ಮರಳಿ ಬಂದ ಟಗರು ಪುಟ್ಟಿ
ನಟ ಪ್ರೇಮ್‍ಗೆ ಮಾನ್ವಿತಾ ಜೋಡಿ
ವಯಕ್ತಿಕ ಕಾರಣದಿಂದ ಹಲವು ದಿನಗಳಿಂದ ಚಿತ್ರರಂಗದಿಂದ ದೂರ ಉಳಿಸಿದ್ದ ಮಾನ್ವಿತಾ ಕಾಮತ್ ಅವರು ಅಥರ್ವ ಆರ್ಯ ನಿರ್ದೇಶನದ ಹೊಸ ಚಿತ್ರದಲ್ಲಿ ನೆನಪಿರಲಿ ಪ್ರೇಮ್‍ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಹೆಸರಿಡದ ಚಿತ್ರಕ್ಕೆ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಈಗಾಗಲೇ ಶೇ.30 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಮುಂದಿನ ತಿಂಗಳ ಆರಂಭದಿಂದ ಹೋರಾಂಗಣ ಚಿತ್ರೀಕರಣಕ್ಕೆ ತೆರಳಲು ನಿರ್ದೇಶಕ ಅಥರ್ವ ಆರ್ಯ ಮತ್ತು ಅವರ ತಂಡ ಸಿದ್ದತೆ ಮಾಡಿಕೊಂಡಿದೆ.
ಹೊಸ ಚಿತ್ರಕ್ಕೆ ನಟಿ ಮಾನ್ವಿತಾ ಕಾಮತ್ ಸೇರ್ಪಡೆಯಾಗಿರುವ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಅಥರ್ವ ಆರ್ಯ,ಚಿತ್ರದ ಕಥೆ ಕೇಳಿ ನಟ ಪ್ರೇಮ್ ಜೊತೆ ನಾಯಕಿಯಾಗಲು ಒಪ್ಪಿಕೊಂಡಿದ್ದಾರೆ.ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.ಅವರದು ಪ್ರಮುಖ ಪಾತ್ರ ಎಂದಿದ್ದಾರೆ.
ಚಿತ್ರಕ್ಕೆ ಸೂಕ್ತವಾದ ಶೀರ್ಷಿಕೆ ಹುಡುಕಾಟ ನಡೆದಿದೆ. ಸೂಕ್ತವಾದದ್ದು ಸಿಕ್ಕ ನಂತರ ಅದನ್ನು ರಿವೀಲ್ ಮಾಡಲಾಗುವುದು ಎಂದು ಮಾಹಿತಿ ಹಂಚಿಕೊಂಡ ಅವರು ಸಮಾನ ಮನಸ್ಕ ತಂಡ ಜೊತೆಗೂಡಿ ನಿರ್ಮಾಣ ಮಾಡುತ್ತಿರುವ ಚಿತ್ರವನ್ನು ಬೆಂಗಳೂರು,ಮೈಸೂರು ,ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆ ಚಿತ್ರೀಕರಣ ಮಾಡುವ ಉದ್ದೇಶಹೊಂದಲಾಗಿದೆ.
ಚಿತ್ರದಲ್ಲಿ ಬಾಲರಾಜವಾಡಿ, ಗಿರೀಶ್ ಜತ್ತಿ, ಮಿತ್ರ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಪ್ರೊಡಕ್ಷನ್ ನಂಬರ್ 1 ಹೆಸರಲ್ಲಿ ಚಿತ್ರದ ಚಿತ್ರೀಕರಣ ಬರದಿಂದ ಸಾಗಿದೆ.