Happy birthday to actor Dhananjaya at New York Times Square

ಅಮೇರಿಕಾದ ಟೈಮ್ ಸ್ಕ್ವೇರ್ ನಲ್ಲಿ ನಟ ಧನಂಜಯ ಅವರಿಗೆ ಹುಟ್ಟುಹಬ್ಬದ ಶುಭಾಷಯ - CineNewsKannada.com

ಅಮೇರಿಕಾದ ಟೈಮ್ ಸ್ಕ್ವೇರ್ ನಲ್ಲಿ ನಟ ಧನಂಜಯ ಅವರಿಗೆ ಹುಟ್ಟುಹಬ್ಬದ ಶುಭಾಷಯ

ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ನಟ ರಾಕ್ಷಸ ಡಾಲಿ ಧನಂಜಯ ಅವರಿಗೆ 37ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಮೇರಿಕಾದ ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಟೈಮ್ ಸ್ಕ್ವೇರ್ ನಲ್ಲಿ ಶುಭಾಷಯ ಕೋರುವ ವಿಡಿಯೋ ತುಣುಕ ಪ್ರಸಾರ ಮಾಡಲಾಗಿದ್ದು, ಕನ್ನಡದ ಪ್ರತಿಭೆಯ ಗತ್ತು ಗಮ್ಮತ್ತು ಜಗದಗಲಕ್ಕೆ ವಿಸ್ತರಿಸಿದೆ.

ಸೂಪರ್ ಸ್ಟಾರ್ ರಜಿನಿಕಾಂತ್ ನಂತರ ಭಾರತದ ಎರಡನೆ ನಟನಿಗೆ ಟೈಂ ಸ್ವ್ಕೇರ್ ನಲ್ಲಿ ಗೌರವ ಸಿಕ್ಕಿದೆ, ಮೊದಲ ಕನ್ನಡ ನಟನ ಹುಟ್ಟುಹಬ್ಬದ ವಿಡಿಯೋ ಪ್ರಸಾರ ಮಾಡಿದ ಹೆಗ್ಗಳಿಕೆಗೆ ಡಾಲಿ ಧನಂಜಯ ಪಾತ್ರವಾಗಿದ್ದದಾರೆ 15 ಸೆಕೆಂಡ್‍ನ ವಿಡಿಯೋ ಪ್ರಸಾರ ಮಾಡಿದ್ದು ಡಾಲಿ ಧನಂಜಯ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

ಕರ್ನಾಟಕದ ಪಿಂಕ್ ಟಿಕೇಟ್ಸ್ ಪಿಆರೋ ತಂಡದಿಂದ ಶುಭಾಶಯ ಕೋರಿಕೆ ಡಾಲಿ ಧನಂಜಯ ಹುಟ್ಟುಹಬ್ಬ ಹಿನ್ನಲೆ
ಒಂದು ದಿನ ಮುಂಚಿತವಾಗಿ ಅಮೇರಿಕಾದ ಟೈಂ ಸ್ವ್ಕೇರ್ ನಲ್ಲಿ ಹುಟ್ಟುಹಬ್ಬದ ಶುಭಾಶಯ ಕನ್ನಡಿಗ ನಟನಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಶುಭಾಶಯ ಸಿಕ್ಕಿದೆ.

ನಾಲ್ಕು ವರ್ಷದ ಬಳಿಕ ಹುಟ್ಟುಹಬ್ಬ:

ಕೊರೊನಾ ಸೋಂಕು ಸೇರಿದಂತೆ ವಿವಿಧ ಕಾರಣಗಳಿಂದ ನಾಲ್ಕು ವರ್ಷದ ಬಳಿಕ ನಟ ಧನಂಜಯ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹೀಗಾಗಿ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳು ಮೀಸಲಿಟ್ಟಿದ್ದಾರೆ.

ಮೈಸೂರು ರಸ್ತೆಯ ನಂದಿಲಿಂಕ್ಸ್ ಗ್ರೌಂಡ್‍ನಲ್ಲಿ ಅಭಿಮಾನಿಗಳ ಸಂಭ್ರಮ, ಜೈಕಾರ, ಹರ್ಷೋದ್ಘಾರದ ನಡುವೆ ಡಾಲಿ ಧನಂಜಯ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಅವರ ಸಂಭ್ರಮದಲ್ಲಿ ತಾವೂ ಸಂಭ್ರಮಿಸಿ ಖುಷಿ ಪಟ್ಟಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಡಾಲಿ ಧನಂಜಯ ಅವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ “ಉತ್ತರ ಖಾಂಡ” ಚಿತ್ರದ ಗಬ್ರು ಸತ್ಯ ಪೋಸ್ಟರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ.

ವಿಶೇಷ ಊಟ’

ಉತ್ತರ ಕರ್ನಾಟಕ ಹಾಗೂ ಸೌತ್ ಇಂಡಿಯನ್ ಎರಡು ಶೈಲಿಯ ಊಟದ ವ್ಯವಸ್ಥೆಯನ್ನು ರಾಯಚೂರಿನ ಅಭಿಮಾನಿಗಳು ವ್ಯವಸ್ಥೆ ಮಾಡಿದ್ದಾರೆ. ರಾಯಚೂರು ಸಿಂದನೂರಿನಿಂದ ಖಡಕ್ ರೊಟ್ಟಿ, ಎಣ್ಣೆ ಬದನೆಕಯಿ ಪುಂಡೆ ಪಲ್ಯೆ, ಬೂಂದಿ ಶೇಂಗ ಹಿಂಡಿ ,ಮೆಣಸಿನಕಾಯಿ ಸೇರಿದಂತೆ ಸುಮಾರು 2000 ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಶಿವರಾಜ್ ಪಾಟೀಲ್ ಗುಂಜಳ್ಳಿ ಅವರು ಅಭಿಮಾನಿಗಳಿಗೆ ವ್ಯವಸ್ಥೆ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin