ಭರವಸೆಯ ಬಾಲಕಲಾವಿದ ಮಾಸ್ಟರ್ ಆಕಾಶ್ ಗೆ ಹುಟ್ಟು ಹಬ್ಬದ ಸಂಭ್ರಮ

“ಫೈಟರ್” ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಚಿಕ್ಕ ವಯಸ್ಸಿನ ಪಾತ್ರ ಸಮರ್ಥವಾಗಿ ನಿಭಾಯಿಸಿದ್ದ ಮಾಸ್ಟರ್ ಆಕಾಶ್. ಕನ್ನಡ ಚಿತ್ರರಂಗದಲ್ಲಿ ಭರವಸೆಯ ಬಾಲ ಕಲಾವಿದರಾಗಿ ಹೊರ ಹೊಮ್ಮುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಇಂದು ಅವರ ಹುಟ್ಟುಹಬ್ಬದ ಸಂಭ್ರಮ ಅದಕ್ಕೆ ಪೂರಕ ಎನ್ನುವಂತೆ ಸಾಲು ಸಾಲು ಚಿತ್ರಗಳು ಸೆಟ್ಟೇರಲು ರೆಡಿಯಾಗಿವೆ.

ಕನ್ನಡದಲ್ಲಿ ಬಾಲಕಲಾವಿದರ ಸಂಖ್ಯೆ ಕಡಿಮೆ. ಅದರ ಕೊರತೆ ತುಂಬಲು ಮಾಸ್ಟರ್ ಆಕಾಶ್ ಎಲ್ಲಾ ರೀತಿಯಲ್ಲಿಯೂ ಸಿದ್ದತೆ ಮಾಡಿಕೊಂಡಿದ್ದಾರೆ. ಜೊತೆಗೆ ಪಾತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಅಭಿನಯ, ಸಾಹಸ, ನೃತ್ಯ ಸೇರಿದಂತೆ ಕ್ಯಾಮೆರಾ ಮುಂದೆ ನಿಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ಅವಕಾಶ ಹುಡುಕಿಕೊಂಡು ಬರುತ್ತಿವೆ.

ಫೈಟರ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಭರವಸೆ ಹುಟ್ಟಿಸಿರುವ ಅಕಾಶ್ ಕೈಯಲ್ಲಿ ಈಗ ನಾಲ್ಕೈ ಚಿತ್ರಗಳು ಇವೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರಗಳು ಸೆಟ್ಟೇರಿದ್ದು ಚಿತ್ರರಂಗದಲ್ಲಿ ಬ್ಯುಸಿಯಾಗುವ ಎಲ್ಲಾ ಲಕ್ಷಣ ತೋರಿದ್ದಾರೆ.

ಶ್ರೀ ಮಧ್ಯಮಾಂಬಿಕಾ ಎಂಟರ್ ಪ್ರೈಸಸ್ ಹಾಗೂ ಎಂ.ಪಿ. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮುನೀಂದ್ರ ಕೆ ಪುರ ಆಕಾಶ್ ಗಾಗಿ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಸದ್ಯ ಸ್ಕ್ರಿಪ್ಟ್ ಹಂತದಲ್ಲಿರುವ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ ಎಂದು ಮುನೀಂದ್ರ ಹೇಳಿದ್ದಾರೆ
ಸಿ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಪಕ ನವೀನ್ ಕೂಡ ಸಿನಿಮಾನಿರ್ಮಾಣ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜಗದೀಶ್ ಎನ್ ಚೇರ್ಮನ್ ಕೂಡ ಆಕಾಶ್ ಗಾಗಿ ಸಿನಿಮಾ ನಿರ್ಮಿಸಲು ಮುಂದಾಗಿದ್ದು, ಮುಂದಿನ ತಿಂಗಳು ಅದರ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಆಕಾಶ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಸೋಮಶೇಖರ್ ಕಟ್ಟಿಗೇನಹಳ್ಳಿ ಸದ್ಯದಲ್ಲಿಯೇ ಹೊಸ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಸ್ಟರ್ ಆಕಾಶ್ “ಸಿನಿಮಾ ಬಗ್ಗೆ ಚಿಕ್ಕಂದಿನಿಂದಲೂ ತುಂಬಾ ಆಸಕ್ತಿ ಇತ್ತು. ಅದಕ್ಕೆ ಅಪ್ಪ – ಅಮ್ಮನಿಂದ ತುಂಬಾ ಸಹಕಾರ ಸಿಕ್ಕಿದೆ. ಥ್ರಿಲ್ಲರ್ ಮಂಜು ಮಾಸ್ಟರ್ ಸ್ಟಂಟ್, ಲಕ್ಕಿ ಶಂಕರ್ ಆಕ್ಟಿಂಗ್ ಕಲಿಸುತ್ತಿದ್ದಾರೆ. ಹಾಗೆಯೇ ಡಾನ್ಸ್, ವರ್ಕೌಟ್ ಸೇರಿದಂತೆ ಸಿನಿಮಾಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಾಲ್ಕೈದು ಸಿನಿಮಾ ಪ್ರಕಟವಾಗಿರುವುದು ಖುಷಿಕೊಟ್ಟಿದೆ ಎಂದಿದ್ದಾರೆ