ಕೃತಿಚೌರ್ಯದ ಸುತ್ತ “ಕದ್ದಚಿತ್ರ” : ವಿಭಿನ್ನ ಅವತಾರದಲ್ಲಿ ನಟ ವಿಜಯ್ ರಾಘವೇಂದ್ರ
ಕೃತಿಚೌರ್ಯದ ಕುರಿತು ನಿರ್ದೇಶಕ ಸುಹಾಸ್ ಕೃಷ್ಣ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ “ ಕದ್ದಚಿತ್ರ” ತೆರೆಗೆ ಬರಲು ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 25 ರಂದು ತೆರೆಗೆ ಬರಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದ ಸೆಪ್ಟಂಬರ್ 8ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
“ಕದ್ದಚಿತ್ರ”ದಲ್ಲಿ ನಟ ವಿಜಯ್ ರಾಘವೇಂದ್ರ ಅವರು ಇದುವರೆಗೂ ಕಾಣಿಸಿದ ವಿಭಿನ್ನ ಶೈಲಿಯ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಬರಹಗಾರನಾಗಿ ಹಿಂದೆಂದೂ ಕಂಡಿರದ ರೀತಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಚಿತ್ರದ ಟ್ರೈಲರ್‍ನಲ್ಲಿ ಬಿಂಬಿತವಾಗಿದ್ದು ಸಹಜವಾಗಿಯೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ.
ಇತ್ತೀಚೆಗೆ ಪತ್ನಿ ಸ್ಪಂದನ ಅವರ ಅಕಾಲಿಕ ಅಗಲಿಕೆಯಿಂದ ಹೊರಗೆ ಬಾರದ ನಟ ವಿಜಯ್ ರಾಘವೇಂದ್ರ ಅವರು, ತಾನು ನೋವಿನಲ್ಲಿದ್ದರೂ ನಿರ್ಮಾಪಕರು ಮತ್ತು ಚಿತ್ರತಂಡಕ್ಕೆ ಕಷ್ಟ ಆಗಬಾರದು ಎನ್ನುವ ಉದ್ದೇಶದಿಂದ ಚಿತ್ರತಂಡದ ಜೊತೆಯಾಗಿದ್ದಾರೆ. ಈ ಮೂಲಕ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ತಾವೊಬ್ಬ ಪ್ರಬುದ್ಧ ನಟ ಎನ್ನುವುದನ್ನು ಸಾರಿ ಹೇಳಿ ಇತರರಿಗೆ ಮಾದರಿಯಾಗಿದ್ದಾರೆ.
ನಿರ್ದೇಶಕ ಪವನ್ ಒಡೆಯರ್ ಚಿತ್ರತಂಡಕ್ಕೆ ಶುಭಹಾರೈಸಿ. ಈ ವೇಳೆ ನಟ ವಿಜಯ್ ರಾಘವೇಂದ್ರ ಅವರು ಚಿತ್ರತಂಡದ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ, ಮತ್ತು ಅವರು ನೋವಿನಲ್ಲಿದ್ದರೂ ಸ್ಪಂದಿಸುವ ಗುಣಕ್ಕೆ ಸಲಾಂ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ನಟ ವಿಜಯ್ ರಾಘವೇಂದ್ರ ಮಾತನಾಡಿ, ನಿರ್ದೇಶಕ ವಿಶ್ವಾಸ್ ಕೃಷ್ಣ ಮತ್ತು ಕದ್ದ ಚಿತ್ರತಂಡ ನನ್ನ ಬಳಗ, ಬಹಳ ವಿಶ್ವಾಸದಿಂದ ಪಾತ್ರ ಕೊಟ್ಟಿದ್ದರೆ. ಕನಸು ಕಟ್ಟಿಕೊಂಡು ನಿಮಗೂ ಒಂದು ಪಾತ್ರ ಇದೆ ಮಾಡಬೇಕು ಎಂದರು. ಕಥೆ ಕೇಳಿ ನನ್ನಿಂದ ಈ ಪಾತ್ರ ಮಾಡಲು ಆಗಲ್ಲ ಅಂದೆ. ಅವರು ಇಟ್ಟು ಪ್ರೀತಿ, ವಿಶ್ವಾಸಕ್ಕೆ ನೀವೇ ಮಾಡಬೇಕು ಎಂದಾಗ ಇಲ್ಲ ಎನ್ನಲು ಆಗಲಿಲ್ಲ, ವಿಶ್ವಾಸವಿಟ್ಟು ಪಾತ್ರ ನೀಡಲು ಮುಂದಾದಾಗ ಅವರ ಹೆಗಲ ಮೇಲೆ ಸಂಪೂರ್ಣ ಜವಾಬ್ದಾರಿ ಹಾಕಿ ಚಿತ್ರದಲ್ಲಿ ನಟಿಸಲು ಒಪ್ಪಿದೆ. ಚಿತ್ರ ಬಿಡುಗಡೆಯಾದ ನಂತರ ಮಾತನಾಡಲು ಸಾಕಷ್ಟು ವಿಷಯ ಇದೆ ಎನ್ನುತ್ತಲೇ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡು ಮಾತೇ ಹೊರಡೆ ಗದ್ಗರಿತರಾದರು.
ನನ್ನ ಕಷ್ಟದ ಸಮಯದಲ್ಲಿ ಮಾಧ್ಯಮದ ಮಂದಿ ತಾಯಿ ಸ್ಥಾನದಲ್ಲಿ ನಿಂತು ಕಾಪಾಡಿದ್ದೀರಾ, ನೀವು ನನ್ನ ಕುಟುಂಬದಲ್ಲಿ ಸದಸ್ಯರಾಗಿದ್ದಿರೋ ಇಲ್ಲವೋ ಗೊತ್ತಿಲ್ಲ, ನಿಮ್ಮ ಕುಟುಂಬದಲ್ಲಿ ನನ್ನನ್ನೂ ಒಬ್ಬನಾಗಿ ಮಾಡಿಕೊಳ್ಳಿ, ನನ್ನ ಮಗ ಶೌರ್ಯ ಮತ್ತು ನನ್ನನ್ನು ಕೈ ಹಿಡಿದು ಮುಂದೆ ಎಂದಿನಂತೆ ಕರೆದುಕೊಂಡು ಹೋಗಿ ಎಂದು ಮತ್ತೆ ಭಾವುಕರಾದರು.
ನಿರ್ಮಾಪಕರ ಜೊತೆ ನಿಲ್ಲುವುದು ಪ್ರತಿಯೊಬ್ಬ ಕಲಾವಿದರ ಕರ್ತವ್ಯ. ಅವಕಾಶ. ದುಡ್ಡು, ಅನುಕೂಲತೆ , ಹೆಸರು ಕೊಡ್ತಾರೆ, ಇಷ್ಟೆಲ್ಲಾ ಕೊಡ್ತಾರೆ ಅಂದ ಮೇಲೆ ನಿರ್ಮಾಪಕರ ಜೊತೆ ನಿಂತು ಚಿತ್ರದ ಪ್ರಚಾರ ಮಾಡುವುದು ನಮ್ಮ ಕರ್ತವ್ಯ . ಅದನ್ನು ಬಿಟ್ಟು ಬೇರೆ ಏನನ್ನೋ ದೊಡ್ಡ ಸಾಧನೆ ಮಾಡಿಲ್ಲ. ನಿಮ್ಮಲ್ಲೆರ ಬೆಂಬಲ ಇರಲಿ ಎಂದು ಕೇಳಿಕೊಂಡರು.
ನಿರ್ದೇಶಕ ಸುಹಾಸ್ ಕೃಷ್ಣ ಮಾಹಿತಿ ನೀಡಿ, ಅಪರೂಪದ ಕತೆಯನ್ನು ಚಿತ್ರರೂಪದಲ್ಲಿ ತೆರೆಯ ಮೇಲೆ ಕಟ್ಟಿಕೊಡುತ್ತಿದ್ದೇವೆ. ಕದ್ದಚಿತ್ರ ಕೃತಿ ಚೌರ್ಯ ಮತ್ತು ಬರಹಗಾರನ ಬದುಕು, ಅವನ ಜೀವನ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ. ಜೊತೆಗೆ ಕ್ರೈಮ್ ಕಥಾನಕವೂ ಚಿತ್ರದಲ್ಲಿದೆ. ವಿ ಜಯ್ ರಾಘವೇಂದ್ರ ಅವರು ಇದುವರೆಗೂ ಎಲ್ಲಿಯೂ ಕಂಡು ಕೇಳರಿಯದ ಪಾತ್ರ ಮಾಡಿದ್ದಾರೆ. ವಯನಾಡು,ಬೆಂಗಳೂರು ಸೇರಿದಂತೆ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರತಂಡಕ್ಕೆ ಎಲ್ಲರ ಬೆಂಬಲ ಸಹಕಾರವಿರಲಿ ಎಂದು ಕೇಳಿಕೊಂಡರು
ನಟಿ ನಮ್ರತಾ ಸುರೇಂದ್ರ ನಾಥ್ ಮಾತನಾಡಿ ವಿಭಿನ್ನವಾದ ಚಿತ್ರ, ನಿರ್ದೇಶಕ ಸುಹಾಸ್ ಕೃತಿ ಚೌರ್ಹ, ಬರಗನಾಗರ ಜೀವನದ ,ತಿರುವುಗಳು ಇರುವ ಚಿತ್ರ. ಮುಖ್ಯವಾದ ಪಾತ್ರ ಮಾಡಿದ್ದೇನೆ.ಪರ್ಸಲ್ ಚಿತ್ರ ಚೆನ್ನಾಗಿ ಮೂಡಿಬಂದಿದೆ.ಸೆಪ್ಟಂಬರ್ 8 ರಂದು ಬಿಡುಗಡೆ ಆಗುತ್ತಿದೆ ಸಹಕಾರವಿರಲಿ ಎಂದರು.
ನಿರ್ಮಾಪಕ ದಿವ್ಯ ಸಂದೀಪ್ ಮಾಹಿತಿ ನೀಡಿ ಪತಿ ಸಂದೀಪ್‍ಗೆ ಸಿನಿಮಾ ಹುಚ್ಚು , ಚಿಕ್ಕ ಹುಡುಗನಿಂದ ಕಾಲೇಜಿನಲ್ಲಿಯೂ ಹೆಚ್ಚು ಸಿನಿಮಾ ಮಾಡ್ತಾ ಇದ್ದರು. ಅವರ ಫ್ಯಾಶನ್ ನಿಂದ ಸಿನಿಮಾ ಮಾಡಿದ್ದಾರೆ. ಸುಹಾಸ್ ಕೃಷ್ಣ ಸ್ನೇಹಿತ. ಹೀಗಾಗಿ ಚಿತ್ರ ನಿರ್ಮಾಣ ಮಾಡಿದ್ದೇವೆ.ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.
ಚಿತ್ರದಲ್ಲಿ ಪ್ರಕಾಶಕನ ಪಾತ್ರ ಮಾಡಿರುವ ರಾಘು ಶಿವಮೊಗ್ಗ ಕಲಾವಿದರಾದ ಸುಜಿತ್ ಸುಪ್ರಭಾ,,ವಿನಯ್ ರೆಡ್ಡಿ, ಸಂಕಲನಕಾರ ಕ್ರೇಜಿಮೈಂಡ್ಸ್ ಶ್ರೀ, ಬೇಬಿ ಆರಾದ್ಯ, ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು