ನಿಖಿಲ್ ಕುಮಾರ್ ಹೊಸ ಚಿತ್ರಕ್ಕೆ ಅದ್ದೂರಿ ಚಾಲನೆ : ಕನ್ನಡಕ್ಕೆ ಬಂದ ಲೈಕಾ

ಸ್ಯಾಂಡಲ್‍ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ಹೊಸ ಸಿನಿಮಾ ಸೆಟ್ಟೇರಿದೆ .ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ “ಲೈಕಾ” ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದೆ. ಪ್ಯಾನ್ ಇಂಡಿಯಾ ಚಿತ್ರ ಮುಂದಿನ ತಿಂಗಳ 11 ರಿಂದ ಆರಂಭವಾಗಲಿದೆ.

ನಿಖಿಲ್ ಕುಮಾರಸ್ವಾಮಿ ಮತ್ತು ಯುಕ್ತಿ ತರೇಜಾ ಅಭಿನಯದ ಚಿತ್ರದ ಮುಹೂರ್ತ ಬೆಂಗಳೂರಿನ ತಾರಾ ಹೋಟೆಲ್‍ನಲ್ಲಿ ಅದ್ದೂರಿಯಾಗಿ ನಡೆದಿದ್ದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಹಾಗು ನಿರ್ಮಾಪಕ ಸುಭಾಷ್ ಕರಣ್ ಅವರ ಇಡೀ ಕುಟುಂಬ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿತ್ತು.

ಈ ವೇಳೆ ಮಾತಿಗಿಳಿದ ನಟ ನಿಖಿಲ್ ಕುಮಾರ್, ಇನ್ನು ಮುಂದೆ ವರ್ಷಕ್ಕೆ ಮೂರು ಸಿನಿಮಾ ಮಾಡುವ ನಿರ್ಧಾರ ಮಾಡಿದ್ದೇನೆ ಹಾಗಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಿ ಪ್ರೇಕ್ಷಕರನ್ನ ರಂಜಿಸುತ್ತೇನೆ.ಇದುವರೆಗೆ ಮಾಡಿರುವ ಜಾಗ್ವಾರ್, ಸೀತಾರಾಮ ಕಲ್ಯಾಣ, ಕುರುಕ್ಷೇತ್ರ, ರೈಡರ್ ಚಿತ್ರದ ಮೂಲಕ ರಾಜ್ಯದ ಜನ ಮನೆ ಮಕ್ಕಳ ರೀತಿ ಬೆಳೆಸಿದ್ದಾರೆ. ಪ್ರತಿ ಸಿನಮಾವನ್ನು ಪ್ರೀತಿಯಿಂದ ಮಾಡಿದ್ದೇನೆ, ಈ ಚಿತ್ರದಲ್ಲಿಯೂ ಕೂಡ ಶಕ್ತಿ ಮೀರಿ ಪ್ರಾಮಾಣಿಕವಾಗಿ ಮಾಡ್ತೇನೆ. ಮನರಂಜನೆ ನೀಡುವುದಷ್ಟೇ ನನ್ನ ಉದ್ದೇಶ ಎಂದರು.

ನಿರ್ದೇಶಕ ಲಕ್ಷಣನ್ ಅವರು ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಕಥೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ರಾಜಕೀಯದ ಹಿನ್ನೆಲೆಯಲ್ಲಿ ಬಂದರೂ ಜನ ಪ್ರೀತಿಕೊಟ್ಟು ಬೆಳೆಸಿದ್ದಾರೆ. ಕಲಾವಿದನಾಗಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತೇನೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ನಿರ್ಮಾಪಕ ಸುಭಾಷ್ ಕರಣ್ ನಿರ್ಮಾಣದಲ್ಲಿ ಚಿತ್ರ ಮೂಡಿಬರುತ್ತಿದೆ. ಒಬ್ಬರ ಜೊತೆ ಸಂಬಂಧ ಬೆಳೆಸಿದರೆ ಅದನ್ನು ಬಿಟ್ಟುಕೊಡುವುದಿಲ್ಲ,ಅದೇ ರೀತಿ ಸುಭಾಷ್ ಅವರ ಜೊತೆಯೂ ಕೂಡ ಎಂದರು
.
ನಟ ಕೋಮಲ್ ಮಾತನಾಡಿ ಸಿನಿಮಾದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಕಥೆ ಹೇಳಿದ ಹಾಗೆ ಮಾಡಿದರೆ ಚಿತ್ರ ಬೇರೊಂದು ಮಟ್ಟಕ್ಕೆ ಹೋಗಲಿದೆ. ನಿರ್ದೇಶಕ ಲಕ್ಷಣ್, ತಮಿಳಿನಲ್ಲಿ ಮಾಡಿರುವ ಮೂರು ಸಿನಿಮಾಗಳೂ ಸೂಪರ್ ಡೂಪರ್ ಹಿಟ್ ಆಗಿವೆ. ಕನ್ನಡದಲ್ಲಿಯೂ ಹಿಟ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ನಿರ್ದೇಶಕ ಲಕ್ಷಣ್ ಮಾತನಾಡಿ ನಿಖಿಲ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಲು ಸಖತ್ ಎಕ್ಸೈಟ್ ಆಗಿದ್ದೇನೆ. ಮುಂದಿನ ತಿಂಗಳು 11 ರಿಂದ ಚಿತ್ರೀಕರಣ ಆರಂಭವಾಗಲಿದೆ. ಪಕ್ಕಾ ಮನರಂಜನೆಗೆ ಆದ್ಯತೆ ನೀಡಲಾಗಿದೆ. ಚಿತ್ರೀಕರಣಕ್ಕೆ ಹೋಗುವ ಮುನ್ನ ಶೀರ್ಷಿಕೆ ಬಿಡುಗಡೆ ಮಾಡಲಾಗುವುದು. ಐದು ಭಾಷೆಯಲ್ಲಿ ಚಿತ್ರ ಮೂಡಿ ಬರಲಿದೆ.ಜೊತೆಗೆ ಕಲಾವಿದರ ದಂಡು ಇರಲಿದೆ . ಐದು ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ಇದೆ ಎನ್ನುವ ಮಾಹಿತಿ ಹಂಚಿಕೊಂಡರು.

ನಟಿ ಯುಕ್ತಿ ತರೇಜಾ ಕನ್ನಡದ ಸಿನಿಮಾದಲ್ಲಿ ಮೊದಲ ಬಾರಿಗೆ ಅಭಿನಯ ಮಾಡುತ್ತಿದ್ದು ಮುಂದಿನ ಪತ್ರಿಕಾಗೋಷ್ಠಿಯ ವೇಳೆ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು
ಕನ್ನಡಿಗರಾದ ಅಜನೀಶ್ ಲೋಕನಾಥ್, ರಘು ನಿಡುವಳ್ಳಿ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ..