ಕಾನ್ಫಿಡದಲ್ಲಿ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ: ಹಿರಿಯ ನಟ ರಮೇಶ್ ಭಟ್ ಭಾಗಿ
ದೇಶವು ಸ್ವಾತಂತ್ರ್ಯ ಪಡೆದು 79ನೇ ಸಂವತ್ಸರಕ್ಕೆ ಮುಂದಡಿ ಇಡುವ ಶುಭಸಂದರ್ಭದಲ್ಲಿ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲರು ಲಕ್ಷ್ಮೀನಾರಾಯಣ್, ಸಿದ್ದಲಿಂಗಯ್ಯ, ರಾಜೇಂದ್ರ ಸಿಂಗ್ ಬಾಬು ಮುಂತಾದ ಅಗ್ರಗಣ್ಯ ಹಿರಿಯ ಚಲನಚಿತ್ರ ನಿರ್ದೇಶಕರು ಕಟ್ಟಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಗಾಂಧಿನಗರದಲ್ಲಿರುವ ಸಂಘದ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚಾರಣೆ ಆಚರಿಸಲಾಯಿತು.

ಹಿರಿಯ ಕಲಾವಿದರಾದ ಮತ್ತು ನಿರ್ದೇಶಕರೂ ಆದ ರಮೇಶ್ ಭಟ್ ಅವರು ಧ್ವಜಾರೋಹಣ ಮಾಡುವ ಮುಖಾಂತರ ಆಚರಿಸಲಾಯಿತು.ನಿರ್ದೇಶಕರ ಸಂಘದ ಅದ್ಯಕ್ಷ ಎನ್ನಾರ್ ಕೆ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಹಿರಿಯ ಕಿರಿಯ ಚಲನಚಿತ್ರ ನಿರ್ದೇಶಕರುಗಳು, ಕರ್ನಾಟಕ ಚಲನಚಿತ್ರ ಕಾರ್ಮಿಕರ, ತಂತ್ರಜ್ಣರ, ಕಲಾವಿದರ ಒಕ್ಕೂಟದ ನೂತನ ಅಧ್ಯಕ್ಷ ಸೋಮಶೇಖರ್ ಮತ್ತು ಪದಾಧಿಕಾರಿಗಳು ನಿರ್ದೇಶಕರ ಸಂಘದ ಉಪಾಧ್ಯಕ್ಷರಾದ ಜಗದೀಶ್ ಕೊಪ್ಪ, ಕಾರ್ಯದರ್ಶಿಗಳಾದ ಟಾಪ್ ಸ್ಟಾರ್ ರೇಣುಕುಮಾರ್, ಜಂಟಿ ಕಾರ್ಯದರ್ಶಿಗಳಾದ ಮಳವಳ್ಳಿ ಸಾಯಿಕೃಷ್ಣ, ಖಜಾಂಚಿಗಳಾದ ಆದಿತ್ಯ ಚಿಕ್ಕಣ್ಣ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಸಂಘದ ಕಛೇರಿಯಲ್ಲಿಚಲನಚಿತ್ರ ಕಾರ್ಮಿಕರ, ತಂತ್ರಜ್ಣರ, ಕಲಾವಿದರ ಒಕ್ಕೂಟಕ್ಕೆ ನೂತನವಾಗಿ ಆಯ್ಕೆ ಆಗಿರುವ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಗೌರವಿಸಸಲಾಯಿತು.

