Indrajit Lankesh to drive for Bollywood film "September 21".

“ಸೆಪ್ಟೆಂಬರ್ 21” ಬಾಲಿವುಡ್ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಚಾಲನೆ - CineNewsKannada.com

“ಸೆಪ್ಟೆಂಬರ್ 21” ಬಾಲಿವುಡ್ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಚಾಲನೆ

ಕನ್ನಡತಿ ಕರೆನ್ ಕ್ಷಿತಿ ಸುವರ್ಣ “ಸೆಪ್ಟೆಂಬರ್ 21” ಹೆಸರಿನ ಬಾಲಿವುಡ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆಲ್ಝೈಮರ್ ರೋಗಿ ಮತ್ತು ಆತನ ಆರೈಕೆ ಮಾಡುವ ನರ್ಸ್‍ವೊಬ್ಬಳ ನಡುವಿನ ಕಥೆ ಹೊಂದಿರುವ ಚಿತ್ರದ ಮುಹೂರ್ತ ನಡೆಯಿತು, ನಿರ್ದೇಶಕ ಇಂದ್ರಜಿತ್ ಲಂಕೇಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ, ಈ ಹಿಂದೆ “ಹೈಡ್ ಅಂಡ್ ಸೀಕ್” ಕಿರುಚಿತ್ರ ನಿರ್ದೇಶಿಸಿದ್ದೆ. ಕಿರುಚಿತ್ರ ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡಿತ್ತು. ಈಗ “ಸೆಪ್ಟೆಂಬರ್ 21” ಚಿತ್ರ ನಿರ್ದೇಶಿಸಿತ್ತಿದ್ದೇನೆ. ಈ ಕಥೆಯನ್ನು ಪಿ.ರಾಜಶೇಖರ್ ಮಲಯಾಳಂ ನಲ್ಲಿ ಬರೆದಿದ್ದಾರೆ. ಆಲ್ಝೈಮರ್ ರೋಗದ ಸುತ್ತಲ್ಲಿನ ಕಥಾಹಂದರ ಹೊಂದಿದೆ. ಪ್ರಿಯಾಂಕ ಉಪೇಂದ್ರ, ಪ್ರವೀಣ್ ಕುಮಾರ್ ಸಿಂಗ್ ಸಿಸೋಡಿಯಾ, ಜರೀನಾ ವಹಾಬ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದು ತಿಳಿಸಿದರು.

ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ ಇದೇ ಮೊದಲ ಬಾರಿಗೆ ಕಿರಿಯ ವಯಸ್ಸಿನ ನಿರ್ದೇಶಕಿಯ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಆಲ್ಝೈಮರ್ ರೋಗದಿಂದ ಬಳಲುತ್ತಿರುವ ರೋಗಿಯನ್ನು ಶುಶ್ರೂಷೆ ಮಾಡುವ ಕೇರ್ ಟೇಕರ್ ಪಾತ್ರ ನಿರ್ವಹಿಸಿಸುತ್ತಿದ್ದೇನೆ. ಕಮಲಾ ನನ್ನ ಪಾತ್ರದ ಹೆಸರು. ತಂದೆ ಉತ್ತರ ಪ್ರದೇಶದವರು. ಹಾಗಾಗಿ ನನಗೆ ಹಿಂದಿ ಮಾತನಾಡಲು ಹಾಗೂ ಓದಲು ಬರುತ್ತದೆ ಎಂದರು

ನಟ ಪ್ರವೀಣ್ ಸಿಂಗ್ ಸಿಸೋಡಿಯಾ ಮಾತನಾಡಿ ಚಿತ್ರದ ಕಥೆ ಚೆನ್ನಾಗಿದೆ. ಖಿನ್ನತೆಯಿಂದ ಬಳಲುತ್ತಿರುವ ಹಾಗೂ ಸ್ಮರಣಾಶಕ್ತಿ ಕಳೆದುಕೊಂಡಿರುವ 60 ವರ್ಷ ವಯಸ್ಸಿನ ರೋಗಿಯ ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಹೇಳಿದರು.

ಕನ್ನಡದ ಸಂಗೀತ ನಿರ್ದೇಶಕ ವಿನಯ್ ಚಂದ್ರ, ಛಾಯಾಗ್ರಾಹಕ ಅನಿಲ್ ಕುಮಾರ್ ಮುಂತಾದ ತಂತ್ರಜ್ಞರು ಹಾಗೂ ಕಲಾವಿದರು ಚಿತ್ರದ ಕುರಿತು ಮಾತನಾಡಿದರು.

“ಸೆಪ್ಟೆಂಬರ್ 21” ಚಿತ್ರವನ್ನು ಬೆಲ್ಜಿಯಂ ಮೂಲದ ನಿರ್ಮಾಣ ಸಂಸ್ಥೆ ಜಂಟಿ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿದೆ. ರಿಲಯನ್ಸ್ ಎಂಟರ್‍ಟೈನ್‍ಮೆಂಟ್‍ನಲ್ಲಿ ಮಾರ್ಕೆಟಿಂಗ್ ಉಪಾಧ್ಯಕ್ಷ ಅಮಿತ್ ಅವಸ್ಥಿ ಮತ್ತು “ಫಾಕ್ಸ್ ಆನ್ ಸ್ಟೇಜ್”ನ ಫ್ರೆಡ್ರಿಕ್ ಡಿ ವೋಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin