Hostel Hudugaru bekagiddare Movie Trailer : Ashwini Puneeth Rajkumar Released

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೇಲರ್ : ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಿಡುಗಡೆ - CineNewsKannada.com

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೇಲರ್ :  ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಿಡುಗಡೆ

ವಾರ್ಡನ್ ಕಾಟ-ಹಾಸ್ಟೆಲ್ ಹುಡುಗರ ಆಟ..ರಮ್ಯಾ ಪಾಠ..ಸಖತ್ ಆಗಿದೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಮೊದಲ ನೋಟ. ಇದೇ ಉತ್ಸಾಹ ಮತ್ತು ಹುರುಪಿನಲ್ಲಿ ಜುಲೈ 21ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಸೆಟ್ಟೇರಿದ ದಿನದಿಂದಲೂ ಭಾರೀ ಕುತೂಹಲ ಹೆಚ್ಚಿಸಿರುವ “ಹಾಸ್ಟೆಲ್ ಹುಡುಗರು ಸಿನಿಮಾದ ಮೊದಲ ನೋಟ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‍ವುಡ್ ತಾರೆಯರು ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದರು.

ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ, ನನ್ನ ಶಿಷ್ಯದಿಂದರೇ ಮಾಡಿರುವ ಸಿನಿಮಾ. ಅರವಿಂದ್, ಪ್ರಜ್ವಲ್ ಇವರೆಲ್ಲರನ್ನೂ ಲೂಸಿಯಾ ಸಮಯದಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ತುಂಬಾ ಅದ್ಭುತ ಟೆಕ್ನಿಷಿಯನ್ಸ್. ಒಂದು ಸಿನಿಮಾದ ಕಥೆ ಇದೆ ಗೆಸ್ಟ್ ಅಪಿಯರೆನ್ಸ್ ಮಾಡ್ತೀರಾ ಅಂತಾ ಕೇಳಿದರು. ಕಥೆ ಏನೂ ಕೇಳಿಲ್ಲ. ಒಂದು ರಾತ್ರಿಯಷ್ಟೇ ಪಾತ್ರವನ್ನು ಚಿತ್ರೀಕರಿಸಲಾಯಿತು. ಪವನ್ ಇದ್ದರು. ಶೈನ್ ಇದ್ದರು, ಬಹಳ ಅದ್ಭುತವಾಗಿ ಶೂಟಿಂಗ್ ಅನುಭವ.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಒಂದು ಅದ್ಭುತ ತಂಡ. ಬೆಳೆಯುತ್ತಾ ಬೆಳೆಯುತ್ತಾ ಸಿನಿಮಾ ದೊಡ್ಡ ಸ್ಕೆಲ್ ಆಯ್ತು. 500 ಜನ ಕಲಾವಿದರನ್ನು ಕಂಪ್ಲೀಟ್ ನೈಟ್ ಸೀಕ್ವೆಲ್ ನಲ್ಲಿ ಶೂಟ್ ಮಾಡುವುದು ತುಂಬಾ ಚಾಲೆಂಜಿಂಗ್ . ಇದೇ 21ಕ್ಕೆ ಸಿನಿಮಾ ಬರ್ತಿದೆ, ಥಿಯೇಟರ್ ಗೆ ಬಂದು ಸಿನಿಮಾ ನೋಡಿ. ನೀವು ಖಂಡಿತ ಎಂಜಾಯ್ ಮಾಡ್ತೀರ. ಅದ್ಭುತ ಸಿನಿಮಾ ಮಾಡಿದ್ದಾರೆ ಎಂದರು.

ಧ್ರುವ ಸರ್ಜಾ ಮಾತನಾಡಿ, ಒಬ್ಬ ಪ್ರೇಕ್ಷಕನಾಗಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನೋಡಿದ್ದೇನೆ. ಈ ಸಿನಿಮಾ ನೋಡಿದಾಗ ನಾನು ನನ್ನ ಅಣ್ಣನನ್ನು ಮಿಸ್ ಮಾಡಿಕೊಂಡೆ. ಏಳೆಂಟು ವರ್ಷ ನಾವು ಹಾಸ್ಟೆಲ್ ನಲ್ಲಿ ಇದ್ದೆವು. ಅದನ್ನು ನೋಡಿದ ತಕ್ಷಣ ನಾವು ಹೀಗೆ ಇದ್ವಲ್ಲಾ ಅನಿಸಿತು. ನಿತಿನ್ ಅವರು ತುಂಬಾ ಚೆನ್ನಾಗಿ ಸಿನಿಮಾ ಶೂಟ್ ಮಾಡಿದ್ದಾರೆ. ನಾನು ನೋಡಿದಾಗ ರೀ ರೆಕಾರ್ಡಿಂಗ್ ಆಗಿರಲಿಲ್ಲ. ರೀ ರೆಕಾರ್ಡಿಂಗ್ ಆದ್ಮೇಲೆ ನೋಡಬೇಕೆಂಬ ಕುತೂಹಲವಿದೆ. ನಾನು ಪ್ರೀಮಿಯರ್ ಶೋ ನೋಡಲ್ಲ. ನಾನು ಫಸ್ಟ್ ಡೇ ಫಸ್ಟ್ ಶೋ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡುತ್ತೇನೆ. ಕಿರಿಕ್ ಪಾರ್ಟಿಯಂತೆ ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಲಿ ಎಂದು ಶುಭ ಹಾರೈಸಿದರು.

ರಕ್ಷಿತ್ ಶೆಟ್ಟಿ ಮಾತನಾಡಿ, ನಾನು ಈ ಪೆÇ್ರೀಗ್ರಾಂಗೆ ಗೆಸ್ಟ್ ಆಗಿ ಬಂದಿಲ್ಲ. ಯಾಕಂದ್ರೆ ನಾನು ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ. ಅಪ್ಪು ಸರ್ ಏನೇ ಶುರು ಮಾಡಿದರು. ಅದ್ಭುತ ರಿಸ್ಟಲ್ ಕೊಡುತ್ತದೆ ಎಂಬ ನಂಬಿಕೆ. ನಮ್ಮ ಪರವಃ ಸ್ಟುಡಿಯೋಸ್ ನಮ್ಮ ಆಫೀಸ್ ನ್ನು ಅವರೇ ಉದ್ಘಾಟಿಸಿದ್ದರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಫಸ್ಟ್ ಪೆÇೀಸ್ಟರ್ ಅವರೇ ಲಾಂಚ್ ಮಾಡಿದ್ದರು. ಈ ಸಿನಿಮಾವನ್ನು ನಾನು ಪ್ರೆಸೆಂಟ್ ಮಾಡಲು ತುಂಬಾ ಕಾರಣವಿದೆ. ನಾನು ಈ ಚಿತ್ರವನ್ನು ಎರಡು ಬಾರಿ ನೋಡಿದ್ದೇನೆ. 2 ಸಲ ನೋಡುವಾಗಲೂ ಅಷ್ಟೇ ಎಂಜಾಯ್ ಮಾಡಿದ್ದೇನೆ. ಸಿನಿಮಾವನ್ನು ಹಾಲಿವುಡ್ ರೇಂಜ್ ಗೆ ಶೂಟ್ ಮಾಡಲಾಗಿದೆ ಎಂದರು.

ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಮಾತನಾಡಿ, ಅಪ್ಪು ಸರ್ ಪೆÇೀಸ್ಟರ್ ಲಾಂಚ್ ಮಾಡಿಕೊಟ್ಟಿದ್ದರು. ಅಲ್ಲಿಂದಲೇ ಜರ್ನಿ ಶುರುವಾಗಿದ್ದು, ಈ ವೇದಿಕೆ ಹತ್ತಿದ್ದೇನೆ. ಆದ್ರೆ ಕೆಲಸ ಮಾಡಲು. ನಾನು ಟಿವಿ ಮಾಧ್ಯಮದಲ್ಲಿ ಕೆಲಸ ಮಾಡಿದವನು. ಈ ಚಿತ್ರ ಮಾಡಲು ಎರಡು ವರ್ಷ ಬೇಕಾಯ್ತು. ಮಳೆ, ಲಾಕ್ ಡೌನ್ ನಿಂದ ಸ್ವಲ್ಪ ಲೇಟ್ ಆಯ್ತು. ಇಷ್ಟು ದಿನ ಪೆÇ್ರೀಮೋ ಬಿಟ್ಟಿದ್ದೇವೆ. ಈಗ ಟ್ರೇಲರ್ ಬಂದಿದೆ. ಈ ಮೂವೀಗೆ 1000 ಜನ ರಂಗಭೂಮಿ ಕಲಾವಿದರನ್ನು ಬಿಟ್ಟು ಸ್ಯಾಂಡಲ್ ವುಡ್ ಇಂಡಸ್ಟ್ರೀ ಸಾಥ್ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು.

ನಿರ್ಮಾಪಕ ವರುಣ್ ಗೌಡ ಮಾತನಾಡಿ, ಜುಲೈ 21ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ದಯವಿಟ್ಟು ಎಲ್ಲರೂ ಸಪೆÇೀರ್ಟ್ ಮಾಡಿ. ಇಷ್ಟು ದಿನ ಬೆಂಬಲ ಕೊಟ್ಟ ರೀತಿ ಮುಂದೆಯೂ ನಿಮ್ಮ ಬೆಂಬಲವಿರಲಿ ಎಂದರು.

ಕಿರಿಕ್ ಮಾಡುವ ವಾರ್ಡನ್ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್ ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮೋಹಕತಾರೆ ರಮ್ಯಾ ಲೆಕ್ಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್ ಸಾಥ್ ಕೊಟ್ಟಿರುವ ಈ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ.

ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜೊತೆಗೆ ಸೇರಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದು, ಇದೇ 21 ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಚಿತ್ರದಲ್ಲಿ ಗಗನ್ ರಾಮ್ , ಅರ್ಚನಾ ಕೊಟ್ಟಿಗೆ ಸೇರಿದಂತೆ ರಂಗಭೂಮಿಯ ಪ್ರತಿಭಾವಂತರ ದಂಡೇ ಚಿತ್ರದಲ್ಲಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin