A mirror to rural society Life of Boregowda

ಗ್ರಾಮೀಣ ಸೊಗಡಿಗೆ ಕನ್ನಡಿ
ಬೋರೇಗೌಡನ ಬದುಕು - CineNewsKannada.com

ಗ್ರಾಮೀಣ ಸೊಗಡಿಗೆ ಕನ್ನಡಿಬೋರೇಗೌಡನ ಬದುಕು

ಚಿತ್ರ: ದೊಡ್ಡಹಟ್ಟಿ ಬೋರೇಗೌಡ
ನಿರ್ದೇಶನ: ಕೆ.ಎಂ ರಘು
ತಾರಾಗಣ: ಶಿವಣ್ಣ ಬೀರಹುಂಡಿ, ಗೀತಾ, ಲಾವಣ್ಯ, ಸಂಪತ್ ಮೈತ್ರೇಯಾ, ಕಲಾರತಿ ಮಹಾದೇವ್, ಕಾತ್ಯಾಯಿನಿ,ಯೋಗೇಶ್ ಮತ್ತಿತರರು
ರೇಟಿಂಗ್ : **** 4/5

2021ನೇ ಸಾಲಿನ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿರುವ ದೊಡ್ಡಹಟ್ಟಿ ಬೊರೇಗೌಡ ತೆರೆಗೆ ಬಂದಿದೆ. ಗ್ರಾಮೀಣ ಸೊಗಡಿನಲ್ಲಿ, ನೈಜತೆಗೆ ಹತ್ತಿರವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕೆ.ಎಂ ರಘು. ಗ್ರಾಮೀಣ ಸೊಗಡಿಗೆ ಕನ್ನಡಿ ಹಿಡಿದಿದ್ದಾರೆ

ಗ್ರಾಮೀಣ ಪ್ರದೇಶದಲ್ಲಿ ಜನರ ಪರದಾಟ, ಒದ್ದಾಟ, ಪಡಪಾಟಲುಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.ಅದರಲ್ಲಿಯೂ ಕಲಾವಿದರು ಸಹಜಾಭಿನಯದ ಮೂಲಕ ಮನಗೆದ್ದಿದ್ದಾರೆ.

ಇತ್ತೀಚಿನ ಚಿತ್ರಗಳ ಅಬ್ಬರ ಆರ್ಭಟದ ಮುಂದೆ ಸದ್ದಿಲ್ಲದೆ ಬಂದು ಪ್ರೇಕ್ಷಕರ ಮನ,ಹೃದಯ ತಟ್ಟುವ,ಮನಮಿಡಿಯುವ ಕಥಾಹಂದರ ಹೊಂದಿರುವ ಚಿತ್ರ “ದೊಡ್ಡಹಟ್ಟಿ ಬೊರೇಗೌಡ”. ಚಿತ್ರದ ಕ್ಲೈಮ್ಯಾಕ್ಸ್ ಹೃದಯ ಗೆದ್ದಿದೆ.

ಬೋರೇಗೌಡ (ಬೀರಹುಂಡಿ ಶಿವಣ್ಣ) ಹರಕಲು ಮನೆಯಲ್ಲಿ ಪತ್ನಿ, ಮಗನೊಂದಿಗೆ ವಾಸ ಮಾಡುವಾತ.ಆತನಿಗೊಂಡು ಸೂರು ಕಟ್ಟಿಕೊಳ್ಳಬೇಕು ಎಂದು ಇನ್ನಿಲ್ಲದ ಹರಸಾಹಸ ಮಾಡುತ್ತಾನೆ. ಗ್ರಾಮಸಭೆಯಲ್ಲಿ ತನಗೊಂದು ಮನೆ ಮಂಜೂರು ಮಾಡಿಸಿಕೊಳ್ಳಲು ಆತನ ಪರದಾಟ ಹೇಳತೀರದು.

ಗ್ರಾಮಪಂಚಾಯಿತಿಯಲ್ಲಿ ಪ್ರತಿಯೊಬ್ಬರೂ ಮನೆ ಆಸೆ ತೋರಿಸಿ ಈತನಿಂದ ಹಣ ಖರ್ಚು ಮಾಡಿಸುದು, ಇನ್ನೇನು ಮನೆ ನಿನಗೆ ಎಂದು ಬೇರೊಬ್ಬರಿಗೆ ಮನೆ ಮಂಜೂರು ಮಾಡಿಸುವುದು, ಬಡ ಬೋರೇಗೌಡ ಸೂರಿಗಾಗಿ ಒದ್ದಾಟ ಮಾಡುವ ಕ್ಷಣ ಕಲ್ಲು ಹೃದಯದವನ್ನು ಕದಡುವಂತಿದೆ. ಹಾಗೂ ಹೀಗೋ ಬೇರೊಬ್ಬರಿಗೆ ಮಂಜೂರಾದ ಮನೆಯನ್ನು ತನ್ನ ಹೆಸರಲ್ಲಿ ಕಟ್ಟಿಸಿಕೊಳ್ಳಲು ಪಡುವ ಕಷ್ಟ,ಅಷ್ಟಿಷ್ಟಲ್ಲ ಮುಂದೇನು ಎನ್ನವುದು ಚಿತ್ರದ ಕಥನ .

ನಿರ್ದೇಶಕ ರಘು, ತಿಥಿ ಚಿತ್ರದ ಮಾದರಿಯಲ್ಲಿಯೇ ಮತ್ತೊಂದು ಚಿತ್ರ ಕಟ್ಟಿಕೊಟ್ಟಿದ್ದಾರೆ.ಸಣ್ಣ ಸಣ್ಣ ಸಂಗತಿಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುಸುತ್ತಲೇ ಕಣ್ಣುಗಳನ್ನು ಒದ್ದೆ ಮಾಡಿಸಿದ್ದಾರೆ. ಇನ್ನು ಶಿವಣ್ಣ ಬೀರಹುಂಡಿ, ಗೀತಾ, ಲಾವಣ್ಯ, ಸಂಪತ್ ಮೈತ್ರೇಯಾ, ಮತ್ತಿತರು ಪಾತ್ರವನ್ನು ಜೀವಿಸಿ ಬಟ್ಟಿದ್ದರೆ. ಇನ್ನು ಕಲಾರತಿ ಮಹಾದೇವ್, ಕಾತ್ಯಾಯಿನಿ,ಯೋಗೇಶ್ ಕೂಡ ಪಾತ್ರಕ್ಕೆ ಜೀವ ತುಂಬಿದಿದ್ದಾರೆ.

ವೀನಸ್ ರಾಜ್ ಛಾಯಾಗ್ರಹಣ , ಹರ್ಷವರ್ಧನ್ ರಾಜ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಅದರಲ್ಲಿಯೂ ಹಿನ್ನೆಲೆ ಸಂಗೀತದಲ್ಲಿ ಬಳಸಿರುವ ಹಾಡುಗಳು ಸನ್ನಿವೇಶಕ್ಕೆ ತಕ್ಕಹಾಗಿ ಮನಮುಟ್ಟುತ್ತವೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin