Vinod Prabhakar's New Avatar in "Fighter" : Teaser Appreciated Again

“ಫೈಟರ್ ” ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಅವತಾರ : ಟೀಸರ್ ಗೆ ಬಾರಿ ಮೆಚ್ಚುಗೆ - CineNewsKannada.com

“ಫೈಟರ್ ” ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಅವತಾರ : ಟೀಸರ್ ಗೆ ಬಾರಿ ಮೆಚ್ಚುಗೆ

ಮರಿಟೈಗರ್ ವಿನೋದ್ ಪ್ರಭಾಕರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ “ ಫೈಟರ್” ಚಿತ್ರ ತಂಡ ಬಹಳ ದಿನಗಳ ನಂತರ ಪ್ರತ್ಯಕ್ಷವಾಗಿದೆ. ಈ ಬಾರಿ ಸದ್ದು ಮಾಡುವುದು ಚಿತ್ರತಂಡದ ಉದ್ದೇಶ.

ಕೋವಿಡ್ ಸೋಂಕು ಕಾಣಿಸಿಕೊಳ್ಳುವುದಕ್ಕಿಂತ ಮುಂಚೆ ಆರಂಭವಾಗಿದ್ದ ಚಿತ್ರ ಕಾರಣಾಂತರದಿಂದ ವಿಳಂಬವಾಗಿತ್ತು. ಇದೀಗ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆ ಹಂತಕ್ಕೆ ಬಂದಿದೆ. ಅಕ್ಟೋಬರ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ನಟ ವಿನೋದ್ ಪ್ರಭಾಕರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಾಲ್ಕು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೊಂದು ಅವತಾರದಲ್ಲಿಯೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯರಾಗಿ ಲೇಖಾ ಚಂದ್ರ ಮತ್ತು ಪಾವನಾ ಗೌಡ ಕಾಣಿಸಿಕೊಂಡಿದ್ದು ನೂತನ್ ಉಮೇಶ್ ಬಹು ನಿರೀಕ್ಷಿತ ಚಿತ್ರಕ್ಕೆ ಆಕ್ಷನ್ ಕಟ್ ಹೇಳೀದ್ದು, ಕೆ. ಸೋಮಶೇಖರ್ ಬಂಡವಾಳ ಹಾಕಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಬಹುನಿರೀಕ್ಷಿತ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಲು “ ಪೈಟರ್” ತುದಿಗಾಲ ಮೇಲೆ ನಿಂತಿದೆ.

ಎರಡು ಮೂರು ವರ್ಷದ ಬಳಿಕ “ಫೈಟರ್” ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು ಟೀಸರ್ ಬಾರಿ ಸದ್ದು ಮಾಡಿದ್ದಾರೆ. ಒದೊಂದು ಸನ್ನಿವೇಶವೂ ಚಿತ್ರದ ಬಗೆಗಿನ ಕುತೂಹಲವನ್ನು ಹೆಚ್ಚು ಮಾಡಿದೆ.ಚಿತ್ರದ ಟೀಸರ್ ಅನ್ನು ನಿರ್ಮಾಪಕರ ತಂದೆ ಬಿಡುಗಡೆ ಮಾಡಿ ಶುಭಹಾರೈಸಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ನೂತನ್ ಉಮೇಶ್, ಅಭಿಮಾನಿಗಳಿಂದ ಶೀರ್ಷಿಕೆ ಬಿಡುಗಡೆ ಮಾಡಲಾಗಿತ್ತು. ಡಿ ಬಾಸ್ ದರ್ಶನ್ ಅವರು ಮುಹೂರ್ತಕ್ಕೆ ಬಂದು ಹರಸಿದ್ದರು. ಚಿತ್ರ ಸಂಬಂಧಗಳ ಮೇಲೆ ನಿಂತಿರುವ ಹಿನ್ನೆಲೆಯಲ್ಲಿ ನಿರ್ಮಾಪಕರ ತಂದೆ ಅವರ ಬಳಿಯಿಂದ ಟೀಸರ್ ಬಿಡುಗಡೆ ಮಾಡಿಸಲಾಗಿದೆ. ಚಿತ್ರ ಹಲವು ಅಂಶಗಳನ್ನು ಹೊಂದಿದ್ದು ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸುವುದು ಗ್ಯಾರಂಟಿ ಎಂದರು,

ನಟ ವಿನೋದ್ ಪ್ರಭಾಕರ್ ಮಾತನಾಡಿ, ಚಿತ್ರದಲ್ಲಿ ನನ್ನದು ಮೋಹಕ್ ಎನ್ನುವ ಪಾತ್ರ. ಒಳ್ಳೆಯ ಕಾರಣಕ್ಕಾಗಿ ಹೋರಾಡುವ ವ್ಯಕ್ತಿ. ಅದು ಯಾವ ಕಾರಣಕ್ಕೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಅಕ್ಟೋಬರ್‍ನಲ್ಲಿ ತೆರೆಗೆ ತರುವ ಉದ್ದೇಶವಿದೆ. ಚಿತ್ರದಲ್ಲಿ ಹಿರಿಯ ನಟಿ ನಿರೋಷ ಅವರು ಅಮ್ಮನ ಪಾತ್ರ ಮಾಡಿದ್ದಾರೆ.ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆ ಉತ್ತಮವಾಗಿ ಮೂಡಿ ಬಂದಿದೆ.ಹರಸಿ ಹಾರೈಸಿ ಎಂದು ಕೇಳಿಕೊಂಡರು.

ನಿರ್ಮಾಪಕ ಕೆ.ಸೋಮಶೇಖರ್ ಮಾತನಾಡಿ ಎಲ್ಲಾ ಚಿತ್ರಗಳಿಗೆ ನೀಡಿದ ಸಹಕಾರ ನಮ್ಮ ಚಿತ್ರಕ್ಕೂ ನೀಡಿ, ಹರಸಿ ಎಂದರು.

ನಟಿ ಲೇಖಾ ಚಂದ್ರ ಮಾತನಾಡಿ ಒಳ್ಳೆಯ ಪಾತ್ರವನ್ನು ತಂಡ ನೀಡಿದೆ. ಚಿತ್ರ ಬಿಡುಗಡೆಯಾದ ಮೇಲೆ ಎಲ್ಲರ ಮನಸ್ಸಿನಲ್ಲಿ ಉಳಿಯಲಿದೆ ಎಂದು ಹೇಳಿದರು.

ಮತ್ತೊಬ್ಬ ನಟಿ ಪವಾನಾ ಗೌಡ ಹಳ್ಳಿ ಹುಡುಗಿಯ ಪಾತ್ರ. ಆದರೂ ಚಿತ್ರದಲ್ಲಿ ಚೆನ್ನಾಗಿಯೇ ತೋರಿಸಿದ್ದಾರೆ, ನಟ ವಿನೋದ್ ಸಾರ್ ಅವರ ಜೊತೆಗೆ ಪಾತ್ರ ಮಾಡಿದ ಅನುಭವ ಚೆನ್ನಾಗಿತ್ತು ಎಂದರು.

ಹಿರಿಯ ನಟಿ ನಿರೋಷಾ ಮಾತನಾಡಿ, ಬಹಳ ವರ್ಷಗಳ ನಂತರ ಕನ್ನಡಕ್ಕೆ ಬಂದಿದ್ದೇನೆ. ಒಳ್ಳೆಯ ಪಾತ್ರ ಸಿಕ್ಕಿದೆ. ಮುಂದಿನ ಬಾರಿ ಸಂಪೂರ್ಣ ಕನ್ನಡದಲ್ಲಿಯೇ ಮಾತನಾಡುವೆ. ಕನ್ನಡ ಚಿತ್ರರಂಗ ಆರಂಭದಲ್ಲಿ ಬೆಳೆಸಿದೆ. ಈ ಬಗ್ಗೆ ಕೃತಜ್ಞತೆ ಇದೆ ಎಂದು ಹೇಳಿದರು.

ಕನ್ನಡಕ್ಕೆ ಲೇಟ್ ಆಗಿ ಬಂದರೂ ಲೇಟೆಸ್ಟ್ ಆಗಿ ಬಂದಿದ್ದೇನೆ. ನಟ ವಿನೋದ್ ಪ್ರಭಾಕರ್ ಸೇರಿದಂತೆ ಕನ್ನಡದಲ್ಲಿ ಹೆಚ್ಚು ಹೆಚ್ಚು ಚಿತ್ರ ಮಾಡುವ ಆಸೆ ವ್ಯಕ್ತಪಡಿಸಿದರು. ಅಲ್ಲದೆ ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಕನ್ನಡದಲ್ಲಿ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

ರಾಜ್ ದೀಪಕ್ ಶೆಟ್ಟಿ ಚಿತ್ರದಲ್ಲಿ ಖಳನಟನ ಪಾತ್ರ ಮಾಡಿದ್ದೇನೆ. ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರೀಕರಣದ ಸೆಟ್‍ನಲ್ಲಿ ವಿನೋದ್ ಪ್ರಭಾಕರ್ ಅವರ ಸಹಕಾರ ಮರೆಯಲು ಆಗಲ್ಲ ಎಂದರು.

ಚಿತ್ರಕ್ಕೆ ಸಂಗೀತ ನೀಡಿರುವ ಗುರುಕಿರಣ್, ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಎಲ್ಲರಿಗೂ ಇಷ್ಟವಾಗಲಿದೆ, ಹಿರಿಯ ನಟಿ ನಿರೋಷ ಅವರೊಂದಿಗೆ ಸುಮಾರು 28 ವರ್ಷಗಳ ಹಿಂದೆ ಧಾರಾವಾಹಿಯಲ್ಲಿ ಅವರ ತಮ್ಮನ ಪಾತ್ರ ಮಾಡಿದ್ದೆ. ಈಗಲೂ ಅವರು ಹಾಗೆ ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತಿತರರ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin