ಆರ್ ಚಂದ್ರು ತವರೂರು ಶಿಡ್ಲಘಟ್ಟದಲ್ಲಿ “ಕಬ್ಜ” ಚಿತ್ರದ ಕಮರ್ಷಿಯಲ್ ಹಾಡು ಬಿಡುಗಡೆ

ಕನ್ನಡ ಚಿತ್ರರಂಗದ ಸಧಬಿರುಚಿಯ ನಿರ್ದೇಶಕ ಆರ್.ಚಂದ್ರು ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹುಕೋಟಿ ವೆಚ್ಚದ ಫ್ಯಾನ್ ವರ್ಡ್ ಸಿನಿಮಾ “ಕಬ್ಜ” ಚಿತ್ರ ಮುಂದಿನ ತಿಂಗಳು 17 ರಂದು ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ತಮ್ಮ ಹುಟ್ಟೂರಿನಲ್ಲಿ ಆರ್ .ಚಂದ್ರು ಚಿತ್ರದ ಕಮರ್ಷಿಯಲ್ ಹಾಡು ಬಿಡುಗಡೆ ಸಮಾರಂಭವನ್ನು ಫೆ.26 ರಂದು ಹಮ್ಮಿಕೊಂಡಿದ್ದಾರೆ.

ಅದ್ದೂರಿ ಸಮಾರಂಭದಲ್ಲಿ ಲಕ್ಷಕ್ಕೂ ಅಧಿಕ ಜನ ಭಾಗಿಯಾಗುವ ಸಾಧ್ಯತೆ. ಆರ್ .ಚಂದ್ರು ಹುಟ್ಟೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹೆಮ್ಮೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಬ”.
ಆರ್ ಚಂದ್ರು ನಿರ್ದೇಶಿಸಿರುವ “ಕಬ್ಜ” ಚಿತ್ರದ ಕಮರ್ಷಿಯಲ್ ಸಾಂಗ್ ಹಾಗೂ ಜೂಟ್ ಬಾಕ್ಸ್ ಇದೇ ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಬಿಡುಗಡೆಯಾಗಲಿದೆ. ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಶಿಡ್ಲಘಟ್ಟ ಆರ್ ಚಂದ್ರು ಅವರ ತವರೂರು.ತಮ್ಮೂರಿನಲ್ಲಿ “ಕಬ್ಜ” ಚಿತ್ರದ ಅದ್ದೂರಿ ಸಮಾರಂಭ ಆಯೋಜಿಸಿರುವ ಆರ್ ಚಂದ್ರು, ಸಮಾರಂಭ ಯಶಸ್ವಿಯಾಗಿ ನಡೆಯಲು ಈಗಾಗಲೇ ತಯಾರಿ ಆರಂಭಿಸಿದ್ದಾರೆ.

ಕಲಾವಿದರ ದೊಡ್ಡ ದಂಡು ಭಾಗಿ
ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಪ್ರೇಮ್, ಶ್ರೇಯಾ ಶರಣ್ ಹಾಗೂ ಆಂದ್ರ, ತಮಿಳುನಾಡು, ಕೇರಳದಿಂದ ಸಹ ಪ್ರಮುಖ ಗಣ್ಯರು ಈ ವರ್ಣರಂಜಿತ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ.
ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವಬಹು ನಿರೀಕ್ಷಿತ “ಕಬ್ಜ” ಚಿತ್ರ ಮಾರ್ಚ್ 17 ರಂದು ತೆರೆಗೆ ಬರಲಿದೆ. ಹೀಗಾಗಲೇ ವಿಶ್ವದ 20ಕ್ಕೂ ಹೆಚ್ಚು ದೇಶಗಳಲ್ಲಿ ಚಿತ್ರ ಬಿಡುಗಡೆ ಅಲ್ಲಿನ ಜನರು ಮುಂದಾಗಿದ್ಧಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ