"Jugal Bandi" directed by "Diwakar Dindima" releases on March 1

ಮಾರ್ಚ್ 1ಕ್ಕೆ “ದಿವಾಕರ್ ಡಿಂಡಿಮ” ನಿರ್ದೇಶನದ “ಜುಗಲ್ ಬಂದಿ” ಬಿಡುಗಡೆ - CineNewsKannada.com

ಮಾರ್ಚ್ 1ಕ್ಕೆ “ದಿವಾಕರ್ ಡಿಂಡಿಮ” ನಿರ್ದೇಶನದ “ಜುಗಲ್ ಬಂದಿ” ಬಿಡುಗಡೆ

” ಜುಗಲ್ ಬಂದಿ” ಸಿನಿಮಾ ಮೂಲಕ ಸಿನಿ ಪ್ರಿಯರನ್ನು ರಂಜಿಸಲು ಸಜ್ಜಾಗಿದ್ದಾರೆ. ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 1ರಂದು ಹಲವು ಕಥೆಗಳ ‘ಜುಗಲ್ ಬಂದಿ’ ತೆರೆಗೆ ಬರುತ್ತಿದೆ.

ನಾಲ್ಕು ಡಿಫರೆಂಟ್ ಪ್ಲಾಟ್ ಒಳಗೊಂಡ ಸಿನಿಮಾ `ಜುಗಲ್ ಬಂದಿ’.ಭಗವದ್ಗೀತೆ, ಕುರಾನ್, ಬೈಬಲ್ನಲ್ಲೂ ಬರ್ದಿಲ್ಲ ದುಡ್ಮಾಡದೆಂಗತ! ಟ್ಯಾಗ್ ಲೈನ್ ಮೂಲಕ ಕುತೂಹಲ ಕ್ರಿಯೇಟ್ ಮಾಡಿರುವ ಈ ಚಿತ್ರಕ್ಕೆ ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಜೊತೆಗೆ ತಮ್ಮ ಮೊದಲ ಸಿನಿಮಾಗೆ ತಾವೇ ಬಂಡವಾಳ ಕೂಡಾ ಹೂಡಿರುವುದು ವಿಶೇಷ.

ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್ ಒಳಗೊಂಡ ತಾರಾಬಳಗವಿದೆ. ಪ್ರದ್ಯೋತ್ತನ್ ಸಂಗೀತ ನಿರ್ದೇಶನ, ಪ್ರಸಾದ್ ಹೆಚ್ ಎಂ ಸಂಕಲನ ಈ ಚಿತ್ರಕ್ಕಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ರಿಷಿಕಾ ಫಿಲ್ಮ್ಸ್ ರಾಜ್ಯಾದ್ಯಂತ ಸಿನಿಮಾ ವಿತರಣೆ ಜವಾಬ್ದಾರಿ ಹೊತ್ತಿದ್ದು, ಅವರದ್ದೇ ಪ್ರೆಸೆಂಟ್ಸ್ ಮೂಲಕ ತೆರೆಗೆ ಬರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin