ಸಿಕ್ಸ್ ಪ್ಯಾಕ್‍ನಲ್ಲಿ ಬಂದ ರಗಡ್ ನಟ ರಾಜವರ್ಧನ್
ಕಟ್ಟುಮಸ್ತು ಸ್ನಾಯುಗಳು ಹುರಿಗೊಳಿಸಿದ ದೇಹ. ಗ್ರೀಕ್ ಗಾಡ್ ಕಣ್ಮುಂದೆ ತರುವಂತಹ ಸಿಕ್ಸ್‍ಪ್ಯಾಕ್ ಆಬ್ಸ್. ತೀಕ್ಷ್ಣ ಕಣ್ಣೋಟ. ವಾಹ್.. ರಾಜವರ್ಧನ್ ಹೊಸ ಲುಕ್ ಹುಬ್ಬೇರಿಸುವಂತಿದೆ. ಅರೇ, ಬಿಚ್ಚುಗತ್ತಿ ಭರಮಣ್ಣ ನಾಯಕನಾಗಿ ಅಬ್ಬರಿಸಿದ್ದು ಇವರೇನಾ ಎಂದು ನೋಡಿದವರು ಶಾಕ್ ಆಗುವಂತೆ ಅವರ ಲುಕ್ ಬದಲಾಗಿಬಿಟ್ಟಿದೆ. ಇದೀಗ ಇವರ ಸಿಕ್ಸ್‍ಪ್ಯಾಕ್‍ನ ಖಡಕ್ ಲುಕ್ ಚಿತ್ರೋದ್ಯಮದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ
ವಿಭಿನ್ನ ಪಾತ್ರಗಳ ಮುಖಾಂತರ ಗುರುತಿಸಿಕೊಂಡ ಡಿಂಗ್ರಿ ನಾಗರಾಜ್ ಪುತ್ರ ಮ್ಯಾಸಿವ್ ಸ್ಟಾರ್ ರಾಜವರ್ಧನ್ ‘ಬಿಚ್ಚುಗತ್ತಿ’ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದರು.
ಐತಿಹಾಸಿಕ ಕಥೆಯಲ್ಲಿ ಪಾತ್ರದ ಸಲುವಾಗಿ ದೇಹವನ್ನು ಹೆಚ್ಚಿಸಿ ಕೊಂಡಿದ್ದರು. ನಂತರ ‘ಪ್ರಣಯಂ’ ‘ಹಿರಣ್ಯ’ ಮತ್ತು’ಗಜರಾಮ’ ಚಿತ್ರಗಳಲ್ಲಿ ರಾಜವರ್ಧನ್ ಅಭಿನಯಿಸಿದ್ದು, ಎಲ್ಲವೂ ಬಿಡುಗಡೆಗೆ ಸಜ್ಜಾಗುತ್ತಿವೆ. ಈಗ ರಾಜ್ ಹೊಸ ಆಕ್ಷನ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಪಾತ್ರಕ್ಕಾಗಿ ದೇಹ ದಂಡಿಸಿ ಸಿಕ್ಸ್‍ಪ್ಯಾಕ್ ಮಾಡಿಕೊಂಡು ಹುಡುಗಿಯರ ಹಾಟ್ ಪ್ರೈವೇಟ್ ಆಗಿದ್ದಾರೆ
ರಕ್ಷಿತ್ ಶೆಟ್ಟಿ, ರಚಿತಾ ರಾಮ್, ಡಾಲಿ ಧನಂಜಯ್ , ದುನಿಯಾ ಸೂರಿ ರಂತಹ ಸ್ಟಾರ್‍ಗಳ ಫಿಟ್ನೆಸ್ ಹಿಂದಿನ ಮಾಸ್ಟರ್ ಶ್ರೀನಿವಾಸ್ ಗೌಡ ರವರ ಮಾರ್ಗದರ್ಶನದಲ್ಲಿ ರಾಜವರ್ಧನ್ ಬೆವರಿಳಿಸುತ್ತಿದ್ದಾರೆ. ಬೆಳಿಗ್ಗೆ, ಸಂಜೆ ಸುಮಾರು ಎರಡು ಗಂಟೆಗಳ ಕಾಲ ಪ್ರತಿದಿನ ದೇಹವನ್ನು ದಂಡಿಸುವುದನ್ನು ಮರೆಯುವುದಿಲ್ಲ. ಪೆÇ್ರೀಟೀನ್ ಆಹಾರ ಸೇವಿಸುತ್ತಾ ದೇಹವನ್ನು ಕಲ್ಲಿನಂತೆ ಗಟ್ಟಿ ಮಾಡಿಕೊಂಡಿದ್ದಾರೆ.
ಕೇವಲ ಎಂಟು ತಿಂಗಳಲ್ಲಿ ಹೀಗೆ ಹೊಸ ಲುಕ್‍ನಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ದರ್ಶನ್, ಸುದೀಪ್, ಅವರಂತೆಯೇ ಮೈಹುರಿಗೊಳಿಸಿ ಮುಂದಿನ ಚಿತ್ರಕ್ಕಾಗಿ ಸಿದ್ಧವಾಗುತ್ತಿದ್ದಾರೆ ಭರವಸೆಯ ನಟ ರಾಜವರ್ದನ್.