“ಶ್ರೀವಿಜಯದಾಸರು” ಸಿಡಿ ಬಿಡುಗಡೆ : ದಾಸರ ಕುರಿತು ಹತ್ತು ಚಿತ್ರ ಮಾಡುವ ಗುರಿ-ತ್ರಿವಿಕ್ರಮ ಜೋಷಿ

ದಾಸ ಶ್ರೇಷ್ಠರ ಚಿತ್ರಗಳನ್ನು ಒಂದರ ಹಿಂದೆ ಚಿತ್ರ ನಿರ್ಮಾಣವಾಗುತ್ತಿದೆ. ಇದೀಗ “ದಾಸವರೇಣ್ಯ ಶ್ರೀವಿಜಯದಾಸರು” ಚಿತ್ರದ ಹಾಡುಗಳು ಮತ್ತು ದ್ವನಿಸುರುಳಿ ಬಿಡುಗಡೆಯಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೇರಿದಂತೆ ಗಣ್ಯಾತಿ ಗಣ್ಯರು ಆಗಮಿಸಿ ಚಿತ್ರಕ್ಕೆ ಶುಭಹಾರೈಸಿದರು.
ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಿವನಗೌಡ ನಾಯಕ, ಶಾಸಕ ರವಿ ಸುಬ್ರಮಣ್ಯವಾಣಿಜ್ಯ ಮಂಡಳಿ ಅಧ್ಯಕ್ಷ ಎನ್. ಎಂ ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಲಹರಿ ಸಂಸ್ಥೆಯ ವೇಲು ಸೇರಿದಂತೆ ಅನೇಕರು ಈ ಕ್ಷಣಕ್ಕೆ ಸಾಕ್ಷಿಯಾದರು.ಚಿತ್ರದಲ್ಲಿ 9 ಹಾಡುಗಳಿದ್ದು ಅದರಲ್ಲಿ ಐದು ಹಾಡುಗಳನ್ನು ಪ್ರದರ್ಶಿಸಲಾಯಿತು
ಈ ವೇಳೆ ಸಚಿವ ಪ್ರಹ್ಲಾದ ಜೋಷಿ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸುವುದೇ ದಾಸ ಸಾಹಿತ್ಯ.ಈರೀತಿಯ ಚಿಂತನೆಗಳು ಜಗತ್ತಿಗೆ ಅಗತ್ಯವಿದೆ. ಈ ಮಾದರಿಯ ಚಿತ್ರ ಮಾಡುವುದರಿಂದ ದುಡ್ಡು ಬರುವುದಿಲ್ಲ, ಆದರೆ ದಾಸರ ಚಿಂತನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುವುದು ಶ್ಲಾಘನೀಯ ಪ್ರಯತ್ನ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಮಾಜಿ ಸಚಿವ ಮುರುಗೇಶ್ ನಿರಣಿ ಪ್ರತಿಕ್ರಿಯಿಸಿ ಬರೀ ದಾಸರ ಚಿತ್ರಗಳನ್ನೇ ಮಾಡುತ್ತಿದ್ದೀರಿ, ಈ ರೀತಿಯ ಚಿತ್ರಗಳಿಂದ ಹಾಕಿದ ದುಡ್ಡ ಬರುವುದಿಲ್ಲ, ನಾನು, ಅಥವಾ ತ್ರಿವಿಕ್ರಿಮ ಜೋಷಿ ಹೇಳಿಕೇಳಿ ಉದ್ಯಮಿಗಳು 10 ರೂಪಾಯಿ ಹಾಕಿದರೆ ಅದರಿಂದ 20 ರೂಪಾಯಿ ನಿರೀಕ್ಷೆ ಇಟ್ಟುಕೊಂಡಿರುತ್ತೇವೆ. ದಾಸರ ಕುರಿತು ಮಾಡಿರುವ ಮೂರು ಚಿತ್ರಗಳ ಹಣ ಬರಬೇಕಾದರೆ ಒಳ್ಳೆಯ ನಾಯಕ ನಾಯಕಿಯರನ್ನು ಹಾಕಿಕೊಂಡು ಬೇರೆ ರೀತಿಯ ಚಿತ್ರ ಮಾಡಿ, ಹೆಚ್ಚಿಗೆ ದುಡ್ಡು ಮಾಡಿ ಎಂದು ಹಾರೈಸಿದರು.

ನಿರ್ಮಾಪಕ ತ್ರಿವಿಕ್ರಮ ಜೋಷಿ ಮಾತನಾಡಿ ಚಿತ್ರದಲ್ಲಿ ವಿಜಯದಾಸರು ಪಾತ್ರ ತಾವೇ ಮಾಡಿದ್ದೇವೆ. ಜೀವನದ ಸಂದೇಶ ಕೊಡುವ ಚಿತ್ರ ಮಾಡಿದರೆ ಮಕ್ಕಳಿಗೂ ಅನುಕೂಲವಾಗಲಿದೆ. ಜಗನ್ನಾಥದಾಸರು ಚಿತ್ರಕ್ಕೆ ಕ್ಲಾಪ್ ಮಾಡಲು ಬಂದು ನಾನೇ ನಿರ್ಮಾಪಕ, ನಟನೂ ಆಗಿದ್ದೇನೆ. ದಾಸಸಾಹಿತ್ಯದಲ್ಲಿ ಹತ್ತು ಚಿತ್ರ ನೀಡುವ ಉದ್ದೇಶವಿದೆ.ಈಗಾಗಲೂ ಮೂರು ಚಿತ್ರ ಮಾಡಿದ್ದೇನೆ.ಮುಂದೆ ಗೋಪಾಲದಾಸರು ಸೇರಿದಂತೆ ಅನೇಕ ದಾಸವರೇಣ್ಯರ ಚಿತ್ರಗಳನ್ನು ತೆರೆಗೆ ತರುವ ಉದ್ದೇಶ ಹೊಂದಲಾಗಿದೆ.ಎಲ್ಲರ ಸಹಕಾರ ಬೇಕು, ಈ ರೀತಿಯ ಚಿತ್ರಗಳಿಂದ ಹಣ ಬರುವುದಿಲ್ಲ. ಬದಲಾಗಿ ವಿಚಾರವನ್ನು ತಿಳಿಸುವ ಉದ್ದೇಶ ನಮ್ಮದು ಎಂದು ಮಾಹಿತಿ ಹಂಚಿಕೊಂಡರು.
ನಿರ್ದೇಶಕ ಡಾ.ಮಧುಸೂದನ್ ಹವಾಲ್ದಾರ್ ,ಸಂಗೀತ ನಿರ್ದೇಶಕ ವಿಜಯ ಕೃಷ್ಣ ಸೇರಿದಂತೆ ಚಿತ್ರತಂಡದ ಅನೇಕರು ಉಪಸ್ಥಿತರಿದ್ದರು.