ಬ್ಯುಸಿ ತಾರೆ ಶುಭರಕ್ಷ : ಕಾಲಿವುಡ್‍ಗೂ ಪ್ರವೇಶ

ಚಂದನವನದ ಪ್ರತಿಭೆ ಶುಭರಕ್ಷ ‘ಆಪಲ್ ಕೇಕ್’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು. ಮೊದಲ ಸಿನಿಮಾವೇ ಸಾಧಾರಣ ಯಶಸ್ಸು ಕಂಡು ಅಮೆಜಾನ್ ಪ್ರೈಮ್ದಲ್ಲಿ ಸದ್ದು ಮಾಡಿತು. ಇದರಿಂದ ಸಿನಿಪಂಡಿತರು ಇವರನ್ನು ಆಪಲ್ ಬ್ಯೂಟಿ ಎಂದು ಕರೆಯುತ್ತಿದ್ದಾರೆ.

ಈ ಸಿನಿಮಾದಿಂದ ಹೆಸರು ಬಂದಿದ್ದರಿಂದ ಟಿಪಿ ಕೈಲಾಸಂ ಕಥೆ ಹೊಂದಿರುವ ‘ಮೂಕ ವಿಸ್ಮಿತ’ದಲ್ಲಿ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುವಂತಾಯಿತು. ನಂತರ ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಬವ’ದಲ್ಲಿ ಪ್ರಮೋದ್ ಜೋಡಿಯಾಗಿ ನಟಿಸಿದ್ದರು. ‘ಹೋಂ ಮಿನಿಸ್ಟರ್’ದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿತ್ತು. ಇದೇ ಚಿತ್ರದ ಸಲುವಾಗಿ 2023ರ ‘ಬೆಸ್ಟ್ ಸಪೋರ್ಟಿನಿಂಗ್’ ಕ್ಯಾರೆಕ್ಟರ್ ಎಂದು ಸೈಮಾ ಪ್ರಶಸ್ತಿ ಒಲಿದು ಬಂದಿತ್ತು.

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ರಾಬರ್ಟ್’ದಲ್ಲೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆಡಿ ಚಕ್ರವರ್ತಿ ಅವರೊಂದಿಗೆ ಅಭಿನಯಿಸಿರುವ ‘ಹೂ’ ಕನ್ನಡ-ತೆಲುಗು ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.

ಕಾರ್ತಿಕ್ ನಿರ್ದೇಶನ ಮಾಡುತ್ತಿರುವ ತಮಿಳು ಮೆಗಾ ಧಾರವಾಹಿ ‘ಕಾರ್ತಿಕೈ ದೀಪಂ’ದಲ್ಲಿ ಖಳನಾಯಕಿಯಾಗಿ ನಟಿಸುತ್ತಿದ್ದು, ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದರಿಂದ ಕಾಲಿವುಡ್ದಲ್ಲಿ ಪರಿಚಿತರಾಗಿ ಮಾಡೆಕ್ಸ್ ಎಂಟಟೈನ್‍ಮೆಂಟ್ ನಿರ್ಮಾಣ, ತಿನಕರನ್ ಆಕ್ಷನ್ ಕಟ್ ಹೇಳುತ್ತಿರುವ ಹೆಸರಿಡದ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದರ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ. ಅಲ್ಲದೆ ಕನ್ನಡದಲ್ಲೂ ನಿರ್ದೇಶಕ ಸಿರಿ ಸಾರಥ್ಯದ ಮಹಿಳಾ ಪ್ರಧಾನ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಕ್ಲೈಮಾಕ್ಸ್ ಬಾಕಿ ಇದೆ. ಹಾಗೂ ಇನ್ನೆರಡು ಸಿನಿಮಾಗಳು ಮಾತುಕತೆ ಹಂತದಲ್ಲಿದ್ದು, ಅದರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತಾರಂತೆ.

ಪ್ರಭಾಸ್, ದೀಪಿಕಾಪಡುಕೋಣೆ ಮೆಚ್ಚಿನ ಕಲಾವಿದರು ಆಗಿದ್ದು, ಕನ್ನಡದಲ್ಲಿ ಎಲ್ಲರನ್ನು ಇಷ್ಟಪಡುತ್ತಾರೆ. ಆಕ್ಷನ್ ಚಿತ್ರ ಸರಿಹೊಂದುವುದಿಲ್ಲ. ‘ಆರುಂಧತಿ’ಯಲ್ಲಿ ಅನುಷ್ಕಾಶೆಟ್ಟಿ ಕಾಣಿಸಿಕೊಂಡ ಪಾತ್ರ ಮಾಡುವಾಸೆ ಎಂದಿದ್ದಾರೆ ನಟಿ ಶುಭ ರಕ್ಷಾ.