ಗಿನ್ನಿಸ್ ದಾಖಲೆಗೆ ನಾಂದಿ ಹಾಡಿದ ಜನಾರ್ದನ್ ಪಿ ಜಾನಿ ” ದೇವರ ಆಟ ಬಲ್ಲವರಾರು”
ಯುವ, ಭರವಸೆಯ ನಟ ಅರ್ಜುನ್ ರಮೇಶ್, ಸಿಂಧುಲೋಕನಾಥ್ ಪ್ರಧಾನ ಭೂಮಿಕೆಯಲ್ಲಿ ಕಾಸಿಕೊಳ್ಳುತ್ತಿರುವ “ದೇವರ ಆಟ ಬಲ್ಲವರಾರು” ಚಿತ್ರದ ಗಿನ್ನಿಸ್ ದಾಖಲೆಯ ಚಿತ್ರೀಕರಣ ಮಡಿಕೇರಿಯಲ್ಲಿ ಬರದಿಂದ ಸಾಗಿದೆ,
ಹನುಮಂತರಾಜು, ಲತಾ ರಾಗ ನಿರ್ಮಾಣದ, ಅನಿಲ್ ಜೈನ್ ಸಹ ನಿರ್ಮಾಣದ ಹಾಗೂ ಜನಾರ್ದನ್ ಪಿ ಜಾನಿ ನಿರ್ದೇಶನದಲ್ಲಿ ಅರ್ಜುನ್ ರಮೇಶ್, ಸಿಂಧೂ ಲೋಕನಾಥ್ ಮೊದಲಾದವರು ನಟಿಸುತ್ತಿರುವ “ದೇವರ ಆಟ ಬಲ್ಲವರಾರು” ಚಿತ್ರದ ಎಲ್ಲಾ ಪ್ರಕ್ರಿಯೆಗಳನ್ನು ಒಂದು ತಿಂಗಳಲ್ಲೇ ಮುಗಿಸಿ ತೆರೆಗೆ ಬರಲು ಮುಂದಾಗಿದೆ.
ಚಿತ್ರೀಕರಣ ಆರಂಭವಾದಾಗಿನಿಂದ ಸರಿಯಾಗಿ ಒಂದು ತಿಂಗಳಿಗೆ ಬಿಡುಗಡೆ ಮಾಡಿ ಗಿನ್ನಿಸ್ ದಾಖಲೆ ಮಾಡುವುದಾಗಿ ನಿರ್ದೇಶಕರು ಇತ್ತೀಚೆಗೆ ತಿಳಿಸಿದ್ದರು.
ಇದರ ಮೊದಲ ಹೆಜ್ಜೆಯಾಗಿ ಮಡಿಕೇರಿಯಲ್ಲಿ ಜೂನ್ 19 ರ ಬೆ.10ಗಂಟೆಯಿಂದ ಜೂನ್ 20ರ ರಾತ್ರಿ 10 ಗಂಟೆಯವರೆಗೂ ಸತತ 36 ಗಂಟೆಗಳ ಚಿತ್ರೀಕರಣ ನಡೆಸುತ್ತಿದ್ದಾರೆ. ವಿಶಾಲವಾದ ಜಾಗದಲ್ಲಿ 15್ಠ080 ವಿಸ್ತಾರವಾದ ಹತ್ತೊಂಭತ್ತು ಅಡಿ ಉದ್ದವಾದ ಸಟ್ ಹಾಕಲಾಗಿದೆ.
ಚೆನ್ನೈ ನ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಬಾಲಚಂದ್ರನ್ ಹಾಗೂ ತಂಡದವರು ಅದ್ದೂರಿ ಸೆಟ್ ನಿರ್ಮಾಣ ಮಾಡಿದ್ದಾರೆ.
180 ಕ್ಕೂ ಹೆಚ್ಚು ಜನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ನಿರ್ದೇಶಕ ಜನಾರ್ದನ್ ಪಿ ಜಾನಿ ತಿಳಿಸಿದ್ದಾರೆ.