"Hanuman Chalisa" sung in Kannada by singer Vijay Prakash.

ಗಾಯಕ ವಿಜಯ್ ಪ್ರಕಾಶ್ ಕಂಠ ಸಿರಿಯಲ್ಲಿ ಕನ್ನಡದದಲ್ಲಿ ಮೂಡಿ ಬಂದ “ಹನುಮಾನ್ ಚಾಲೀಸ” - CineNewsKannada.com

ಗಾಯಕ ವಿಜಯ್ ಪ್ರಕಾಶ್ ಕಂಠ ಸಿರಿಯಲ್ಲಿ ಕನ್ನಡದದಲ್ಲಿ ಮೂಡಿ ಬಂದ “ಹನುಮಾನ್ ಚಾಲೀಸ”

ದೇಶದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಹೊಸ್ತಿಲಲ್ಲೇ ಕನ್ನಡದಲ್ಲಿ ಹನುಮಾನ್ ಚಾಲಿಸ ಆಲ್ಬಂ ಸಿದ್ದಗೊಂಡಿದೆ,ಭಕ್ತಿ ಭಾವದ ಹೊನಲಿಗೆ ಹೃದಯಸ್ಪರ್ಶ ನೀಡುವ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಕನ್ನಡದಲ್ಲಿ ಮೊದಲನೇ ಹನುಮಾನ ಚಾಲಿಸಾ ಮೂಡಿ ಬಂದಿದೆ.

ಕೋಟ್ಯಾಂತರ ರಾಮಭಕ್ತರು ಕಾತುರದಿಂದ ಕಾಯುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠೆ ಸುಸಮಯ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿಗೆ ಭಕ್ತಿಯ ನಿಯಮ ಏನೆಂದು ತೋರಿಸಿಕೊಟ್ಟ ರಾಮಭಕ್ತ ಹನುಮನ ಕುರಿತಾದ ಹನುಮಾನ್ ಚಾಲಿಸಾ ಬಿಡುಗಡೆಯಾಗಿದೆ.

ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮೂಡಿಬಂದಿರುವ ಹನುಮಾನ್ ಚಾಲಿಸಾ ವನ್ನು ಭಕ್ತಿ ಭಾವದ ಹೊನಲಿಗೆ ಹೃದಯಸ್ಪರ್ಶ ನೀಡುವ ಹೃತ್ಕಂಠ ಗಾಯಕ ನಮ್ಮ ಕನ್ನಡದ ಹೆಮ್ಮೆಯ ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಭಕ್ತಿಪರವಶರಾಗಿ ಹಾಡಿದ್ದಾರೆ. ವೆಂಕಟೇಶ್ ಉತ್ತರಹಳ್ಳಿ ನಿರ್ಮಿಸಿದ್ದು ಲೋಕಿ ತವಸ್ಯ ಸಂಗೀತ ನೀಡಿದ್ದಾರೆ

ಹನುಮನ ಕುರಿತಾಗಿ ಹಲವು ಕೃತಿಗಳು, ಗೀತೆಗಳು, ಭಕ್ತಿಗೀತೆಗಳು ಬಂದಿವೆ. ಆದರೆ ಕನ್ನಡದಲ್ಲೇ ಪ್ರಪ್ರಥಮ ಬಾರಿಗೆ ಹನುಮಾನ್ ಚಾಲಿಸವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಒಂದು ಆಲ್ಬಂ ತಯಾರಿಸಲಾಗಿದೆ. ಇಂತಹ ಒಂದು ಅದ್ಭುತ ಕೆಲಸವನ್ನು ಹನುಮನ ಅಪ್ರತಿಮ ಭಕ್ತ ವೆಂಕಟೇಶ್ ಉತ್ತರಹಳ್ಳಿ ಬಹಳ ಆಸ್ಥೆ ವಹಿಸಿ ತನು ಮನ ಧನವನ್ನು ಸಮರ್ಪಿಸಿ ಲಕ್ಷ್ಮಿ ವೆಂಕಟೇಶ್ವರ ಆರ್‍ಜಿ 510 ಉತ್ತರಹಳ್ಳಿ ಬ್ಯಾನರ್ ಅಡಿಯಲ್ಲಿ ಆಲ್ಬಂ ನಿರ್ಮಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin