“ಹಕ್ಕಿ ಹಾಡುತೈತೆ ಮನುಸಾ” ಗುಂಮ್ಟಿ ಲಿರಿಕಲ್ ಹಾಡು ಬಿಡುಗಡೆ: ಕುತೂಹಲ ಹೆಚ್ಚಳ
ಕತ್ತಲೆಕೋಣೆ ಮತ್ತು ಇನಾಮ್ದಾರ್ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿರುವ, ಮೂಲತ: ಪತ್ರಕರ್ತರೂ ಆಗಿದ್ದ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಮತ್ತೊಂದು ಚಿತ್ರ “ಗುಂಮ್ಟಿ”. ಉಡುಪಿ ಬಳಿಯ ಮಂದರ್ತಿ ಹತ್ತಿರ ವಾಸವಿರುವ ಕಡುಬಿ ಜನಾಂಗದ ಬದುಕು ಬವಣೆ, ಹೋರಾಟದ ಕಥೆಯನ್ನು ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರು ಗುಂಮ್ಟಿ ಚಿತ್ರದ ಕಥಾಹಂದರ ಹೆಣೆದಿದ್ದಾರೆ. ಚಿತ್ರದಲ್ಲಿ ಸಂದೇಶ್ ಶೆಟ್ಟಿ ಅವರೇ ನಾಯಕ ಕಾಶಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತೆರೆಯ ಹಿಂದೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ, ವೈಷ್ಣವಿ ನಾಡಿಗ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ತಸ್ಮೈ ಪ್ರೊಡಕ್ಷನ್ಸ್ ಮತ್ತು ಜ್ಯೋತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿಕಾಸ್ ಎಸ್.ಶೆಟ್ಟಿ ಈ ಚಿತ್ರ ನಿರ್ಮಿಸಿದ್ದಾರೆ,
ಇತ್ತೀಚೆಗೆ ಚಿತ್ರಕ್ಕೆ ಮೆಹಬೂಬ್‍ಸಾಬ್ ಹಾಡಿರುವ ಲಿರಿಕಲ್ ಹಾಡೊಂದರ ಬಿಡುಗಡೆ ಕಾರ್ಯಕ್ರಮ ನಡೆಯಿತು. ರವಿಕೆಪ್ರಸಂಗ ಖ್ಯಾತಿಯ ಸಂತೋಷ್ ಕೊಡಂಕೇರಿ ಅವರು ಹಾಡುವ ಹಕ್ಕಿ ಹಾಡುತೈತಿ ಮನುಸಾ ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿದರು.
ಗುಮ್ಟಿ ಸಿನಿಮಾದ ಮೂಲಕ ಕುಡುಬಿ ಜನಾಂಗದವರು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳು, ಆಚಾರ-ವಿಚಾರಗಳು, ಅವರ ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ನಿರ್ದೇಶಕರು ಹೇಳಿದ್ದಾರೆ. ಉಡುಪಿ, ಕಾರವಾರ, ಹುಬ್ಬಳ್ಳಿಘಿ, ಕಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ ಗುಂಮ್ಟಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ,
ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಮಾತನಾಡಿ, ನಿರ್ಮಾಪಕರು ದೊಡ್ಡ ಮಟ್ಟದ ಸಿನಿಮಾ ಮಾಡುವ ಯೋಜನೆಯಲ್ಲಿದ್ದರು. ಅದಕ್ಕೂ ಮುನ್ನ ಸಣ್ಣ ಪ್ರಯೋಗವಾಗಿ ಈ ಸಿನಿಮಾ ಮಾಡಿದ್ದು ಸಂಸ್ಕøತಿ ವಿಚಾರಗಳ ಬಗ್ಗೆ ಚರ್ಚಿಸಿ ಕಥೆ ಮಾಡಿದ್ದೇನೆ ಬುಡುಬಿ ಜನರು ಶ್ರೀ ಮಲ್ಲಿಕಾರ್ಜುನನ ಆರಾ
ಧಕರು. ಇದು ಕೇವಲ ಸಿನಿಮಾ ಅಲ್ಲ . ನಶಿಸಿ ಹೋಗುತ್ತಿರುವ ಜನಪದ ಕಲೆಯನ್ನು ಉಳಿಸಿಕೊಳ್ಳಲು ಕಾಶಿ ಎಂಬ ಯುವಕನ ಹೋರಾಟವೇ ಈ ಚಿತ್ರಘಿಎಂದು ಹೇಳಿದರು.
ಈಗಾಗಲೇ ಗುಮ್ಟಿ ಸಿನಿಮಾದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಮುಗಿದಿದ್ದು, ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ.
ನಿರ್ಮಾಪಕ ವಿಕಾಸ್ ಎಸ್. ಶೆಟ್ಟಿ ಅವರು ಮಾತನಾಡ್ತಿ ಕಡುಬಿ ಸಮುದಾಯದ ಸಂಸ್ಕøತಿಯನ್ನು ಉಳಿಸಲಿಕ್ಕೆ ನಾಯಕ ಕಾಶಿ, ನಾಯಕಿ ಮಲ್ಲಿ ನಡೆಸುವ ಹೋರಾಟದ ಕಥೆಯನ್ನು ಸಿನುಮಾ ಮಾಡಿದ್ದೇವೆ ಎಂದು ಹೇಳಿದರು.
ಸಾಫ್ಟ್ ವೇರ್ ಎಂಜಿನಿಯರ್ ಆದ ನಾಯಕಿ ವೈಷ್ಣವಿ ನಾಡಿಗ್ ನನ್ನ ಮೊದಲ ಚಿತ್ರವೇ ಕಲಾತ್ಮಕ ಆಗಿರುವುದು ಖುಷಿ. ನನಗೆ ಕುಂದಾಪುರ `ಭಾಷೆ ಗೊತ್ತಿದ್ದಿಲ್ಲ ಅದನ್ನೆಲ್ಲ ನಿರ್ದೇಶಕರು ಹೇಳಿಕೊಟ್ಟರು. ಕಾಶಿಯ ಜರ್ನಿಯ ಜೊತೆ ನನ್ನ ಪಾತ್ರ ಟರಾವೆಲ್ ಆಗುತ್ತೆ ಎಂದು ಹೇಳಿದರು.
ಉಳಿದ ಪಾತ್ರಗಳಲ್ಲಿ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರ`Áಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್‍ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಅಭಿನಯಿಸಿದ್ದಾರೆ. ಗುಮ್ಟಿ ಚಿತ್ರಕ್ಕೆ ಅನೀಶ್ ಡಿಸೋಜಾ ಅವರ ಕ್ಯಾಮರಾ ಕೈಚಳಕವಿದ್ದು, ಚಿತ್ರದ ಹಾಡುಗಳಿಗೆ ಮೋಹನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಗುಮ್ಟಿ ಸಿನಿಮಾಕ್ಕೆ ಶಿವರಾಜ್ ಮೇಹು ಅವರ ಸಂಕಲನವಿದೆ. ಸದ್ಯದಲ್ಲೇ ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆ ಚಿತ್ರತಂಡಕ್ಕಿದೆ.