"Palaar" is an innovative effort in Kannada cinema

“ಪಾಲಾರ್” ಕನ್ನಡ ಚಿತ್ರರಂಗದಲ್ಲಿ ವಿನೂತನ ಪ್ರಯತ್ನ - CineNewsKannada.com

“ಪಾಲಾರ್” ಕನ್ನಡ ಚಿತ್ರರಂಗದಲ್ಲಿ ವಿನೂತನ ಪ್ರಯತ್ನ

ಕನ್ನಡದ ಚಿತ್ರವೊಂದು ಬಿಡುಗಡೆಗೆ ಮುನ್ನವೇ 10ಕ್ಕೂ ಹೆಚ್ಚು ಪೇಯ್ಡ್ ಪ್ರೀಮಿಯರ್ ಶೋ ರಾಜ್ಯಾದ್ಯಂತ ಹಮ್ಮಿಕೊಂಡಿರುವುದು ಇದೇ ಮೊದಲು ಎಂದೂ ಕೂಡ ಹೇಳಲಾಗಿದೆ. ನಟಿ ವೈ.ಜಿ ಉಮಾ ಅವರ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಜೊತೆಗೆ ಜೀವಾ ನವೀನ್ ಕನ್ನಡದಲ್ಲಿ ಭರವಸೆ ಮೂಡಿದ್ದಾರೆ ಎನ್ನುವ ಮಾತುಗಳು ಪ್ರೀಮಿಯರ್ ಶೋ ಪ್ರದರ್ಶನದಲ್ಲಿ ವ್ಯಕ್ತವಾಗಿದೆ.

ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವು ವರ್ಷಗಳ ಹಿಂದೆ ನಡೆದ ನೈಜ ಘಟನೆ ಆಧಾರಿತ ಪಾಲಾರ್ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಬಿಡುಗಡೆಗೂ ಮುನ್ನ ಚಿತ್ರ ಬಾರಿ ಕುತೂಹಲ ಹುಟ್ಟು ಹಾಕಿದೆ.
ಪಾಲಾರ್ ಚಿತ್ರ ಕನ್ನಡದಲ್ಲೊಂದು ವಿನೂತನ ಪ್ರಯತ್ನ ಮತ್ತು ನೈಜತೆಗೆ ಒತ್ತು ನೀಡಿ ಚಿತ್ರೀಕರಣ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕಗೂ ಪಾತ್ರವಾಗಿದೆ. ಮೊದಲ ಪ್ರಯತ್ನದಲ್ಲಿ ಜೀವಾ ನವೀನ್ ಮನಮುಟ್ಟವ ಕಥೆಯನ್ನು ಚಿತ್ರದ ರೂಪದಲ್ಲಿ ತೆರೆಗೆ ಕಟ್ಟಿಕೊಟ್ಟಿದ್ದಾರೆ
ನೈಜ ಘಟನೆ ಆಧಾರಿತ ಚಿತ್ರ ಪಾಲಾರ್ ಗೆ ಬಿಡುಗಡೆಗೆ ಮುನ್ನವೇ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.ರಾಜ್ಯದ ಹಲವು ಕಡೆಗಲ್ಲಿ ಚಿತ್ರ ಬಿಡಯಗಡೆಯಾಗಲಿದೆ. ಸತ್ಯ ಪಿಕ್ಟರ್ಸ್ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಹೊತ್ತಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಜೀವಾ ನವೀನ್,ಚಿತ್ರ ಬಿಡುಗಡೆಗೆ ಒಂದು ತಿಂಗಳು ಮುನ್ನವೇ ರಾಜ್ಯದ ವಿವಿಧ ಭಾಗಗಳಲ್ಲಿ ಪೇಯ್ಡೆ ಪ್ರೀಮಿಯರ್ ಶೋ ಹಾಕಿ 10 ಪ್ರದರ್ಶನ ಮಾಡಿದೆಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ನೋಡಿದ ಮಂದಿ ಚಿತ್ರಮಂದಿರಕ್ಕೆ ಸ್ನೇಹಿತರು ಮತ್ತು ಕುಟುಂಬದವರನ್ನು ಕರೆತರುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಹೊಸಬರ ಚಿತ್ರಗಳು ಚಿತ್ರಮಂದಿರದಲ್ಲಿ ಹೆಚ್ಚು ದಿನ ಇರುವುದಿಲ್ಲ. ಈಗಾಗಿ ಜನರಿಗೆ ಚಿತ್ರದ ಬಗ್ಗೆ ತಿಳಿಸುವ ಉದ್ದೇಶದಿಂದ ಮತ್ತು ಚಿತ್ರಮಂದಿರದ ಕಡೆಗೆ ಜನರನ್ನು ಕರೆ ತರುವ ಉದ್ದೇಶದಿಂದಪೇಯ್ಡ್ ಪ್ರೀಮಿಯರ್ ಶೋ ಹಾಕಿಕೊಂಡಿದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಚಿತ್ರಕ್ಕೆ ಕೆ.ಆರ್. ಸೌಜನ್ಯ, ಸೌಂದರ್ಯ ಕೆ.ಆರ್ ಮತ್ತು ನವೀನ್‍ಕುಮಾರ್ ಬಾಬು ನಿರ್ಮಿಸಿದ್ದಾರೆ. ಕೋಲಾರ ಮತ್ತು ದೇವನಹಳ್ಳಿ ಭಾದಲ್ಲಿ ನಡೆದ ನೈಜಘಟನೆಗಳನ್ನು ಇಟ್ಟುಕೊಂಡು ನಿರ್ಮಾಣವಾದ ಮಹಿಳಾ ಪ್ರಧಾನ, ಹೋರಾಟದ ಕಥೆ ಇದಾಗಿದೆ.
ಸಿನಿಮಾಬಂಡಿ ಖ್ಯಾತಿಯ ಗಾಯಕಿ ವೈ.ಜಿ.ಉಮಾ ಕೋಲಾರ, ತಿಲಕ್‍ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ
ಸುಬ್ರಮಣ್ಯ ಆಚಾರ್ಯ ಸಂಗೀತ, ಆಸಿ ರೆಹಾನ್ ಛಾಯಾಗ್ರಹಣ, ವಲಿ ಕುಲಾಯಿಸ್ ಸಂಕಲನ ಈ ಚಿತ್ರಕ್ಕಿದೆ. ಹೊಸಬರ ಸಿನಿಮಾ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಠಿ ಮಾಡಲು ಮುಂದಾಗಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin