"Kamal Sridevi" Murder Mystery Film revolving around 7 characters: Eye-catching poster

“ಕಮಲ್ ಶ್ರೀದೇವಿ” 7 ಪಾತ್ರಗಳ ಸುತ್ತ ಸಾಗುವ ಮರ್ಡರಿ ಮಿಸ್ಟ್ರಿ ಚಿತ್ರ : ಗಮನ ಸೆಳೆದ ಪೋಸ್ಟರ್ - CineNewsKannada.com

“ಕಮಲ್ ಶ್ರೀದೇವಿ” 7 ಪಾತ್ರಗಳ ಸುತ್ತ ಸಾಗುವ ಮರ್ಡರಿ ಮಿಸ್ಟ್ರಿ ಚಿತ್ರ : ಗಮನ ಸೆಳೆದ ಪೋಸ್ಟರ್

ಹ್ಯಾಪಿ ಬರ್ತೆ ಡೇ , ಬೆಂಗಳೂರು ಬಾಯ್ಸ್ ಚಿತ್ರಗಳ ಬಳಿಕ ಯುವ ನಟ ಸಚಿನ್ ಚಲುವರಾಯಸ್ವಾಮಿ ಅಭಿನಯದ ” ಕಮಲ್ ಶ್ರೀದೇವಿ” ಚಿತ್ರ ಸದ್ದಿಲ್ಲದೆ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು ಶೀರ್ಷಿಕೆ ಮತ್ತು‌ ಪೋಸ್ಟರ್ ಮೂಲಕ ಗಮನ ಸೆಳೆದಿದೆ.

ಗಜರಾಮ ಚಿತ್ರದ ಬಳಿಕ ಎರಡನೇ ಬಾರಿಗೆ ಸುನೀಲ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಿ.ಕೆ ಧನಲಕ್ಷ್ಮಿ ಅವರ ಜೊತೆ ನಟ ರಾಜವರ್ಧನ್ ಸಹ ನಿರ್ಮಾಣದಲ್ಲಿ ಕೈಜೋಡಿಸುವ ಜೊತೆಗೆ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಪಾತ್ರಗಳ ಪರಿಚಯ ಮಾಡುವ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಈ ವೇಳೆ ನಾಯಕ ನಟ ಸಚಿನ್ ಚಲುವರಾಯಸ್ವಾಮಿ ಮಾತನಾಡಿ, ಕಮಲ್ ಶ್ರೀದೇವಿ ಚಿತ್ರಕ್ಕೂ ಕಮಲ್ ಹಾಸನ್ ಗೂ ಯಾವುದೇ ಸಂಬಂದ ಇಲ್ಲ. ಎರಡು ವರ್ಷದ ಹಿಂದೆ ಶೀರ್ಷಿಕೆ ನೋಂದಣಿ ಮಾಡಿಸಿದ್ದೆವು. ರಾಜ್ ವರ್ಧನ್ ಚಿತ್ರ ನಿರ್ಮಾಣದಲ್ಲಿ ಸಹಕಾರ ನೀಡಿದ್ದಾರೆ. ಎಂ.ಎಸ್ ಉಮೇಶ್, ಕಿಶೋರ್, ರಮೇಶ್ ಇಂದಿರಾ, ರಾಘು ಶಿವಮೊಗ್ಗ, ಮಿತ್ರಾ, ಸಂಗೀತ ಭಟ್ ಸೇರಿದಂತೆ ಮತ್ತಿತರು ಕಾಣಿಸಿಕೊಂಡಿದ್ದಾರೆ‌ ಎಂದರು.

ಕಮಲ್, ಶ್ರೀದೇವಿ ಅನ್ನುವುದು ವ್ಯಕ್ತಿಯ ಹೆಸರು. ನಟ ಕಮಲ್ ಹಾಸನ್ ಅವರಿಗೂ ಇದಕ್ಕೂ ಸಂಬಂಧವಿಲ್ಲ. ಕಮಲ್ ಎನ್ನುವುದು ಸಹಜವಾದ ಹೆಸರು. ಕಂಟೆಟ್ ಆಧಾರಿತ ಚಿತ್ರ ಶೇಕಡಾ 70 ರಷ್ಟು ಚಿತ್ರೀಕರಣ ಮಾಡಲಾಗಿದೆ. ಮೈಸೂರಿನಲ್ಲಿ ಶೆಡೂಲ್ಡ್ ಬಾಕಿ ಇದೆ. ಕೊಲೆ ನಡೆಯುತ್ತದೆ ಅದರ ಸುತ್ತ ನಡೆಯುವ ಕಥೆ. ಚಿತ್ರದಲ್ಲಿ ನಾನು ಸಿನಿಮಾದಲ್ಲಿ ನಿರ್ದೇಶಕನಾಗಿದ್ದೇನೆ. ಮೂರು ನಾಲ್ಕು ತಿಂಗಳಲ್ಲಿ ಚಿತ್ರ ತೆರೆಗೆ ತರುವ ಉದ್ದೇಶವಿದೆ ಎಂದು ಮಾಹಿತಿ ಹಂಚಿಕೊಂಡರು.

ಚಿತ್ರದ ಕ್ರಿಯೇಟಿವ್ ಹೆಡ್ ಹಾಗು ಸಹ ನಿರ್ಮಾಪಕ ರಾಜ್ ವರ್ಧನ್ ಮಾತನಾಡಿ ‌ನಟ ಸಚಿನ್ ಮನಸ್ಸು ಮಾಡಿದ್ದರೆ ದೊಡ್ಡ ಬ್ಯಾನರ್ ಗೆ ಅವಕಾಶ ಕೊಡಬಹುದಿತ್ತು. ಚಿತ್ರ ಚೆನ್ನಾಗಿ ಮೂಡಿಬಂದಿದೆ. 2025 ರಲ್ಲಿ ಅತಿದೊಡ್ಡ ಕಂಟೆಂಟು ಸಿನಿಮಾ ಆಗಲಿದೆ. ಮಮ್ಮಿ ಚಿತ್ರದ ನಿರ್ದೇಶಕ ಲೋಹಿತ್ ನನಗೆ ಹೇಳಿದ ಕಥೆ, ಸಚಿನ್ ಅವರು ಮಾಡಿದರೆ ಚೆನ್ನ ಅಂದು ಸಿನಿಮಾ ಮಾಡಿದ್ದೇವೆ. ಗೊಂಬೆಗಳ ಲವ್ ಚಿತ್ರದ ನಿರ್ದೇಶಕರು ಕಮಲ್ ಶ್ರೀದೇವಿ ಶೀರ್ಷಿಕೆ ನೀಡಿದವರು ಎಂದರು.

ಗಜರಾಮ ಚಿತ್ರದ ಬಳಿಕ ನಿರ್ದೇಶಕ ಸುನೀಲ್ ಕುಮಾರ್ ಕೆಲಸ ಮೆಚ್ಚಿಕೊಂಡು ಸಿನಿಮಾ ನೀಡಲಾಯಿತು‌ 7 ಪಾತ್ರಗಳು 7 ಪ್ರಾಣಿಗಳಾಗಿ ಪ್ರತಿಬಿಂಬಿಸುತ್ತೆ. ಇಡೀ ಚಿತ್ರದ ಕಥೆ ಒಂದು ಪೋಸ್ಟರ್ ನಲ್ಲಿದೆ. ನಾಯಕ- ನಾಯಕ ಪೋಟೋ ಹಾಕದೆ ಪೋಸ್ಟರ್ ಮೂಲಕವೇ ಗಮನ ಸೆಳೆದಿದೆ. ನಿರ್ದೇಶಕರು, ಪೋಲೀಸ್ ಪಾತ್ರ, ಎಟಿಎಮ್ ವಾಚ್ ಮನ್ ಪಾತ್ರ ಬರುತ್ತವೆ. ಎಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ,. ಎಲ್ಲಾ ಪಾತ್ರಗಳು ವಿಭಿನ್ನವಾಗಿ ಮೂಡಿ ಬಂದಿವೆ ಎಂದರು ಹೇಳಿದರು.


ನಿರ್ದೇಶಕ ಸುನೀಲ್ ಕುಮಾರ್ ಮಾತನಾಡಿ ತಂಡ ನಂಬಿಕೆ ಇಟ್ಟು ಅವಕಾಶ ನೀಡಿದ್ದು ಉಳಿಸಿಕೊಂಡಿದ್ದೇನೆ. ಪ್ರತಿಯೊಬ್ಬ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶೆಡೂಲ್ಡ್ ಬಾಕಿ ಇದೆ. ಅದು ಮುಗಿದ ಬಳಿಕ ಬಿಡುಗಡೆ ಬಗ್ಗೆ ದಿನಾಂಕ ಪ್ರಕಟಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

ಮರ್ಡರಿ‌ ಮಿಸ್ಟ್ರಿ ಕಥೆ. ಚಿತ್ರಕಥೆ ಮಾಡುವಾಗ ಕೆಲವು ಪ್ರಕಣಗಳ ಅಧ್ಯಯನ ಮಾಡಲಾಗಿದೆ. ಕೊನೆ ತನಕ ಯಾರೂ ಊಹೆ ಮಾಡದ ರೀತಿ ಚಿತ್ರವನ್ನು ಪ್ರೇಪಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸಲಿದೆ ಎಂದರು..

ಹಿರಿಯ ಕಲಾವಿದ ಎಂ.ಎಸ್ ಉಮೇಶ್ ಮಾತನಾಡಿ ಮರ್ಡರ್‌ ಮಿಸ್ಟ್ರಿ ಚಿತ್ರ ಕುತೂಹಲ ಕೆರಳಿಸಿದೆ. ಮೊದಲಿನಿಂದ ಆಮೆ ಜೊತೆ ಸ್ಪರ್ದೇ ಮಾಡಿದ್ದೇನೆ. ಚಿತ್ರದಲ್ಲಿ ಎಟಿಎಂ ನಲ್ಲಿ ಕೆಲಸ ಮಾಡುವ ವಾಚ್ ಮನ್, ಪಾತ್ರಕ್ಕಾಗಿ ಒಂದು ತಿಂಗಳ ಮುಂಚೆಯೇ ಮಾಹಿತಿ ನೀಡಿದ್ದರು. ಚಿತ್ರದಲ್ಲಿ ನಟಿಸಿದ ಅಷ್ಟೂ ದಿನವೂ ಅಚ್ಚುಕಟ್ಟಾಗಿ ನೋಡಿಕೊಂಡರು. ಪ್ರತಿಯೊಂದು ಸನ್ನಿವೇಶದಲ್ಲಿ ಮಾತಿಗಿಂತ ಹೆಚ್ಚಾಗಿ ಮುಖದ ಭಾವನೆಯೇ ಹೆಚ್ಚಾಗಿದೆ ಎಂದು ಹೇಳಿದರು

ಹಿರಿಯ ಕಲಾವಿದ ಮಿತ್ರ ಮಾತನಾಡಿ ಪಾತ್ರ ಕೇಳಿ ಆಮೆ, ಗೋಸುಂಬೆ, ಗೂಬೆ ಕರಿ‌ಬೆಕ್ಕು ಪಾತ್ರ ಮಾಡಲಾ ಎನ್ನುವ ಕುತೂಹಲ ಹೆಚ್ಚಿತ್ತು. ಒಳ್ಳೆಯ ಪಾತ್ರ ಸಿಕ್ಕಿದೆ. ಜೊತೆಗೆ ಕಲಾವಿದನ್ನು ನೋಡಿಕೊಂಡು ಪರಿ ಮೆಚ್ಚುಗೆ ಅರ್ಹ. ಇಂತಹ ತಂಡ ಸಿಕ್ಕರೆ ಬಹುತೇಕ ಚಿತ್ರತಂಡಗಳಿಗೆ ಅನುಕೂಲವಾಗಲಿದೆ ಎಂದರು.

ಕಲಾವಿದ ರಾಘ ಶಿವಮೊಗ್ಗ ಮಾತನಾಡಿ ಚಿತ್ರದಲ್ಲಿ ಪೊಲೀಸ್ ಪಾತ್ರ ,ಜಿಮ್ ಮಾಡುವಾಗ ಸಿಕ್ಕ ಪಾತ್ರ ಎಂದು ಹೇಳಿದರು

ಚಿತ್ರದಲ್ಲಿ ನಟಿಸಿರುವ ಪ್ರವೀಣ್ ಜೈನ್, ಕರಣ್ ಆರ್ಯನ್, ಕಾರ್ತಿಕ್, ಅಕ್ಷಿತಾ ಬೋಪಯ್ಯ ಸೇರಿದಂತೆ ಮತ್ತಿತರು ಮಾಹಿತಿ ಹಂಚಿಕೊಂಡರು

ಛಾಯಾಗ್ರಾಹಕ ನಾಗೇಶ್ ಆಚಾರ್ಯ, ಸಂಗೀತ ನಿರ್ದೇಶಕ ಕೀರ್ತನ್ ಸೇರಿದಂತೆ ಮತ್ತಿತರರು ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin