾಸ್ತಿ,ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಕಾರ್ತಿಕ್ ತಮ್ಮ ತಮ್ಮ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಂಡರು